ಉತ್ಪನ್ನಾಂಶ ಮೇಲಿನ ಅಂಕಣದಲ್ಲಿ ನಾವು ಬಂಡವಾಳದ ಪ್ರಾಮುಖ್ಯತೆಯನ್ನು ತಿಳಿದುಕೊಂಡೆವು. ಇದರಂತೆ ಪ್ರತಿಯೊಂದು ಉತ್ಪನ್ನಾಂಶಕ್ಕೂ ಹಣಕಾಸಿನ ವ್ಯವಸ್ಥೆ ಮಾಡುವುದು ಬಹು ಮುಖ್ಯ. ಇಂತಹ ಬಂಡವಾಳವನ್ನು ನಾವು ಕೆಳಕಂಡ ರೀತಿಯಲ್ಲಿ ಒಟ್ಟುಗೂಡಿಸಬಹುದು.
* ನನ್ನಲ್ಲಿರುವ ಹಣವನ್ನು ವ್ಯವಹಾರದಲ್ಲಿ ಬಂಡವಾಳವನ್ನಾಗಿ ಹಾಕಿ, ವ್ಯವಹಾರದಿಂದ ಬರುವ ಲಾಭವನ್ನು ನನ್ನದಾಗಿಸಿಕೊಳ್ಳಬಹುದು.
* ನನ್ನಲ್ಲಿರುವ ಹಣ ಸಾಕಾಗದಿದ್ದಲ್ಲಿ, ನನ್ನ ಮಿತ್ರರು ಮತ್ತು ಸಂಬಂಧಿಗಳಲ್ಲಿ ಕೇಳಿ ಪಡೆದು ನಂತರ ವ್ಯವಹಾರದ ಆದಾಯದಿಂದ ಲಾಭ ಪಡೆದು ಅದನ್ನು ಇವರಲ್ಲಿ ಹಂಚಬಹುದು.
* ಬ್ಯಾಂಕಿನಿಂದ ಸಾಲಪಡೆದು, ಅದನ್ನು ಬಂಡವಾಳವಾಗಿ ವ್ಯವಹಾರದಲ್ಲಿ ಹಾಕಿ, ಬ್ಯಾಂಕಿಗೆ ಬಡ್ದಿಯನ್ನು ನೀಡಿ ಉಳಿದ ಲಾಭವನ್ನು ನನ್ನದಾಗಿದಿರಿಸಬಹುದು.
* ಜನಸಾಮಾನ್ಯರಿಂದ ಹಣಪಡೆದು ಅವರಿಗೆ ಪತ್ರವನ್ನು ಭರವಸೆಗೆ ನೀಡಿ,(ಶೇರ್) ಆದಾಯದಿಂದ ಬರುವ ಲಾಭವನ್ನು ಇವರೆಲ್ಲರೊಂದಿಗೆ ಹಂಚಬಹುದು.
ಈ ಹಿನ್ನಲೆಯಲ್ಲಿ ನಾವು ತಿಳಿಯುವುದೆನೆಂದರೆ, ಯಾವುದೆ ವ್ಯವಹಾರವು ಅದರಲ್ಲಿಟ್ಟ ಬಂಡವಾಳವು ಭೂತಗನ್ನಡಿಯಲ್ಲಿ ಕಾಣುವಂತೆ ಹಿಗ್ಗಿಸಿ ಹಿಂತಿರುವಿಸುವುವು ಬಹುಮುಖ್ಯ. ಈ ಬಂಡವಾಳ ಯಾವುದೇ ವ್ಯವಹಾರಕ್ಕಾಗಿರಬಹುದು ಅಥವಾ ವ್ಯವಹಾರದಲ್ಲಿಯ ಹೊಸ ಉತ್ಪನ್ನವಾಗಿರಬಹುದು.
ಬಂಡವಾಳವನ್ನು ಯಾವುದರಲ್ಲಿ ಹಾಕುವುದು ಎಂದು ನಿರ್ಧರಿಸುವುದು ಬಹು ಕಠಿಣವಾದುದು. ಎಲ್ಲಾ ಬಂಡವಾಳ ಹೂಡುವ ಅವಕಾಶಗಳನ್ನು ಪೂರ್ತಿಯಾಗಿ ನೋಡಿ ನಂತರ ನಿರ್ಧರಿಸಲು, ಒಂದು ಸಮಾನಂತರವಾದ ಪ್ರಮಾಣವನ್ನು ಕಂಡುಕೊಳುವುದು ಮುಖ್ಯ. ಇವೆಲ್ಲಾ ಅವಕಾಶಗಳಿಂದ ಬರುವ ಬಂಡವಾಳದ ವೃಧ್ಧಿಯನ್ನು ಗಮನಿಸಿ ನಂತರ ನಿರ್ಧಾರ ಮಾಡಬೇಕು.
ಬಂಡವಾಳದ ವೃಧ್ಧಿಯನ್ನು ಹೇಗೆ ಕಂಡುಹಿಡಿಯುವುದು ಎಂದು ಮುಂದಿನ ಅಂಕಣದಲ್ಲಿ ನೊಡೋಣ.
No comments:
Post a Comment