Pages

Tuesday, March 1, 2011

ಬೇಡಿಕೆ ಮತ್ತು ಪೂರೈಕೆ ಚರ್ಚೆ - ೩

ಬೇಡಿಕೆ ಮತ್ತು ಪೂರೈಕೆಯ ಈ ಮುಂಚಿನ ಅಂಕಣದಲ್ಲಿ ನಾವು ಸಮಾನಾಂತರ ಬೆಲೆಯು ಹೇಗೆ ನಿಶ್ಚಯವಾಗುವುದು ಎಂದು ತಿಳಿದುಕೊಂಡೆವು. ಈ ಸಮಾನಾಂತರ ಬೆಲೆಯು ಬೇಡಿಕೆಯ ವ್ಯತ್ಯಾಸ ಕಂಡಾಗ ಹೇಗೆ ವರ್ತಿಸುವುದೆಂದು ಅರ್ಥೈಸಿಕೊಳ್ಳುವುದು ಈ ಅಂಕಣದ ಗುರಿ. ಇದಕ್ಕಾಗಿ ಈ ಕೆಳಗಿನ ಉದಾಹರಣೆಯೊಂದಿಗೆ ಅರ್ಥೈಸಿಕೊಳ್ಳೋಣ

ಕಳೆದಬಾರಿಯ ಉದಾಹರಣೆಯಂತೆಯೆ ಈ ಬಾರಿಯೂ ನಿಂಬೇಹಣ್ಣನ್ನು ಹುಡುಕುತ್ತಾ ಹೋದ ನನಗೆ, ಕೇವಲ ಓರ್ವ ನಿಂಬೆ ಮಾರುತ್ತಿರುವ ವರ್ತಕನು ಸಿಕ್ಕಿದನು. ಈ ಬಾರಿ ಒಂದು ನಿಂಬೆಗೆ ರೂ ೪ ಎಂದು ಹೆಳಿದಾಗ ಅದನ್ನು ಚರ್ಚಿಸುವ ಮುನ್ನ ಇನ್ನೋರ್ವ ಗಿರಾಕಿಯು ಆಗಮಿಸಿದನು. ಈ ಪರಿವರ್ತನೆಯನ್ನು ಕಂಡ ವರ್ತಕನು ರೂ ೪ ಅನ್ನು ಮೇಲೇರಿಸಿ ರೂ ೫ ಎಂದ. ಗಿರಕಿಯು ರೂ ೪.೫೦ ಕ್ಕೆ ಕೇಳಿ ಕೊಂಡುಕೊಂಡು ಹೊರಟೆಬಿಟ್ಟ. ನಾನು ಕಮ್ಮಿಗೆ ಪ್ರಯತ್ನಿಸುವುದರಲ್ಲಿ ನನಗೆ ನಿಂಬೇಹಣ್ಣು ಸಿಗದೇಹೋಯಿತು. ಇದು ನನ್ನ ದಡ್ಡತನವಲ್ಲ ಕೇವಲ ವರ್ತಕನ ಜಾಣ್ಮೆ ಮತ್ತು ಪೈಪೋಟಿಯು ಕಾರಣವಾಗಿದೆ.

ಇದರ, ಅಡಿಯಲ್ಲಿಯೆ ಬೇಡಿಕೆಯ ಇನ್ನೊಂದು ನಿಯಮವನ್ನು ತಿಳಿಯಬಹುದು - ಬೇಡಿಕೆ ಹೆಚ್ಚಾಗಿ ಪೂರೈಕೆಯು ಸ್ತಿರವಾಗಿದ್ದಲ್ಲಿ, ಸಮಾನಾಂತರ ಬೆಲೆಯು ಹೆಚ್ಚುತ್ತದೆ, ಅಂತೆಯೇ, ಆ ಬೆಲೆಗೆ ಮಾರುವ ಸಾಮಗ್ರಿಯೂ ಎರುವುವು (ಹೆಚ್ಚು ಲಾಭ ಸಿಗುವಾಗ ಏಕೆ ಬಿಡಬೇಕು?).

No comments:

Post a Comment