ವ್ಯವಹಾರ ಪ್ರತಿಕೃತಿಯ ಮುಂಚಿನ ಅಂಕಣದಲ್ಲಿ, ನಾವು ಉದಾಹರಣೆಗಳನ್ನು ನಿಡುವುದಾಗಿ ಹೇಳಿದ್ದೆವು. ಈ ಶ್ರೇಣಿಯಲ್ಲಿ ಇದು ಮೊದಲನೆಯದು.
ಸರ್ವೇ ಸಾಮನ್ಯವಾಗಿ ನಾವು ಗಡ್ಡವನ್ನು ತೆಗೆಯಲು ಉಪಯೊಗಿಸುವ "ರೇಜ಼ರ್ ಮತ್ತು ಬ್ಲೇಡನ್ನು" ಕೂಲಂಕುಷವಾಗಿ ನೊಡಿದಾಗ, ಅದರ ಹಿಂದಿನ ಆಲೋಚನೆಯನ್ನು ಅರ್ಥೈಸಿಕೊಳ್ಳುವುದು ಸುಲಭವಾಗುತ್ತದೆ.
ಒಂದುಬಾರಿ ರೇಜ಼ರನ್ನು ಕೊಂಡುಕೊಂಡರೆ ಮತ್ತೆ ನಾವು ಅದೇ ರೇಜ಼ರ್ ಗೆ ಬ್ಲೇಡ್ ಮಾತ್ರ ಕೊಳ್ಳುವುದು ಸಾಕಾಗುತ್ತದೆ. ಇದರ ಹಿಂದೆ ಯೋಚನೆಯನ್ನು ತಿಳಿದುಕೊಳ್ಳುವುದು ಮುಖ್ಯ. ನಾವು ಕೇವಲ ಒಂದೇ ಬಾರಿ "ಯುಸ್ ಅಂಡ್ ಥ್ರೊ" ರೇಜ಼ರ್ ಉಪಯೋಗಿಸಿದರೆ ಒಂದೇ ಬಾರಿಗೆ ಹಣ ಒಟ್ಟು ಮಾಡಬಹುದು, ಅದೇ ರೇಜ಼ರಿಗೆ ಬ್ಲೇಡ್ ಕೊಂಡುಕೊಂಡು ಬದಲಿಸುವ ಅವಕಾಶ ನೀಡಿದರೆ, ಕೇವಲ ಮೊದಲ ಬಾರಿ ಮಾತ್ರವಲ್ಲ ಅದು ಮೊಂಡಾಗಿ ಬ್ಲೇಡ್ ಬದಲಾಯಿಸುವ ಪ್ರತೀ ಬಾರಿಯು ಕಂಪನಿಗೆ ಆದಾಯವಾಗುತ್ತಲೇ ಇರುತ್ತದೆ.
ಇದೇ ಇಂತಹ ವ್ಯವಹಾರಗಳ ಪ್ರತಿಕೃತಿ ಯಾಗಿರುತ್ತದೆ. ಈ ಪ್ರತಿಕೃತಿಗೆ ಗಾಳಕ್ಕೆ ಹೊಲಿಸಬಹುದು ಆದ್ದರಿಂದ ಇದಕ್ಕೆ "ಬೈಟ್ ಅಂಡ್ ಹುಕ್" ಬಿಸಿನೆಸ್ ಮೊಡೆಲ್ ಎಂದು ಕರೆಯುತ್ತಾರೆ.
No comments:
Post a Comment