Pages

Wednesday, March 2, 2011

ವ್ಯವಹಾರ ಪ್ರತಿಕೃತಿ - ೩

ಈ ಹಿಂದಿನ "ಬೈಟ್ ಅಂಡ್ ಹುಕ್" ಅಂಕಣದಲ್ಲಿ ವ್ಯವಹಾರ ಪ್ರತಿಕೃತಿಯ ನವೀನ ರೂಪ ನೋಡಿದೆವು, ಇಂದಿನ ಅಂಕಣದಲ್ಲಿ ಸರ್ವೇಸಾಮಾನ್ಯವಾದ "ಡೈರೆಕ್ಟ್ ಸೇಲ್ಸ್" ಬಗ್ಗೆ ತಿಳಿದುಕೊಳ್ಳೊಣ.

ನಮ್ಮ ದೈನಂದಿನ ಜೀವನದಲ್ಲಿ ಎಲ್.ಐ.ಸಿ ಇತರೆ ವಿಮೆಯ ಕಂಪನಿಗಳನ್ನು ನೋಡಿರುತ್ತೆವೆ, ಅಂತೆಯೇ ಆಮ್ವೆ ಬಗ್ಗೆಯೂ ಕೇಳಿರುವ ಸಾದ್ಯತೆಯೂ ಇದೆ. ಈ ಎರಡೂ ವ್ಯವಹಾರಗಳಲ್ಲಿ ಸಮಾನವಾದುದೇನು? ಒರ್ವ ವ್ಯಕ್ತಿಯು ವೈಯಕ್ತಿಕವಾಗಿ ಭೇಟಿ ಮಾಡಿ ಅವರು ವ್ಯವಹಾರವನ್ನು ಕುದುರಿಸಲು ನೋಡುತ್ತರೆ. ಇದಕ್ಕೆ ಡೈರೆಕ್ಟ್ ಸೇಲ್ಸ್ ಎಂದು ಹೇಳುವುದು.

ಡೈರೆಕ್ಟ್ ಸೇಲ್ಸನ್ನು ಸಾಮಾನ್ಯವಾಗಿ ವಸ್ತುವಿನ ವಿಚಾರವನ್ನು ಕೂಲಂಕುಷವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿರುವಲ್ಲಿ ಉಪಯೋಗಿಸುತ್ತಾರೆ. ಇದನ್ನು "ಏವೋನ್" ಯೆನ್ನುವ ಕಂಪನಿಯು, ೧೮೮೬ ಅಲ್ಲಿ ಉಪಯೊಗಿಸಲು ಪ್ರಾರಂಭಿಸಿರುವ ದಾಖಲೆಗಳಿವೆ, ೨೦೦೮ ರಲ್ಲಿ ಈ ವ್ಯವಹಾರವು ೧೦.೯ ಬಿ. ಡಾಲರ್ ಗಳ ಆದಾಯ ಕಂಡಿತ್ತು.

ಈ ವ್ಯವಹಾರ ಪ್ರತಿಕೃತಿಯ ಸಫಲತೆಗೆ ಮುಖ್ಯ ಕಾರಣ ಇದರಲ್ಲಿರುವ ವೈಯಕ್ತಿಕ ಸಂಬಂಧಗಳ ಬುನಾದಿ. ನಾನು ಆಗುಂತಕನನ್ನು ನಂಬುವುದಕ್ಕಿಂತ ನನ್ನ ಸ್ನೇಹಿತನನ್ನು ನಂಬುವುದು ಖಚಿತ, ಇದನೇ ಆಧರವಾಗಿಟ್ಟುಕೊಂಡು ಈ ವ್ಯವಹಾರ ಪ್ರತಿಕೃತಿಯನ್ನು ರಚಿಸಲಾಗಿದೆ.

ಈ ವ್ಯವಹಾರ ಪ್ರತಿಕೃತಿಯನ್ನು ಸ್ವಲ್ಪ ಪರಿವರ್ತಿಸಿ ನೆಟ್ವರ್ಕ್ ಮಾರ್ಕೆಟಿಂಗ್, ಮತ್ತು ಮಲ್ಟಿಲೆವೆಲ್ ಮಾರ್ಕೆಟಿಂಗ್ ಎನ್ನುವ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಇವುಗಳ ಬಗ್ಗೆ ನಾವು ಇನ್ನೊಮ್ಮೆ ವಿಚಾರಿಸೋಣ.

No comments:

Post a Comment