Sunday, February 20, 2011

ಮಾಹಿತಿ ವೈದೃಶ್ಯ

ಇತ್ತೀಚಿಗೆ, ನನ್ನ ಸ್ನೇಹಿತನೊಂದಿಗೆ ಒಂದು "ಸೆಕೆಂಡ್ ಹ್ಯಾಂಡ್ ಕಾರ್" ವಿಚಾರಿಸಲು ಹೊರಡುವ ಮುನ್ನ ಒಬ್ಬರನ್ನು ವಿಚಾರಿಸಿದಾಗ ಅವರು, "ಮಾರುತಿ ಟ್ರು ವ್ಯಾಲ್ಯು" ಗೆ ಹೋಗಿ ಅಂತ ಸಲಹೆ ನೀಡಿದರು. ಯಾಕಿರಬಹುದೆಂದು ಯೋಚನೆ ಮಾಡಿದಾಗ ಈ ಕೆಳಗಿನ ತಿಳುವಳಿಕೆ ಮೂಡಿದ್ದು.

೧೯೭೦ ಯಲ್ಲಿ ಜೋರ್ಜ್ ಅಕ್ರೆಲೋಫ್ ಎನ್ನುವ ಅರ್ಥಶಾಸ್ತ್ರಜ್ಞ, ಒಂದು ಸಿದ್ಧಾಂತವನ್ನು ನಮ್ಮ ಮುಂದಿರಿಸಿದ, ಈ ಸಿದ್ಧಾಂತವು ಅವನಿಗೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ೨೦೦೧ ರಲ್ಲಿ ದೊರಕಿಸಿತು.ಈ ಸಿದ್ಧಾಂತವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ, ಮತ್ತು ವ್ಯವಹಾರದಲ್ಲಿ ಕಾಣಬಹುದು.

ಈ ಮೇಲ್ಕಂಡ ಸನ್ನಿವೇಶವನ್ನು ಮೆಲುಕು ಹಾಕುತ್ತಿದ್ದ ನನಗೆ ಅರ್ಥವಾದದ್ದು ಹೀಗೆ - ಸೆಕೆಂಡ್ ಹ್ಯಾಂಡ್ ಕಾರ್ ಮಾರಲು ಇಚ್ಛಿಸುವ ಜನರು ಹಲವಾರು ಇರುತ್ತಾರೆ, ವ್ಯವಹಾರಕ್ಕೆಂದು ಬರುವ ಕಾರುಗಳೆಲ್ಲವು ಚೆನ್ನಾಗಿರುತ್ತವೆ ಅಂತೇನಿಲ್ಲ, ಕೆಲವು ಉತ್ತಮವಾಗಿದ್ದರೆ ಇನ್ನು ಕೆಲವು ಕಳಪೆ ಮಟ್ಟದಾಗಿರುತ್ತವೆ. ಒಟ್ಟಿಗೆ ಸಾವಿರಾರು ಕಾರುಗಳಿದ್ದಲ್ಲಿ ಇವೆರಡನ್ನೂ ಹೇಗೆ ವಿಂಗಡಿಸಬಹುದು? ಕಾರುಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದಲ್ಲಿ, ಕಳಪೆ ಕಾರುಗಳಿರಬಹುದೆಂದು ನಾವು ಹೆಚ್ಚು ಬೆಲೆ ನೀಡಲು ತಯಾರಿರುವುದಿಲ್ಲ, ಹಾಗಾಗಿ ಒಳ್ಳೆಯ ಕಾರುಗಳು ಮಾರುಕಟ್ಟೆಗೆ ಬರುವುದಿಲ್ಲ. ಇದರಿಂದ ನಮ್ಮ ಭರವಸೆ ಕುಗ್ಗುತ್ತಲೇ ಇರುತ್ತದೆ.

ಇಂತಹ ಸಂದರ್ಭದಲ್ಲಿ ಒಳ್ಳೆಯ ಕಾರುಗಳನ್ನು ಗುರುತಿಸಲು ಹೆಚ್ಚು ಮಾಹಿತಿ ನೀಡ ಬೇಕಾಗುತ್ತದೆ. ಈ ಮಾಹಿತಿಯನ್ನು "ಮಾರುತಿ ಟ್ರು ವ್ಯಾಲ್ಯು" ಎನ್ನುವ ನಾಮ ಪತಾಕೆಯಿಂದ ತಿಳಿಯಬಹುದು.ಇದನ್ನು "ಸಿಗ್ನಲ್" ಎಂದು ತಿಳಿಯಬಹುದು. ಇದು, ಈ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಹುದು.

ಮಾಹಿತಿ ವೈದೃಶ್ಯದ ಅತ್ಯಂತ ಹೆಚ್ಚಿನ ಪರಿಣಾಮವನ್ನು ವಿಮೆಯ ಕ್ಷೇತ್ರದಲ್ಲಿ ಕಾಣಬಹುದು, ಆದರೆ ಈ ಸಮಸ್ಯೆ ಎಲ್ಲ ವ್ಯವಹಾರಗಳಲ್ಲೂ ನೋಡಬಹುದು - ತಂಪು ಪಾನೀಯದಿಂದ ಹಿಡಿದು ಕೆಲಸಕ್ಕೆ ನಡೆಯುವ ಸಂದರ್ಶನದಲ್ಲೂ ನೋಡಬಹುದು. ನಿರ್ಧರ ತೆಗೆದುಕೊಳ್ಳುವಲ್ಲಿ ಪ್ರಬಂಧಕರು ಖಡ್ಡಾಯವಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

No comments:

Post a Comment