ನಮಸ್ಕಾರ,
ವ್ಯವಸ್ಥಾ ಪ್ರಬಂಧದ (Management) ಈ ಅಂಕಣಗಳ ಶ್ರೇಣಿಯಲ್ಲಿ ಮುಂದುವರೆಯುವ ಮುನ್ನ, ಒಂದು ಹಿನ್ನೋಟ ಅಗತ್ಯವೆನಿಸಿತು ಹಾಗಾಗಿ ಈ ವಿಶೇಷ ಅಂಕಣವನ್ನು ಇಲ್ಲಿ ಸೇರಿಸಿದ್ದೇನೆ. ನಾವು ಕಲಿತದ್ದನ್ನು ಪುನರಾವರ್ತಿಸಿ ಯಥಾದೃಶ್ಯ ರೂಪಣ ನೀಡುವುದೇ ಇದರ ಉದ್ದೇಶ.
ಇಲ್ಲಿಯವರೆಗೆ, ವ್ಯವಸ್ಥಾ ಪ್ರಬಂಧವನ್ನು ಜಟಿಲ ನಿರ್ಧಾರಗಳನ್ನು ತೆಗುದುಕೊಳ್ಳುವ ಕಾರ್ಯ ಎಂದು ತಿಳಿದು, ಮುನ್ನಡೆಯುತ್ತ ವ್ಯವಹಾರ ಪ್ರತಿಕೃತಿಯು ಹೇಗೆ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಜೋಡಿಸುವುದೆಂದು ಅರಿತುಕೊಂಡೆವು. ವ್ಯವಹಾರ ಪ್ರತಿಕೃತಿಯ ಸಫಲತೆಯಲ್ಲಿ ವ್ಯವಹರಾಂಗಗಳು ಬಹು ಮುಖ್ಯಪಾತ್ರ ವಹಿಸುತ್ತವೆ, ಇದರಂತೆಯೇ ಉತ್ಪನ್ನಾಂಶಗಳು ಮತ್ತು ಅವುಗಳ ರೂಪರೇಶೆಗಳ ಸರಿಯಾದ ತಿಳುವಳಿಕೆ, ನಿರ್ಧಾರ ತೆಗೆದುಕೊಳ್ಳುವ ಕಾರ್ಯದಲ್ಲಿ ತುಂಬಾ ಸಹಾಯಕವಾಗುವುದು.
ನೀವು ಗಮನಿಸಿರಬಹುದು, ಈ ಅಂಕಣಗಳಲ್ಲಿ ನಾನು ಪಠ್ಯಕ್ರಮದಲ್ಲಿರುವಂತೆ ಪ್ರತಿ ವಿಷಯವನ್ನು ಒಂದೊಂದಾಗಿ ತಿಳಿಸದೆ, ಆ ವಿಷಯದ ಉಪಯೋಗ ಮತ್ತು ಅದನ್ನು ಉಪಯೋಗಿಸಿ ನಿರ್ಧಾರ ಮಾಡುವುದರ ಉದ್ದೇಶದಿಂದ ಈ ವ್ಯತ್ಯಾಸವನ್ನು ಅಳವಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ಒಂದೊಂದಾಗಿ ವ್ಯವಸ್ಥಾ ಪ್ರಬಂಧದ ಸೊಗಸನ್ನು ಬಿಚ್ಚಿಡುವ ಪ್ರಯತ್ನದಲ್ಲಿ ನಿರತನಾಗುವೇ.
ನಿಮ್ಮ ಪತ್ರಗಳು ಮತ್ತು ಇತರೆ ಸಂಪರ್ಕದಿಂದ ನನಗೆ ಪ್ರೋತ್ಸಹಿಸಿರೋದನ್ನು ನೋಡಿ ನನ್ನ ಹುಮ್ಮಸ್ಸು, ಉತ್ಸಾಹ ಇಮ್ಮಡಿಯಾಗಿದೆ. ಧನ್ಯವಾದಗಳು. ಮುಂದಿನ ವಾರ ಸಿಗೋಣ. - ಸಚ್ಚಿ
No comments:
Post a Comment