Thursday, March 31, 2011

ವ್ಯವಹಾರಿಕ ಉನ್ನತಿ (ಓರ್ಗನೈಜೆಶ್ನಲ್ ಡೆವಲಪ್ಮೆಂಟ್)

ವ್ಯವಹಾರಗಳು ಸದಾಕಾಲ ಬದಲಾವಣೆಗಳನ್ನು ಕಾಣುತ್ತಲೇ ಇರುತ್ತವೆ. ಇಂದಿನ ಪರಿಸರ ನಾಳೆ ಇರುವುದೆಂದು ಯಾವುದೇ ಖಾತರಿ ಇಲ್ಲ. ಇಂದಿನ ಅವಿಷ್ಕಾರ ನಾಳೆ ಹಳೆಯದಾಗಬಹುದು, ಇಂದಿನ ಆದಾಯದ ಮೂಲ ನಾಳೆ ಇಲ್ಲದಿರಬಹುದು. ಇಂತಹ ಪರಿವರ್ತನೆಯ ಸಮಯದಲ್ಲಿ ವ್ಯವಹಾರಿಕ ಉನ್ನತಿಯ ಪರಿಣತರ ಕಾರ್ಯ ಮುಖ್ಯವಾಗುತ್ತದೆ.

ವ್ಯವಹಾರಿಕ ಉನ್ನತಿಯು ತನ್ನ ಮೂಲವನ್ನು ಬಹು ವಿಷಯಗಳಿಂದ ಕಂಡುಕೊಂಡಿದ್ದು; ಅದು ಯಾವುದೇ ವ್ಯವಹಾರವನ್ನು ತನ್ನ ಪೂರ್ಣತೆಯಲ್ಲಿ ನೋಡುತ್ತದೆ. ವ್ಯವಹಾರದಾದ್ಯಂತ ಯಾವುದೇ ಸಕಾರಾತ್ಮಕ ಬದಲಾವಣೆಯನ್ನು ತರಬೇಕಾದಲ್ಲಿ ವ್ಯವಹಾರದ ಎಲ್ಲಾ ಅಂಗಗಳಿಂದಲೂ ಸಹಕಾರ ಬೇಕಾಗುತ್ತದೆ.

ಇಂತಹ ಪರಿವರ್ತನಾ ಪ್ರಿಯವಾದ ವ್ಯವಹಾರಿಕ ಉನ್ನತಿಯ ಕಾರ್ಯ ಕ್ಷೇತ್ರವನ್ನು ಕೂಲಂಕುಷವಾಗಿ ತಿಳಿಯಬೇಕಾದಲ್ಲಿ ನಾವು ಸಾದಾಕಾಲ ವ್ಯವಹಾರವು ಕಾರ್ಯನಿರ್ವಹಿಸುತ್ತಿರುವ ಪರಿಸರದ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈ ವ್ಯವಹಾರಿಕ ಉನ್ನತಿಯ ಕ್ಷೇತ್ರವನ್ನು ಇನ್ನಷ್ಟು ಸರಿಯಾಗಿ ಮುಂಬರುವ ಅಂಕಣಗಳಲ್ಲಿ ತಿಳಿದುಕೊಳ್ಳೋಣ.

No comments:

Post a Comment