ಸಾಮಾನ್ಯವಾಗಿ ವ್ಯವಹಾರವು ಕೇವಲ ಲಾಭಕ್ಕೆಂದೇ ಇರುವುದೆಂದು ಕೇಳಿರುತ್ತೇವೆ - ಈ ನಂಬಿಕೆಯನ್ನೇ ನಾವು ಹಿಂದಿನ ಅಂಕಣದಲ್ಲಿ ಪ್ರಶ್ನಿಸಿ - ವ್ಯವಹಾರಕ್ಕೆ ಸಾಮಾಜಿಕ ಹೊಣೆಗಾರಿಕೆಯೂ ಅತ್ಯಾಗತ್ಯ ಎಂದು ತಿಳಿಸಿದ್ದೇವೆ. ಇದೇ ಹಿನ್ನಲೆಯಲ್ಲಿ ನಾವು ವ್ಯವಹಾರಕ್ಕೆ ಕಾನೂನಿನ ಚೌಕಟ್ಟು ಅಗತ್ಯ ಎಂದು ಈ ಅಂಕಣ ದಲ್ಲಿ ತಿಳಿದುಕೊಳ್ಳೋಣ.
ವ್ಯವಹಾರವು ಸಮಾಜದೊಂದಿಗೆ ಎಷ್ಟೊ ಮಟ್ಟಗಳಲ್ಲಿ ಸಂಪರ್ಕಕ್ಕೆ ಒಳಗಾಗುತ್ತದೆ, ಕಂಪನಿಯು ರಾಜ್ಯದ್ದಲ್ಲಿ ಸಿಗುವ ಸಂಪನ್ಮೂಲಗಳನ್ನು ಉಪಯೋಗಿಸುತ್ತದೆ, ಸಮಾಜದಲ್ಲಿಂದ ತನ್ನ ಕಾರ್ಯಕ್ರಮಗಳಿಗೆ ಬೇಕದ ಕಾರ್ಮಿಕರನ್ನು ಕೆಲಸಕ್ಕೆಂದು ತಿಗೆದುಕೊಳ್ಳುತ್ತದೆ. ಈ ರೀತಿ ಸಮಾಜದೊಂದಿಗೆ ಹಲವಾರು ಮಟ್ಟದಲ್ಲಿ ಸಂಪರ್ಕದಲ್ಲಿದ್ದಾಗ ಕರ್ಯಗಳಾನ್ನು ನಡೆಸಲು ಸ್ಥಿರಮತ್ತು ಧ್ರುಡ ಅಡಿಪಾಯವೊಂದು ಬೇಕಾಗುತ್ತದೆ - ಕಾನೂನು ಈ ಅಡಿಪಾಯವನ್ನು ನೀಡಿ ಸುಗಮ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತದೆ.
ಕಾನೂನನ್ನು ಸಾಮಾನ್ಯವಾಗಿ ದುಷ್ಟವ್ಯಕ್ತಿಯನ್ನು ತನ್ನ ವಿಶಯವನ್ನಾಗಿಸಿ ವಿವಿಧ ನಿಯಮಗಳನ್ನು ಮಾಡಿರುತ್ತದೆ; ವ್ಯವಹಾರ ಜಗತ್ತಿನಲ್ಲೂ ಇಂತಹ ಹಲವಾರು ಸನ್ನಿವೇಶಗಳನ್ನು ನೊಡಿರುತ್ತೇವೆ - ಇದನ್ನೇ ವ್ಯವಹಾರ ಕಾನೂನುಗಳು ನಿಯಂತ್ರಿಸಲು ಪ್ರಯತ್ನ ಪಡುತ್ತವೆ.
ಮುಂಬರುವ ಅಂಕಣಗಳನ್ನು ವ್ಯವಹಾರ ಮತ್ತು ಕಾನೂನನ್ನು ಇನ್ನೂ ನಿಕಟವಾಗಿ ಅರ್ಠೈಸಿಕೊಳ್ಳುವ ಪ್ರಯತ್ನ ಮಾಡೋಣ.
No comments:
Post a Comment