Tuesday, March 22, 2011

ಬೇಡಿಕೆ ಮತ್ತು ಪೂರೈಕೆ ಚರ್ಚೆ - ೬

ಬೇಡಿಕೆ ಮತ್ತು ಪೂರೈಕೆಯ ಉಪನಿಯಮಗಳ ಅಧ್ಯಾಯನದಲ್ಲಿ, ಹಿಂದಿನ ವಾರ ಬೇಡಿಕೆ ತಟಸ್ಥವಾಗಿದ್ದು, ಪೂರೈಕೆ ಹೆಚ್ಚಿದಾಗ ಸಮಾನಾಂತರ ಬೆಲೆ ಇಳಿಯುವುದು ಎಂದು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಬೇಡಿಕೆ ಮತ್ತು ಪೂರೈಕೆ ಇನ್ನೊಂದು ಉಪನಿಯಮವನ್ನು ತಿಳಿದುಕೊಳ್ಳೊಣ.

ನಿಂಬೆಹಣ್ಣಿನ ಉದಾಹರಣೆಯನ್ನೇ ಮುಂದುವರೆಸುತ್ತಾ - ವರ್ತಕನಿಗೆ ಪ್ರತೀಬಾರಿ ೫ ಮೂಟೆಗಳ ಬೇಡಿಕೆ ಇರುತ್ತದೆ ಎಂದುಕೊಳ್ಳೊಣ. ಈ ಬಾರಿಯ ಬೆಳೆಯು ಕೊನೆಯ ಸಮಯದಲ್ಲಿ ಹುಳಗಳ ಕಾಟಕ್ಕೆ ಸಿಕ್ಕಿ ಸಾಕಷ್ಟು ಬೆಳೆ ನಾಶವಾಯಿತು. ಇದರಿಂದ, ೫ ಮೂಟೆಗಳ ಬದಲಾಗಿ, ಕೇವಲ ೩ ಮೂಟೆಯಷ್ಟು ಪಡೆಯಬಹುದಾಯಿತು. ಆದರೆ, ವರ್ತಕನಿಗೆ ಬೇಡಿಕೆ ಅಷ್ಟೇಯಿತ್ತು; ಇದನ್ನು ಕಂಡು, ಆತನು ನಿಂಬೇಹಣ್ಣಿನ ಬೆಲೆಯನ್ನು ಹೆಚ್ಚಿಸಿದ. ಯಾರು ತಮ್ಮ ಬಳಿ ಇದ್ದ ಹಣಕ್ಕಿಂತ ಹೆಚ್ಚು ನಿಂಬೆಹಣ್ಣಿಗೆ ಬೆಲೆ ನೀಡುತ್ತಾರೊ ಅವರು ಮಾತ್ರ ಖರೀದಿಸುತ್ತಾರೆ, ಉಳಿದವರು ಖರೀದಿಸುವುದಿಲ್ಲ.

ಇದನ್ನು ನಿಯಮವನ್ನಾಗಿಸಿದಾಗ - "ಬೇಡಿಕೆ ತಟಸ್ಥವಾಗಿದ್ದು, ಪೂರೈಕೆಯು ಕೆಳಗೆ ಬಿದ್ದಲ್ಲಿ, ಸಮಾನಾಂತರ ಬೆಲೆಯು ಏರುವುದು."

No comments:

Post a Comment