ವ್ಯವಹಾರ ಪ್ರತಿಕೃತಿಯ ಹಿಂದಿನ ಅಂಕಣದಲ್ಲಿ ಫ್ರೀಮಿಯಂ ಪ್ರತಿಕೃತಿಯ ಬಗ್ಗೆ ಚರ್ಚಿಸಿದ್ದೆವು. ಇಂದಿನ ಅಂಕಣದಲ್ಲಿ ಫ್ರಾಂಚೈಸಿಯ ಬಗ್ಗೆ ತಿಳಿದುಕೊಳ್ಳೊಣ.
ಸರ್ವೇ ಸಾಮಾನ್ಯವಾಗಿ ಕಂಡುಬರುವ - "ಕೆಫೆ ಕಾಫಿ ಡೇ"ಯು ಬೆಳೆಯಲು, ಫ್ರಾಂಚೈಸಿ ಪ್ರತಿಕೃತಿಯನ್ನೇ ಉಪಯೋಗಿಸಿದೆ. ಅದನ್ನು ಇಂದು ಎಲ್ಲ ಪಟ್ಟಣಗಳಲ್ಲೂ ಕಾಣಬಹುದೆಂದರೆ ಫ್ರಾಂಚೈಸಿಯೇ ಮುಖ್ಯ ಕಾರಣ.
ಯಾವುದೇ ಫ್ರಾಂಚೈಸಿಯಲ್ಲಿ ಮುಖ್ಯವಾಗಿ ಎರಡು ಪಕ್ಷಗಳಿವೆ - ಫ್ರಾಂಚೈಸಿ ನೀಡುವವ (ಫ್ರಾಂಚೈಸರ್) ಮತ್ತೆ ಫ್ರಾಂಚೈಸಿ ಪಡೆಯುವವ (ಫ್ರಾಂಚೈಸೀ).
ಯಾವುದೇ ಫ್ರಾಂಚೈಸಿಯು ಅದರ ಒಪ್ಪಂದದ ಪರಿಮಿತಿಯಲ್ಲೇ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಈ ಒಪ್ಪಂದದಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟ ರೂಪರೇಷೆಗಳು, ಕರ್ತವ್ಯಗಳು ಮತ್ತು ಇತರೆ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುತ್ತಾರೆ.
ಫ್ರಾಂಚೈಸಿಯ ಅನುಕೂಲ ಅನಾನುಕೂಲಗಳನ್ನು ಪರಿಶೀಲಿಸಿದಲ್ಲಿ - ಅನುಕೂಲಗಳು ಕೇಳಗಿನಂತಿವೆ; ಬೇಗ ವ್ಯವಹಾರವನ್ನು ವಿಸ್ತರಿಸ ಬಹುದು, ಬಂಡವಾಳವು ಹಲವಾರು ಜನರಲ್ಲಿ ಹಂಚಿರುತ್ತದೆ. ಆಗಲೇ ಸಿದ್ಧವಾದ ವ್ಯವಹಾರ ಪ್ರತಿಕೃತಿಯು ಇರುವುದರಿಂದ ಆದಾಯವು ಸುಲಭವಾಗಿ ಪಡೆಯಬಹುದು. ಬ್ರ್ಯಾಂಡ್ ಹೆಸರು ಕೂಡದೊರಕುತ್ತದೆ. ಇದರ ಅನಾನುಕೂಲವೆಂದರೆ,
ಫ್ರಾಂಚೈಸಿಯ ಸಮಯ ಮುಗಿದಾಕ್ಷಣ ಫ್ರಾಂಚೈಸೀಯು ವ್ಯವಹಾರಕ್ಕೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಫ್ರಾಂಚೈಸಿ ಪ್ರತಿಕೃತಿಯು ಅತ್ಯಂತ ಹೆಚ್ಚಾಗಿ "ಹೊಟೆಲ್" ಉದ್ಯಮದಲ್ಲಿ ಉಪಯೋಗಿಸುದನ್ನು ಕಾಣಬಹುದು.
ಆಂಗ್ಲ ಅಂಕಣ: http://somanagement.blogspot.com/2011/03/business-model-franchise.html
No comments:
Post a Comment