ಮುಂಚಿನ ಅಂಕಣದಿಂದ ಮುಂದುವರೆದು, ಇಂದಿನ ಅಂಕಣದಲ್ಲಿ ಇನ್ನೊಂದು ನಿಯಮವನ್ನು ತಿಳಿದುಕೊಳ್ಳೋಣ. ಹಿಂದಿನ ಉದಾಹರಣೆಯಂತೆಯೇ ಇಲ್ಲಿಯೂ ನಿಂಬೆಹಣ್ಣನ್ನು ಬಳಸಿಕೊಳ್ಳೊಣ.
ನಿಂಬೇಹಣ್ಣಿನ ವರ್ತಕನು, ಕಳೆದಬಾರಿಯ ದುಬಾರಿ ಆದಾಯವನ್ನು ಗಮನಿಸಿ; ಈ ಬಾರಿಯು ಅಂತೆಯೆ ಆದಾಯದಲ್ಲಿ ಹೆಚ್ಚಳ ಸಿಗಬಹುದೆಂದು, ಹೆಚ್ಚಿನ ಪ್ರಮಾಣದಲ್ಲಿ ನಿಂಬೆಹಣ್ಣನ್ನು ಮಾರುಕಟ್ಟೆಗೆ ತಂದನು. ಇಡೀ ದಿನ ವ್ಯಾಪಾರಕ್ಕೆಂದು ಕೂತರೂ, ಯಾವುದೇ ವ್ಯಾಪಾರವೂ ಕುದುರಲಿಲ್ಲ. ವರ್ತಕನು ತಂದಿರುವ ನಿಂಬೆಹಣ್ಣನ್ನು ಹಿಂದಕ್ಕೆ ಒಯ್ಯುವ ಬದಲಾಗಿ ಅಂದೇ ಮಾರುವ ನಿಶ್ಚಯ ಮಾಡಿ, ನಿಂಬೆಹಣ್ಣಿನ ಬೆಲೆಯನ್ನು ₨೩.೦೦ ಇಳಿಸಿ ₨೧.೫೦ ಎಂದು ಮಾಡಿದನು. ಇದನ್ನು ಕಂಡು ಅಧಿಕ ಬೆಲೆಯಿಂದಾಗಿ ಹಿಂಜರಿತಿದ್ದ ಗ್ರಾಹಕರು ನಿಂಬೇಹಣ್ಣನ್ನು ಖರೀದಿಸಲು ಪ್ರಾರಂಭಿಸಿದರು.
ಈ ಮೇಲ್ಕಂಡ ಸ್ಥಿತಿಯನ್ನು ಕೂಲಂಕುಷವಾಗಿ ಗಮನಿಸಿದಾಗ; ಬೇಡಿಕೆ ಮತ್ತು ಪೂರೈಕೆಯ ಮಹತ್ವದ ಇನ್ನೊಂದು ನಿಯಮ ಹೊರಬರುತ್ತದೆ - ಪೂರೈಕೆಯು ಒಂದೇಮಟ್ಟದಲ್ಲಿದ್ದು, ಬೇಡಿಕೆಯು ಕಮ್ಮಿಯಾದಲ್ಲಿ, ಸಮಾನಂತರ ಬೆಲೆಯು ಇಳಿಮುಖ ವಾಗಿರುತ್ತದೆ.
No comments:
Post a Comment