Tuesday, March 29, 2011

ಬೇಡಿಕೆ ಮತ್ತು ಪೂರೈಕೆ ಚರ್ಚೆ - ಈ ವರೆಗೆ

ನಾವು ಆರು ವಾರಗಳಿಂದ ಬೇಡಿಕೆ ಮತ್ತು ಪೂರೈಕೆ ಚರ್ಚೆಯನ್ನು ನಡೆಸುತ್ತಿದ್ದೇವೆ - ಇಲ್ಲಿಯವರೆಗಿನ ಚರ್ಚೆಯ ಮೇಲೆ ಹಿನ್ನೋಟ ಬೀರುವುದು ಅತ್ಯಗತ್ಯ ಎನಿಸಿತು; ಆದ್ದರಿಂದ ಈ ಅಂಕಣವನ್ನು ಬರೆಯುತ್ತಿದ್ದೇನೆ.

ಬೇಡಿಕೆ ಮತ್ತು ಪೂರೈಕೆಯ ಚರ್ಚೆಯನ್ನು ಅವುಗಳ ಅರ್ಥವನ್ನು ತಿಳಿಯುವುದರೊಂದಿಗೆ ಪ್ರಾರಂಭಿಸಿ, ನಂತರ ಸಮಾನಾಂತರ ಬೆಲೆಯ ಅರ್ಥ ತಿಳಿದು ಇವುಗಳ ನಡುವಿನ ಸಂಬಂಧವನ್ನು ನಿಯಮಗಳನ್ನಾಗಿ ದಾಖಲಿಸುತ್ತಾ ಹೋದೆವು. ಇವುಗಳ ಸಾರಂಶವು ಈ ಕೆಳಗಿನಂತಿದೆ:
ಈ ವರೆಗಿನ ಚರ್ಚೆಯಲ್ಲಿ ನಾವು ಹೊರಗಿನ ಮೂಲಗಳನ್ನು ತಕ್ಕ ಪ್ರಮಾಣಕ್ಕೆ ಲೆಕ್ಕಿಸಿಲ್ಲ; ಮುಂಬರುವ ಅಂಕಣಗಳಲ್ಲಿ ಇವುಗಳ ಕುರಿತು ಚರ್ಚಿಸೋಣ. ಅದಕ್ಕೂ ಮುಂಚೆ, ಈ ಮೇಲಿನ ನಿಯಮಗಳ ಉಪ ನಿಯಮವನ್ನು ತಿಳಿಯೋದು ಸೂಕ್ತ. ಮುಂದಿನ ಅಂಕಣದಲ್ಲಿ ಈ ಉಪನಿಯಮವನ್ನು ತಿಳಿದು ಮತ್ತು ಬಾಹ್ಯ ಪರಿಸರವನ್ನು ನಮ್ಮ ಚರ್ಚೆಗೆ ಸೇರಿಸೋಣ.

No comments:

Post a Comment