ಸಂಸ್ಥೆಯ ಬೆಳವಣಿಗೆಯಲ್ಲಿ, ಮಾನವ ಸಂಪನ್ಮೂಲ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಹಿಂದೆ ತಿಳಿದುಕೊಂಡೆವು. ಮನುಷ್ಯನ ಸ್ವಭಾವ ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ಮನುಷ್ಯನ "ಅಹಂ" ಬಗ್ಗೆ ತಿಳಿದುಕೊಂಡೆವು. ಸಂಸ್ಥೆಯಲ್ಲಿ ಮನುಷ್ಯನ ವರ್ತನೆಯನ್ನು ಅಧ್ಯಯನ ಮಾಡಿದಾಗ ಸಾಕಷ್ಟು ಅಂಶಗಳು ಹೊರ ಬರುತ್ತವೆ - ಇದನ್ನೆ ವ್ಯವಹಾರಿಕ ವರ್ತನೆಯೆಂದು (ಆರ್ಗನೈಸೇಶನಲ್ ಬಿಹೇವಿಯರ್) ಕರೆಯುತ್ತೇವೆ.
ಪ್ರಬಂಧಕರು ವ್ಯವಹಾರಿಕ ವರ್ತನೆಯ ಮೂಲಕ ಸಂಸ್ಥೆ ಮತ್ತು ಉದ್ಯೊಗಿಗಳ ನಡುವಿನ ಸಂಬಂಧದಿಂದ ತಿಳಿದು ಸಂಸ್ಥೆಯ ಧ್ಯೇಯಗಳನ್ನು ಸಾಧನೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು. ವ್ಯವಹಾರಿಕ ವರ್ತನೆಯಲ್ಲಿ ಎರಡು ವಿಧಗಳು
ಸೂಕ್ಷ್ಮ ವ್ಯವಹಾರಿಕ ವರ್ತನೆ: ಉದ್ಯೊಗಿಗಳ ವರ್ತನೆ ಇಂದ ಸಂಸ್ಥೆಯ ಮೆಲಿನ ಪರಿಣಾಮದ ಅಧ್ಯಯನ
ಸ್ಥೂಲ ವ್ಯವಹಾರಿಕ ವರ್ತನೆ: ಸಂಸ್ಥೆಯು ಉದ್ಯೋಗಿಗಳ ಮೇಲೆ ಬೀರುವ ಪ್ರಭಾವ.
ವ್ಯವಹಾರಿಕ ವರ್ತನೆಯ ಬಗ್ಗೆ ತಿಳಿದುಕೊಳ್ಳಲು ಪ್ರಬಂಧಕನು ಆತನು ದಿನನಿತ್ಯ ನೋಡುವ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳಬೇಕು, ನಿರ್ದೇಶಿಸಬೇಕು, ನಿಗ್ರಹಿಸಬೇಕು ಮತ್ತು ಇವುಗಳಿಂದ ಮುಂಬರುವ ಸನ್ನಿವೇಶವನ್ನು ಊಹಿಸಬೇಕು. ಇದರಂತೆ ವ್ಯವಹಾರಿಕ ವರ್ತನೆಯು ಪ್ರಯತ್ನದಿಂದ ಸಾಧಿಸಬೇಕಾದ ಕೌಶಲ್ಯವೆನ್ನುವುದು ಖಚಿತವಾಗುತ್ತದೆ.
ಇಂತಹ ಮಾನವ ಸಂಪನ್ಮೂಲದ ಪ್ರಬಂಧನೆಯ ಬಹು ಮುಖ್ಯ ಅಂಗವಾದ ವ್ಯವಹಾರಿಕ ವರ್ತನೆಯ ಬಗ್ಗೆ ಮುಂಬರುವ ಅಂಕಣಗಳಲ್ಲಿ ತಿಳಿದುಕೊಳ್ಳೋಣ.
No comments:
Post a Comment