Monday, March 14, 2011

ಎಂಟ್ರಪ್ರೆನ್ಯೂರ್ ಇಂದ ಬೆಳೆದಿರುವ ವ್ಯವಹಾರದೆಡೆಗೆ

ಎಂಟ್ರಪ್ರೆನ್ಯೂರ್ಶಿಪ್ಪಿನ ಯಾತ್ರೆಯು ಕಲ್ಪನೆಯುಂದ ಶುರುವಾಗಿ, ಬೆಳೆಯುತ್ತಾ ಮುಂದುವರೆದು ಸಫಲ ವ್ಯವಹಾರವಾಗಿ ಸ್ಥಾಪಿತವಾಗುತ್ತದೆ. ಇಂದಿನ ಅಂಕಣದಲ್ಲಿ, ಈ ಯಾತ್ರೆಯಲ್ಲಿ ಕಂಡುಬರುವ ವಿಶೇಷಗಳು ಮತ್ತು ವ್ಯತ್ಯಾಸಗಳನ್ನು ತಿಳಿಯಪಡಿಸಲು ಇಚ್ಛಿಸುತ್ತಿದ್ದೇನೆ. ಈ ಯಾತ್ರೆಯನ್ನು ಮೂರು ಭಾಗಗಳನ್ನಾಗಿ ವಿಭಾಗಿಸಬಹುದು.
೧. ಪ್ರಾರಂಭ
೨. ಚಿಗುರು ವ್ಯವಹಾರ
೩. ಬೆಳೆದ ವ್ಯವಹಾರ

ಪ್ರಾರಂಭ: ಎಂಟ್ರಪ್ರೆನ್ಯೂರ್ಶಿಪ್ಪಿನ ಪ್ರಾರಂಭದಲ್ಲಿ ಎಂಟ್ರಪ್ರೆನ್ಯೂರ್ ಒಂದು ಕನಸಿನೊಂದಿಗಾಗುತ್ತದೆ. ಆತನಿಗೆ ಮಾರ್ಗದರ್ಶನ ನೀಡಲು ಯಾರೂ ಇರಲಾರರು, ಪದ್ಧತಿಗಳಿರುವುದಿಲ್ಲ. ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿರುತ್ತಾನೆ. ವ್ಯವಹಾರವು ಅತ್ಯಂತ ಮೃದುವಾಗಿದ್ದು, ಅದನ್ನು ಬೇಕಾದ ಹಾಗೆ ರೂಪಿಸಬಹುದು - ಕೇವಲ ಹೊಸ ಪದ್ಧತಿಗಳ ಮೂಲಕ ಮಾತ್ರವಲ್ಲ, ಸಾಧಿಸಬೇಕೆಂಬ ಧ್ಯೇಯ ಕೂಡ ಪರಿವರ್ತನೆಗೊಳಾಗಾಗಬಹುದು. ಹೆಚ್ಚಾಗಿ ಈ ಸ್ಥಿತಿಯಲ್ಲಿ ಇದೆಲ್ಲವೂ ಒಂದೇ ಮನುಷ್ಯನ ಕಾರ್ಯವಾಗಿರುತ್ತದೆ.

ಚಿಗುರು ವ್ಯವಹಾರ: ಈ ಸ್ಥಿತಿಯಲ್ಲಿ ಎಂಟ್ರಪ್ರೆನ್ಯೂರ್ ನ ಒಟ್ಟಿಗೆ ಆತನ ತಂಡವು ಇರುತ್ತದೆ. ಆತನ ಧ್ಯೇಯವು ಮುಂದುವರೆದು ಆತನ ತಂಡದ ಸದಸ್ಯರಿಗೆಲ್ಲಾ ತಿಳಿಸುತ್ತಾನೆ. ಒಬ್ಬನೇ ಎಲ್ಲಾಕಾರ್ಯಗಳನ್ನು ಮಾಡುವುದನ್ನು ಕಡಿಮೆ ಮಾಡಿ ತನ್ನ ತಂಡದ ಸದಸ್ಯರಿಗೆಲ್ಲ ಕಾರ್ಯವಿಂಗಡನೆಯಿಂದ ಸಾಧಿಸುವ ಪ್ರಯತ್ನ ನಡೆಯುತ್ತದೆ. ಎಂಟ್ರಪ್ರೆನ್ಯೂರ್ ಒಟ್ಟಿಗೆ ಸಂಪರ್ಕ ಹೆಚ್ಚಿರುತ್ತದೆ. ಕಾರ್ಯದ ಧ್ಯೇಯ ನಿರ್ಧರಿತವಾಗಿದ್ದರೂ ಅದನ್ನು ಸಾಧಿಸಲು ಬೇಕಾಗುವ ಪದ್ಧತಿಯು ಪರಿವರ್ತನೆಯಾಗುತ್ತಲೇ ಇರುತ್ತದೆ. ಧ್ಯೇಯ ದೃಢವಾಗಿದ್ದು, ಪದ್ಧತಿಗಳು ಅದರ ಸುತ್ತ ಬೆಳೆಯುತ್ತವೆ. ಕಾರ್ಯಕರ್ಮಿಗಳಲ್ಲಿ ರಾಜಕೀಯ ಮನೋಭಾವ ನಿಧಾನವಾಗಿ ಬೇರೂರ ತೊಡಗುತ್ತದೆ.

ಬೆಳೆದ ವ್ಯವಹಾರ: ವ್ಯವಹಾರ ಬೆಳೆದಿರಲು, ವ್ಯವಹಾರಕ್ಕೆ ಎಂಟ್ರಪ್ರೆನ್ಯೂರ್ ನ ಅವಶ್ಯಕತೆ ಕಡಿಮೆಯಾಗುತ್ತದೆ. ತಂಡವು ಅದರಷ್ಟಕ್ಕೆ ಬೆಳೆಯುತ್ತಾ ಹೋಗುವುದು. ತನ್ನದೆಯಾದ ಪದ್ಧತಿಗಳು, ನಿಯಮಗಳು, ರೂಪರೇಷೆಗಳನ್ನೆಲ್ಲಾ ಸೃಷ್ಟಿಸಿ ತನ್ನ ಧ್ಯೇಯದೆಡೆಗೆ ಒಯ್ಯುವರು. ಸರಳತೆಯು ಕಳೆದು ಅದರ ಬದಲಿಗೆ ಹೆಚ್ಚು ಕಠಿನ ಕ್ರಮಗಳು ಹೆಚ್ಚುತ್ತವೆ. ಕಾರ್ಯಕರ್ಮಿಗಳಲ್ಲಿ ರಾಜಕೀಯ ಮನೋಭಾವ ಹೆಚ್ಚಾಗುತ್ತದೆ.

ಇಂತಹ ವಿಷಯಗಳನ್ನು ಅಧ್ಯಯನ ಮಾಡುವ ಪ್ರಬಂಧವನ್ನು - ಆರ್ಗನೈಶನ್ ಡೆವಲೆಪ್ಮೆಂಟ್ ಎನ್ನುತ್ತಾರೆ.

No comments:

Post a Comment