Tuesday, March 15, 2011

ಬೇಡಿಕೆ ಮತ್ತು ಪೂರೈಕೆಯ ಚರ್ಚೆ - ೫

ಬೇಡಿಕೆ ಮತ್ತು ಪೂರೈಕೆಯ ಈ ಹಿಂದಿನ ಅಂಕಣದಲ್ಲಿ, ಪೂರೈಕೆಯು ತಟಸ್ಥ ಮಟ್ಟದಲ್ಲಿದ್ದು, ಬೇಡಿಕೆಯು ಕಮ್ಮಿಯಾದರೆ ಸಮಾನಾಂತರ ಬೆಲೆಯು ತಗ್ಗುವುದೆಂದು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ, ಮುಂದುವರೆದು ಇನ್ನೊಂದು ಹೊಸ ನಿಯಮವನ್ನು ತಿಳಿದುಕೊಳ್ಳೋಣ.

ಹಿಂದಿನ ಅಂಕಣದಲ್ಲಿ ಉದಾಹರಣೆಯಾಗಿ ತೆಗೆದುಕೊಂಡಂತೆ ಈ ಬಾರಿಯೂ ನಿಂಬೇಹಣ್ಣನ್ನು ತೆಗೆದು ಕೊಳ್ಳೋಣ. ವರ್ತಕನು ತನ್ನ ಹಿಂದಿನ ಅನುಭವವನ್ನು ನೆನೆಪಿಟ್ಟು, ಈ ಬಾರಿ ಹೊಸದೊಂದು ತಂತ್ರವನ್ನು ಉಪಯೋಗಿಸಿದನು. ಪ್ರತೀ ಎರಡು ಘಂಟೆಗೊಮ್ಮೆ ೫೦ ನಿಂಬೆಗಳ ಒಂದು ಚೀಲವನ್ನು ತಂದುಕೊಡುವಂತೆ ತನ್ನ ಕಾರ್ಮಿಕರಿಗೆ ನಿರ್ದೇಶಿಸಿದ್ದನು. ದಿನದ ಘಂಟೆಗಳು ಜರುಗಿದಂತೆ, ಘಂಟೆಗೆ ಸುಮಾರು ೨೦ ಜನರು ಬರುತಿದ್ದುದನ್ನು ಗಮನಿಸಿದ್ದನು. ಸುಮಾರು ೩ ಘಂಟೆ ಸಂಜೆಯ ವೇಳೆಗೆ, ಕಡೆಯ ನಿಂಬೇಹಣ್ಣಿನ ಮೂಟೆ ಬಂದದನ್ನು ಗಮನಿಸಿದ. ಎಲ್ಲೆವನ್ನೂ ಮಾರುವ ನಿಶ್ಚಯ ಮಾಡಿದ್ದ ಆತನು ತನ್ನ ಎಲ್ಲ ನಿಂಬೆಹಣ್ಣುಗಳ್ಳನ್ನು ಮಾರಲೆಂದು ಪ್ರತೀ ನಿಂಬೇಹಣ್ಣಿನ ಬೆಲೆಯನ್ನು ಕಡಿಮೆಗೊಳಿಸಿದ. ಕಡಿಮೆ ಬೆಲೆಯಾದಾಗ ಹೆಚ್ಚು ಪದಾರ್ಥಗಳನ್ನು ಕೊಳ್ಳಬಹುದೆಂಬ ನಿಯಮವನ್ನು ಈಗಾಗಲೆ ತಿಳಿದುಕೊಂಡಿದ್ದೇವೆ.

ಈ ಮೇಲಿನ ಉದಾಹರಣೆಯನ್ನು ಅಧ್ಯಾಯನ ಮಾಡಿದಾಗ, ಬೇಡಿಕೆ ಮತ್ತು ಪೂರೈಕೆಯ ಹೊಸದೊಂದು ನಿಯಮ ನಮ್ಮ ಅರಿವಿಗೆ ಬರುತ್ತದೆ - ಬೇಡಿಕೆ ತಟಸ್ಥವಾಗಿದ್ದು, ಪೂರೈಕೆಯು ಹೆಚ್ಚುತ್ತಾಹೋದಲ್ಲಿ, ಇದರ ಸಮಾನಾಂತರ ಬೆಲೆಯು ಕುಸಿಯುವುದು.

No comments:

Post a Comment