Pages

Wednesday, March 9, 2011

ವ್ಯವಹಾರ ಪ್ರತಿಕೃತಿ - ಫ್ರೀಮಿಯಂ

ವ್ಯವಹಾರ ಪ್ರತಿಕೃತಿಯ ಚರ್ಚೆಯಲ್ಲಿ "ಡೈರೆಕ್ಟ್ ಸೇಲ್ಸ್" ನಿಂದ ಮುಂದುವರೆದು, ಇಂದು ಫ್ರೀಮಿಯಂ ಪ್ರತಿಕೃತಿಯ ಬಗ್ಗೆ ಚರ್ಚೆ ಮಾಡೋಣ. ಸಾಫ್ಟ್ ವೆರ್ ಜಗತ್ತಿನಲ್ಲಿ ಅತ್ಯಂತ ಪ್ರಚಲಿತ ಪ್ರತಿಕೃತಿ ಇದು.

ಹೆಸರೇ ಸೂಚಿಸುವಂತೆ, ಫ್ರೀಮಿಯಂ - "ಫ್ರೀ" ಮತ್ತು "ಪ್ರಿಮಿಯಂ" ಎನ್ನುವ ಪದಗಳ ಜೋಡಣೆ ಇಂದ ಬಂದಿದೆ. ಇದರಂತೆ, ನಿಮ್ಮ ಮಾರಾಟದ ವಸ್ತುವಿನ ಒಂದು ಭಾಗವನ್ನು ಫ್ರೀಯಾಗಿ ನೀಡಿ, ಇನ್ನುಳಿದ ಭಾಗಕ್ಕೆ ಖರೀದಿಯ ಮೂಲಕ ವ್ಯವಹಾರಗಳು ತಮ್ಮ ಶ್ರಮಕ್ಕೆ ಅನುಗುಣವಾಗಿ ಆದಾಯವನ್ನು ಪಡೆಯುತ್ತರೆ.

ಇಂದಿನ ಗಣಕಯಂತ್ರ ಯುಗದಲ್ಲಿ ಸರ್ವೇಸಾಮಾನ್ಯವಾಗಿ ಕೇಳಿಬರುವ "ಆಂಟಿ-ವೈರಸ್" ಅನ್ನು ಇದೇ ಪ್ರತಿಕೃತಿಯ ಮೂಲಕ ಮಾರುವುದನ್ನು ಕಾಣುತ್ತೇವೆ. ಇದರಂತೆ, ಆಂಟಿ-ವೈರಸ್ ಕಂಪನಿಗಳು - ಕೆಲವು ಸಂದರ್ಭಗಳಲ್ಲಿ ೪೫ ದಿನಗಳ ಉಚಿತ ಉಪಯೋಗಕ್ಕೆಂದು ಕೊಟ್ಟು ನಂತರ ಉಪಯೋಗಿಸ ಬೇಕೆಂದರೆ ಖರಿದಿಸಿ ಉಪಯೋಗಿಸುವಂತೆ ನೋಡಿಕೊಳ್ಳುತ್ತಾರೆ. ಇನ್ನೊಂದು ವಿಧಾನದಲ್ಲಿ, ಕೆಲವೇ "ಫೀಚರ್ಸ್"(ಗುಣ-ಲಕ್ಷಣ) ಗಳನ್ನು ಉಚಿತವಾಗಿ ನೀಡಿ, ಪೂರ್ತಿಯಾದ ಗುಣ-ಲಕ್ಷಣಗಳ ಪ್ರಯೋಗ ಮಾಡಬೇಕಾದಲ್ಲಿ ಖರೀದಿಸ ಬೇಕಾಗುತ್ತದೆ.

ಈ ಪ್ರತಿಕೃತಿಯ ಮೂಲಕ, ಸಂಭಾವಿ ಗಿರಾಕಿಗಳು ತಾವು ಖರೀದಿಸಲೆಂದು ಆಲೋಚಿಸುತ್ತಿರುವ ವಸ್ತುವು ಭರವಸೆಗೆ ಯೋಗ್ಯವಿರುವುದೋ ಇಲ್ಲವೋ, ಅದರ ಗುಣಮಟ್ಟವನ್ನು ಪರೀಕ್ಷಿಸಿ ಮತ್ತೆ ಖರೀದಿಸ ಬಹುದು. ಖರೀದಿಸಲೆಂದಿರುವ ವಸ್ತುವಿನ ಮಾರಾಟಗಾರಿಕೆಯಲ್ಲೂ ಈ ಪ್ರತಿಕೃತಿಯು ಬಹು ಸಹಾಯಕಾರಿಯಾಗಿದೆ. ಗಾಹಕರ ಅನುಭವದಿಂದ ಅವರಲ್ಲಿ ಬೆಳೆಯುವ ನಂಬಿಕೆಯೇ ಈ ವ್ಯವಹಾರ ಪ್ರತಿಕೃತಿಯ ಸಫಲತೆಯ ರಹಸ್ಯ.

No comments:

Post a Comment