Pages

Thursday, March 3, 2011

ಮಾನವ ಸಂಪನ್ಮೂಲ ಪರಬಂಧನೆ

ಈ ಹಿಂದೆ ಕಂಡಂತೆ ಬೇಡಿಕೆಯನ್ನು ಪೂರೈಸಲು ವ್ಯವಹಾರದ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ಬೇಕಾದ ವ್ಯವಹಾರಾಂಗಗಳನ್ನು ಸೇರಿಸಿದಾಗ ವ್ಯವಹಾರದ ಕಾರ್ಯ ಪ್ರಾರಂಭವಾಗುತ್ತದೆ. ಈ ವ್ಯವಹಾರಾಂಗಗಳಲ್ಲಿ ಮಾನವ ಸಂಪನ್ಮೂಲದ ಪ್ರಬಂಧನೆ ಅತೀ ಮುಖ್ಯ. ವ್ಯವಹಾರಕ್ಕೆ ಬೇಕಾಗುವ ಉಳಿದ ಸಂಪನ್ಮೂಲಗಳನ್ನು ವ್ಯವಹಾರದ ಸ್ಪರ್ಧಿಗಳು ಕೊಂಡುಕೊಳ್ಳಬಹುದು, ಆದರೆ ಒಂದು ಕಂಪನಿಯಲ್ಲಿರುವ ಕಾರ್ಮಿಕರು ಮಾತ್ರ ಆ ಕಂಪನಿಯ ಶ್ರೆಷ್ಠತೆಯನ್ನು ಸಿದ್ಧಿಸುವಲ್ಲಿ ಸಮರ್ಥರು.

ಮಾನವ ಸಂಪನ್ಮೂಲ ಪ್ರಬಂಧನೆಯೆಂದರೆ, ಕಂಪನಿಯನ್ನು ನಡೆಸುವಲ್ಲಿ ಸಹಕಾರಿಯಾಗಿರುವ ಕಾರ್ಮಿಕರನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ವ್ಯವಹಾರದ ಗುರಿಯೆಡೆಗೆ ಸಾಗಿಸುವುದು. ಪ್ರತಿ ಕಂಪನಿಯು ತನ್ನ ಕಾರ್ಮಿಕರಲ್ಲಿ ಇರುವ ಗುಣ ಕೌಶಲ್ಯಗಳನ್ನು ಉಪಯೋಗಿಸಿ, ಅದನ್ನು ತನ್ನ ಸ್ಪರ್ಧಾತ್ಮಕ ಮುನ್ನಡೆಗೆ ಉಪಯೊಗಿಸಬೇಕಾದಲ್ಲಿ, ಮಾನವ ಸಂಪನ್ಮೂಲ ಪ್ರಬಂಧನೆ ಬಹು ಮುಖ್ಯವಾಗುತ್ತದೆ. ಕಂಪನಿಯು ಈ ವಿಭಿನ್ನತೆಯನ್ನು ಮತ್ತು ಹಲವು ರೀತಿಯಲ್ಲಿ ತೋರಿಸ ಬಹುದು, ಕೇವಲ ಕಾರ್ಯಾಲಯದ ಒಳಗಡೆ ಮಾತ್ರವಲ್ಲ; ಅನಾನುಭವಿಗಳನ್ನು ಹುಡುಕುವಾಗವಾಗಲಿ, ಅಥವಾ ಕಾರ್ಯಾಲಯದ ನಿಯಮದಲ್ಲಾಗಲಿ, ಒಂದೇ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲ ಪ್ರಬಂಧನೆಯನ್ನು ತೋರಿಸಬೇಕಾಗುತ್ತದೆ.

ಇಂದಿನ ವಿಡಂಬನೆಯೆಂದರೆ, ಈ ಅತಿ ಮುಖ್ಯವಾದ ವ್ಯವಹಾರಾಂಗಕ್ಕೆ ಉಳಿದ ವ್ಯವಹಾರಾಂಗಗಳಷ್ಟು ಪ್ರಾಮುಖ್ಯತೆ ದೊರಕುತಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯನ್ನು ಸರಿಯಾಗಿ ಮಾದರಿಯನ್ನಾಗಿ ನಿರ್ಮಿಸಿದ್ದಲ್ಲಿ ಅದರಷ್ಟು ಪರಿಣಾಮಕಾರಿಯಾದ ಸ್ಪರ್ಧಾತ್ಮಕ ವ್ಯವಹಾರಂಗ ಮತ್ತೊಂದಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯ ಬಗ್ಗೆ ಮುಂಬರುವ ಅಂಕಣದಲ್ಲಿ ಇನ್ನೂ ಆಳವಾಗಿ ತಿಳಿದುಕೊಳ್ಳೋಣ.

1 comment:

  1. prabhandhane is right word. not parabandhane (meaning bandhana of para (enemy)) :)

    ReplyDelete