Wednesday, March 23, 2011

ವ್ಯವಹಾರ ಪ್ರತಿಕೃತಿ - ವಿತರಣೆ (ಡಿಸ್ಟ್ರಿಬ್ಯೂಶನ್)

ಫ್ರಾಂಚೈಸಿಯ ಹಿಂದಿನ ಅಂಕಣದಲ್ಲಿ ವಿಸ್ತರಣೆಯ ಒಂದು ಪದ್ಧತಿಯನ್ನು ತಿಳಿದುಕೊಂಡೆವು. ವ್ಯವಹಾರಗಳ ಸಮಸ್ಯೆಯಾದ ವಿಸ್ತರಣೆ ಬಗ್ಗೆ ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೊಣ.

ಕಾರ್ಖಾನೆಗಳಲ್ಲಿ ತಯಾರಿಸಿದ ವಸ್ತುಗಳು ನಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲಿ ದೊರಕಬೇಕಾದರೆ ವಿತರಣೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ತಯಾರಾದ ವಸ್ತುವು ಸರಿಯಾದ ಸಮಯದಲ್ಲಿ, ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ವಿತರಣೆಯ ಹೊಣೆಯೊತ್ತ ವ್ಯವಹಾರಗಳು ಬಹು ಪ್ರಮುಖ ಪಾತ್ರವಹಿಸುತ್ತವೆ.

ವ್ಯವಹಾರ ಜಗತ್ತಿನಲ್ಲಿ ವಿತರಣೆಯ ಕಂಪನಿಗಳು ನಿರ್ವಹಿಸಿರುವ ಪಾತ್ರ ಬಹು ಶ್ಲಾಘನೀಯವಾದುವು - ವಿತರಣ ಜಗತ್ತಿನಲ್ಲಿ ಯಾವುದಾದರು ಹೊಸ ಬೇಳವಣಿಗೆ ನಡೆದಲ್ಲಿ, ಅದು ಕೇವಲ ವಿತರಣಾ ವ್ಯವಹಾರಗಳಿಗಷ್ಟೆಯಲ್ಲದೆ ಕಾರ್ಖಾನೆಗಳು, ವರ್ತಕರು, ಗ್ರಾಹಕರು ಮುಂತಾದ ಎಲ್ಲಾ ಪಾಲುದಾರತಿಗೂ ಅನುಕೂಲವಾಗುತ್ತದೆ.

ವಿತರಣಾ ಜಗತ್ತಿನಲ್ಲಿ ನಾವೀನ್ಯತೆಯನ್ನು ತಂದುಕೊಂಡು ಪ್ರಶಂಸೆಗೆ ಪಾತ್ರರಾದ ಕಂಪನಿಗಳಲ್ಲಿ - "ಡೆಲ್" ಕಂಪ್ಯುಟರ್ಸ್, ಮತ್ತು "ಫೆಡೆಕ್ಸ್" ಮುಂಚೂಣಿಯಲ್ಲಿವೆ. ಇವುಗಳ ಸಫಲತೆಯು ವಿತರಣಾ ಜಗತ್ತಿನ ಮಾದರಿಯಾಗಿವೆ.

ವಿತರಣೆಯ ಪ್ರತಿಕೃತಿಗಳನ್ನು ಸಾರಂಶರೂಪದಲ್ಲಿ ಪ್ರಸ್ತಾಪಿಸುವುದು ಕಷ್ಟಸಾದ್ಯವಾದ ಕೆಲಸ ಆದ್ದರಿಂದ, ಇವುಗಳ ಬಗ್ಗೆ ವಿಸ್ತಾರವಾಗಿ ಮುಂದೊಮ್ಮೆ ಚರ್ಚಿಸೋಣ.

ಆಂಗ್ಲ ಅಂಕಣವನ್ನು ಓದಿ:

No comments:

Post a Comment