ಮಾನವ ಸಂಪನ್ಮೂಲದ ಈ ಹಿಂದಿನ ಅಂಕಣದಲ್ಲಿ, ಅದರ ಮಹತ್ವ ಮತ್ತು ಕಂಪನಿಗಳು ಅದನ್ನು ತಮ್ಮ ಬ್ರಹ್ಮಾಸ್ತ್ರವನ್ನಾಗಿ ಉಪಯೋಗಿಸಬಹುದೆಂದು ತಿಳಿದುಕೊಂಡೆವು. ಮನೋವಿಜ್ಞಾನವು ಮಾನವ ಸಂಪನ್ಮೂಲದ ಬಹು ಮುಖ್ಯ ಆಧಾರ ಸ್ತಂಭಗಳಲ್ಲಿ ಒಂದು. ನಾನು ಎನ್ನುವುದನ್ನು ಮಾನವ ಸಂಪನ್ಮೂಲ, "ಇಗೊ"ಎನ್ನುವುದನ್ನು ಪದವನ್ನು ಸರ್ ಸಿಗ್ಮಂಡ್ ಫ್ರೊಯ್ಡ್ ಮೊಟ್ಟಮೋದಲ ಬಾರಿಗೆ ಪ್ರಸ್ತಾಪಿಸಿದರು. ಮನೋವಿಜ್ಞಾನದ ಈ ಅರ್ಥವನ್ನು ಬೇರೆ ಅಂಕಣದಲ್ಲಿ ತಿಳಿದುಕೊಳ್ಳೋಣ.
ಈ ಅಂಕಣಕ್ಕೆ ಬೇಕಾದ "ಇಗೊ" (ಅಹಂಕಾರ) ಅರ್ಥವು - ನಮ್ಮ ಬಗ್ಗೆ ನಾವೇ ಸೃಷ್ಟಿಸಿಕೊಂಡಿರುವ ಕಲ್ಪನಾತ್ಮಕ ಪ್ರತಿಬಿಂಬ. ನಮ್ಮ ಸಾಧನೆಗಳಿಂದ ಈ ಬಿಂಬವು ಹೆಚ್ಚು ಗಾಢವಾಗುತ್ತದೆ. ಈ ಪ್ರಕ್ರಿಯೆಯು ಮುಂದುವರೆದಂತೆ, ಮಾನವನಾದವನು ತನ್ನದೇಯಾದ ಕಲ್ಪನಾತ್ಮಕ ವಲಯವನ್ನು ಬೆಳೆಸತೊಡಗುತ್ತಾನೆ; ಕಾಲಕ್ರಮೇಣ ಈ ವಲಯವು ನನ್ನದೇ, ಆರಲ್ಲಿ ನಾನೇ ಸಾರ್ವಭೌಮನೆಂದುಕೊಳ್ಳುತ್ತನೆ. ಆತನು ತನ್ನದೇಯಾದ ಲೋಕದಲ್ಲಿರುತ್ತನೆ, ಅವನು ಕೆಲವೇ ಸ್ನೆಹಿತರ, ಸಂಬಂಧಿಗಳೊಡನೆ ಸಂಪರ್ಕವನ್ನು ಸೀಮಿತಗೊಳಿಸುತ್ತಾನೆ. ಆತನಲ್ಲಿದ್ದ ವಿಶಾಲ ಮನೋಭಾವವು ಸಂಕುಚಿತವಾಗತೊಡಗುತ್ತದೆ. ಈ ಪರಿವರ್ತನೆಯೇ ಕಂಪನಿಗಳಲ್ಲಿ ಕಾಣುವ ಹಲವಾರು ಕಿತ್ತಾಟಕ್ಕೆ ಕಾರಣವಾಗಿದೆ.
ಮಾನವರ ಸರ್ವೆಸಾಮನ್ಯವಾದ ಈ "ಇಗೊ"ವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ, ಮಾನವ ಸಂಪನ್ಮೂಲವನ್ನು ಕಂಪನಿಯ ಏಳಿಕೆಗೆ ಪ್ರೊತ್ಸಹಿಸುವುದು ಸುಲಭವಾಗುತ್ತದೆ.
No comments:
Post a Comment