Pages

Monday, March 7, 2011

ಮುಖಂಡತ್ವ ಮತ್ತು ವ್ಯವಸ್ಥಾಪನೆ

ಸಾಂಪ್ರದಾಯಿಕವಾಗಿ, ಮುಖಂಡತ್ವ ಮತ್ತು ವ್ಯವಸ್ಥಾಪಕನನ್ನು ಈ ಎರಡು ಪದಗಳ ಅಂತರವನ್ನು
  • ಪ್ರೇರಣೆಯ ವಿಧಿ
  • ಆಡಳಿತ ಆಯಕಟ್ಟು
ಗಳಿಂದ ವಿವರಿಸಲಾಗುತ್ತದೆ.

ಇದರಂತೆ, ಸಾಮಾನ್ಯವಾಗಿ ನೇತಾರನಾದವನು ಜನಪರವಾಗಿದ್ದರೆ, ವ್ಯವಸ್ಥಾಪಕನು ಕಾರ್ಯಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಆದರೆ ಇಂದಿನ ಜ್ಞಾನದ ಜಗತ್ತಿನಲ್ಲಿ, ಮುಖಂಡತ್ವ ಮತ್ತು ವ್ಯವಸ್ಥಾಪಕವು ತಮ್ಮ ತಮ್ಮ ಪರಿಮಿತಿಗಳಿಂದ ಹೊರಗೆ ಹೋಗಿ ಸಕ್ರಿಯವಾಗಿ ಒಂದರೊಳಗೆ ಇನ್ನೊಂದು ಲೀನವಾಗುತ್ತಿದೆ. ನಾಯಕರು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ವ್ಯವಸ್ಥಾಪಕ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಅಂತೆಯೇ, ವ್ಯವಸ್ಥಾಪಕರೂ ಸಹ ತಮ್ಮ ಸಹೋದ್ಯೋಗಿಗಳಿಂದ ಕಾರ್ಯಸಾಧಿಸಲು ತಮ್ಮದೇ ಆದ ನಾಯಕತ್ವದ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ನಾಯಕತ್ವದ ಶೈಲಿಯು ನಾಯಕನಿಂದ ನಾಯಕನಿಗೆ ವಿಭಿನ್ನವಾಗಿರುತ್ತದೆ, ಇದರಂತೆಯೇ ವ್ಯವಸ್ಥಾಪಕನೂ ತನ್ನದೆಯಾದ ಶೈಲಿಯನ್ನು ಅಳವಡಿಸಿ, ತನ್ನ ಅಧೀನರಾಗಿರುವ ನೌಕರರನ್ನು ಹುರಿದುಂಬಿಸಿ, ಸ್ವಯಂಪ್ರೇರಣೆಯಿಂದ ಕಾರ್ಯವನ್ನು ಸಾಧಿಸುವಂತೆ ಸ್ಪೂರ್ತಿಯನ್ನು ತುಂಬಬೇಕು.ಈ ರೀತಿಯಲ್ಲಿ ಸ್ವಯಂಪ್ರೆರಿತ ನೌಕರರು ಸಾಧಿಸುವ ಕಾರ್ಯ, ಅಧಿಕಾರದಿಂದ ವ್ಯವಸ್ಥಾಪಕನು ಹೇಳಿದ ಕಾರ್ಯಕ್ಕಿಂತಲೂ ಹಿರಿದಾಗಿರುವುದು ಖಚಿತ.

ಇಂದಿನ ಕಂಪನಿಗಳಲ್ಲಿ ಕಾರ್ಮಿಕರ ಸವಕಳಿಗೆ ಅವರನ್ನು ನೋಡಿಕೊಳ್ಳುತ್ತಿರುವ ವ್ಯವಸ್ಥಾಪಕರು ಅಥವಾ "ಟೀಮ್ ಲೀಡ್ಸ್" ಬಹು ಮುಖ್ಯ ಕಾರಣವಾಗಿರುತ್ತಾರೆ. ಕಾರ್ಮಿಕರನ್ನು ಸರಿಯಾಗಿ ಅರ್ಥಮಾಡಿಕೊಂಡು, ಅವರನ್ನು ಹುರಿದುಂಬಿಸಿ ಕಾರ್ಯ ಸಿದ್ಧಿಯತ್ತ ಪ್ರೇರಿಸುವುದು ಈ ಜ್ಞಾನಾಧಾರಿತ ಜಗತ್ತಿನಲ್ಲಿ ಅತೀ ಮುಖ್ಯ.

No comments:

Post a Comment