Pages

Thursday, March 24, 2011

ವ್ಯವಹಾರ ವರ್ತನೆ ಚರ್ಚೆ - ೨

ಹಿಂದಿನ ಅಂಕಣದಲ್ಲಿ ವ್ಯವಹಾರ ವರ್ತನೆಯು ಉದ್ಯೋಗಿಗಳು ಮತ್ತು ವ್ಯವಹಾರಗಳ ವರ್ತನೆಯನ್ನು ಕುರಿತ ಅಧ್ಯಯನ ಎಂದು ತಿಳಿದುಕೊಂಡೆವು. ಅಲ್ಲಿಂದ ಮುಂದುವರೆದು ಈ ವ್ಯವಹಾರ ವರ್ತನೆಯ ಗುಣ ಸ್ವಭಾವಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ನಾನು ಕಲಿತಂತೆ ಇಲ್ಲಿ ಕೆಲವು ಗುಣ ಸ್ವಭಾವಗಳನ್ನು ಪ್ರತಿಯೊಬ್ಬ ಪ್ರಬಂಧಕನು ತಿಳಿದುಕೊಳ್ಳಲೇ ಬೇಕು:
  • ವರ್ತನೆಯು ಸಾಕಷ್ಟು ವಿಷಯಗಳಿಂದ ಪ್ರಭಾವಿತವಾಗಿರುತ್ತದೆ.
  • ವರ್ತನೆಯು ಸಾಕಷ್ಟು ವಿಧದ ವಿಷಯಗಳಿಂದ ಪ್ರಭಾವಿತವಾಗಿರುತ್ತದೆ.
  • ವರ್ತನೆಯು ವೈಯಕ್ತಿಕ ವ್ಯತ್ಯಾಸಗಳಿಂದಾಗಿ ನಿಶ್ಚಯವಾಗುತ್ತವೆ.
  • ವರ್ತನೆಯು ಸಾಮಾನ್ಯತೆಗಳಿಂದಲೂ ಪ್ರಭಾವಿತವಾಗಿರುತ್ತದೆ.
  • ವರ್ತನೆಯು ನಿರ್ದಿಷ್ಟ ಗುರಿ ಮತ್ತು ಉದ್ದೇಶದಿಂದ ಪ್ರಭಾವಿತವಾಗಿರುತ್ತದೆ.
  • ವರ್ತನೆಯನ್ನು ಸಾಕಷ್ಟು ಮಟ್ಟಕ್ಕೆ ಹೆಚ್ಚಿನ ಪ್ರಮಾಣಕ್ಕೆ ಬದಲಾಯಿಸಬಹುದು.
  • ವರ್ತನೆಯು ಸಾಕಷ್ಟು ಮಟ್ಟಕ್ಕೆ ಸಕ್ರಿಯ, ಅಂತೆಯೆ ಸ್ಥಾಯಿಯೂ ಆಗಿರುತ್ತದೆ.
  • ವರ್ತನೆಯನ್ನು ಬಹು ಮಟ್ಟಕ್ಕೆ ಪ್ರವಾದಿಸಬಹುದು.
  • ವರ್ತನೆಯು ಹಿಂದಿನ ಅನುಭವಗಳಿಂದ ಪ್ರಭಾವಿತವಾಗಿರುತ್ತದೆ.
ವ್ಯವಹಾರ ವರ್ತನೆಯನ್ನು ನಮ್ಮ ಅನುಭವಗಳನ್ನು ಮೆಲುಕು ಹಾಕಿ, ಅದರ ಬೆಳಕಿನಲ್ಲಿ ನಮ್ಮ ಇಂದಿನ ಅನುಭವಗಳನ್ನು ನೋಡಿದಾಗ ಮಾತ್ರ ಅರ್ಥೈಸ ಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಯಾವುದೇ ಸುಲಭ ವಿಧಾನವಿಲ್ಲ. ಮನುಷ್ಯನ ಆಧಾರಿತ ಈ ಅಧ್ಯಯನವು ನಮ್ಮಂತೆಯೇ ಜಟಿಲ ಮತ್ತು ನುಣುಚಾದದು.

ಆಂಗ್ಲ ಅಂಕಣ:

No comments:

Post a Comment