Monday, February 14, 2011

ಉತ್ಪಾದನಾಂಶ

ಉತ್ಪಾದನೆಗೆ ಬೇಕಾಗುವ ಪದಾರ್ಥಗಳು ಮತ್ತು ಸೇವೆಗಳನ್ನೆಲ್ಲ ಉತ್ಪಾದನಾಂಶವೆಂದು ಕರೆಯುತ್ತೇವೆ. ಇಂತಹ ಉತ್ಪಾದನಾಂಶಗಳಲ್ಲಿ ಪ್ರಾಥಮಿಕವದವುಗಳು - ನೆಲ, ಮಾನವ ಶ್ರಮ, ಮತ್ತು ಬಂಡವಾಳ ಆಧಾರಿತ ಸರುಕು ಸಾಮಗ್ರಿಗಳು ಮತ್ತು ಯಂತ್ರಗಳು.

ನೆಲವೆಂದರೆ ಕೇವಲ ಭೂಮಿಮಾತ್ರವಲ್ಲ, ಅದರಲ್ಲಿ ಬರುವ ನೈಸರ್ಗಿಕ ಸಂಪನ್ಮೂಲಗಳು ಸೇರಿರುತ್ತವೆ - ಇದಕ್ಕೆ ಪ್ರತಿಯಾಗಿ ನಾವು ಸರಿಯಾದ ಗುತ್ತಿಗೆ ನೀಡಬೇಕಾಗುತ್ತದೆ, ಅಂತೆಯೇ ಮಾನವ ಶ್ರಮಕ್ಕೆ ಸಂಬಳ ಮತ್ತು ಬಂಡವಾಳಕ್ಕೆ ಬಡ್ಡಿಯನ್ನು ನೀಡಬೇಕಾಗುತ್ತದೆ. ಯಾವುದೇ ವ್ಯವಹಾರದ ಆಧಾರವಾಗಿರುವ ಇವುಗಳು, ಕೇವಲ ಪೂರಕವಾಗಿದ್ದು, ತಾವೇ, ಯಾವುದೇ ಕಾರಣಕ್ಕೂ ಪರಿವರ್ತನೆ ಹೊಂದುವುದಿಲ್ಲ - ಆದ್ದರಿಂದಲೇ ಇವುಗಳನ್ನು ಪ್ರಾಥಮಿಕ ಉತ್ಪಾದನಾಂಶ ಎನ್ನುತ್ತೇವೆ.

ಇವುಗಳಲ್ಲಿ ನೆಲದ ಉಪಯೋಗ ಸ್ಥೂಲವಗಿರುತ್ತದೆ , ಆದರೆ ಮಾನವ ಶ್ರಮ ಮತ್ತು ಬಂಡವಾಳ ಸಕ್ರಿಯವಾಗಿರುತ್ತದೆ, ಮಾನವರನ್ನು ಮತ್ತು ಯಂತ್ರಗಳು ಮುಂತಾದವನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸ ಬಹುದು ಆದರೆ ನೆಲಕ್ಕೆ ಇಂತಹ ಸವಲತ್ತಿಲ್ಲ, ಆದ್ದರಿಂದಲೇ ಇದನ್ನು ಸ್ಥೂಲವೆಂದು ಪರಿಗಣಿಸುತ್ತೇವೆ.

ಇಂತಹ ಉತ್ಪಾದನಾಂಶಗಳನ್ನು ಕುರಿತ ಪ್ರಮುಖ ದ್ವಂದ್ವವೊಂದಿದೆ - ಶ್ರಮ ಮತ್ತು ಬಂಡವಾಳ ಒಂದನ್ನು ಇನ್ನೊಂದಾಗಿ ಬದಲಾಯಿಸಬಹುದು - ಹೀಗಿರುವಾಗ, ದಕ್ಷವಾದ ನಿರ್ಧಾರ ತೆಗೆದುಕೊಂಡು, ಮುನ್ನಡೆಸಬೇಕಾಗುತ್ತದೆ. ಇದನ್ನು ಅಳತೆಮಾಡುವುದಕ್ಕೆ ಪ್ರಮಾಣಳತೆ ಪ್ರತಿ ಕಾರ್ಮಿಕರ ಮೇಲೆ ಹೂಡುವ ಬಂಡವಾಳ. - ಇದರಂತೆ ಮಾನವ ಶ್ರಮ ಮತ್ತು ಬಂಡವಾಳ ಸರಿಯಾದ ಪ್ರಮಾಣದಲ್ಲಿರತಕ್ಕದ್ದು.

ಇದರಲ್ಲಿ ವ್ಯತ್ಯಾಸ ಕಂಡಲ್ಲಿ ವ್ಯವಹಾರದ ಸಾಮರ್ಥ್ಯ ಏರುಪೇರಾಗುವ ಸಾದ್ಯತೆ ಹೆಚ್ಚು. ಅಂತೆಯೇ ಸರಿಯಾದ ನಿರ್ಧಾರತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದುದು. ಇಂತಹ ನಿರ್ಧಾರವು ಯಾವುದೇ ಒಂದು ಉತ್ಪಾದನಾಂಶಕ್ಕೆ ಸೀಮಿತಗೊಳಿಸದೆ, ಸರಕಾರ, ವಾಣಿಜ್ಯ, ಪರಿಸರ, ಮುಂತಾದವನ್ನು ಲೆಕ್ಕಿಸಿ ನಿರ್ಧರಿಸಬೇಕು.

ಇಂದಿನ ಆಂಗ್ಲ ಅಂಕಣ:http://somanagement.blogspot.com/2011/02/factors-of-production.html

No comments:

Post a Comment