ವ್ಯವಹಾರಗಳು ದಿನಂಪ್ರತಿ ಪರಿವರ್ತನೆಯ ಸವಾಲನ್ನು ಎದಿರುಸುತ್ತಲೇ ಇರುತ್ತದೆ. ವ್ಯವಹಾರಗಳು ಪರಿವರ್ತನೆಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ನೋಡಿದರೂ, ಸಾಕಷ್ಟು ಬಾರಿ ಪರಿವರ್ತನೆಯು ನಮ್ಮ ಕಲ್ಪನಾ ಶಕ್ತಿಗೂ ಮೀರುವುದು ಸಹಜ. ಈ ಪರಿವರ್ತನೆಯನ್ನು ನಿಭಾಯಿಸುವುದು ಇಂದಿನ ಮ್ಯಾನೇಜರ್ ಗಳ ಪ್ರಮುಖ ಕಾರ್ಯಗಳಲ್ಲಿ ಒಂದು.
ಈ ಪರಿಯ ಪರಿವರ್ತನೆಯು ವ್ಯವಹಾರಗಳು ಸದಾ ನವಿನತೆಯನ್ನು ಸ್ವೀಕರಿಸಬೇಕಾಗುತ್ತದೆ. ಕಣ್ಣಿಗೆ ಕಾಣುವ ಪರಿವರ್ತನೆಯನ್ನು ಮೀರಿ, ಕಾಣದ ಮುಂಬರುವ ಪರಿವರ್ತನೆಗೆಗೂ ಸದಾಸಿದ್ಧರಾಗಿರಬೇಕು. ಯಾವ ವ್ಯವಹಾರವು ಹೊರಗಿಂದ ಪರಿವರ್ತನೆಗಾಗಿ ಕಾಯದೆ, ತಾವೇ ಮುಂದುವರೆದು ಪರಿವರ್ತನೆಯ ಮೂಲವಾದಲ್ಲಿ ಆ ವ್ಯವಹಾರವು ಖಚಿತವಾಗಿ ಸ್ಪರ್ಧಿಗಳಿಗಿಂತ ಮುಂದಾಗುವುದು. ಆದ್ದರಿಂದ ವ್ಯವಹಾರಗಳು ಸದಾ ಪರಿವರ್ತನೆಯನ್ನು ಗೆಲ್ಲಲು ಹೊಸತನ್ನು ತಮ್ಮದಾಗಿಸಿಕೊಳ್ಳಬೇಕು.
ನಾವೀನ್ಯವನ್ನು ತನ್ನದಾಗಿಸಿಕೊಂಡ "ಡೆಲ್" ಕಂಪನಿಯು ವಿಶ್ವದಲ್ಲೆ ಅತ್ಯಂತ ವೇಗವಾಗಿ ಗಣಕಯಂತ್ರವನ್ನು ತನ್ನ ಗ್ರಾಹಕರಿಗೆ ತಲುಪಿಸ ಬಲ್ಲದು. ಅಂತೆಯೇ, ಪರಿವರ್ತನೆಯನ್ನು ಅತೀ ಶೀಘ್ರದಲ್ಲಿ ತಿಳಿದುಕೊಂಡು ಅದಕ್ಕೆ ತಕ್ಕ ನಾವೀನ್ಯವನ್ನು ತಿಳಿದ "ಆಪಲ್" ಇಂದು ಜಾಣತನದ-ಚಲನವಾಣಿಗಳ ಸ್ಪರ್ಧೆಯಲ್ಲಿ ಪ್ರಥಮವಾಗಿದೆ. ಇಂತಹ ಹಲವಾರು ಉದಾಹರಣೆಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಯಾವ ವ್ಯವಹಾರೊದ್ಯಮವು ನಾವೀನ್ಯ ಮತ್ತು ಪರಿವರ್ತನೆಯನ್ನು ತನ್ನದಾಗಿಸಿಕೊಳ್ಳದೆ ಇರುವುದೋ ಅವುಗಳು ಸಾಧಾರಣವಾಗಿ ಉಳಿದ ವ್ಯವಹಾರಗಳಿಗಿಂತ ಮುಂಚಿತವಾಗಿ ಬಿದ್ದುಹೋದದ್ದನ್ನು ಕಂಡಿದ್ದೇವೆ.
ಪರಿವರ್ತನೆಯ ಈ ವ್ಯವಹಾರದ ನವಯುಗದಲ್ಲಿ ಅತ್ಯಂತ ನಾವೀನ್ಯವನ್ನುಳ್ಳ ವ್ಯವಹಾರವೋಂದೇ ಬೆಳೆಯಬಲ್ಲದು - ಇಂತಹ ಪರಿಸರದಲ್ಲಿ ಸೂಕ್ತ ನಿರ್ಧಾರತೆಗೆದುಕೊಳ್ಳುವ ಮ್ಯಾನೇಜರ್ ಗಳ ಜವಾಬ್ದಾರಿ ಇನ್ನೂ ಎರುವುವು.
ಆಂಗ್ಲ ಅಂಕಣ:
No comments:
Post a Comment