Pages

Monday, April 18, 2011

ವ್ಯವಹಾರ ಪ್ರತಿಕೃತಿ - ಬೇಡಿಕೆಯ ಏಕೀಕರಣB

ವ್ಯವಹಾರ ಪ್ರತಿಕೃತಿಗಳ ಚರ್ಚೆಯಲ್ಲಿ ಮುಂದುವರೆಯುತ್ತಾ ಇಂದಿನ ಅಂಕಣದಲ್ಲಿ ವ್ಯವಹಾರ ಪ್ರತಿಕೃತಿಗಳಲ್ಲೇ ಅತ್ಯಂತ ಸಾಮಾನ್ಯವಾದ ಪ್ರತಿಕ್ರಿತಿಯು ಬೇಡಿಕೆಯ ಏಕೀಕರಣದ ಬಗ್ಗೆ ತಿಳಿದುಕೊಳ್ಳೋಣ.

ನಮಗೆ ಯಾವಾಗಾದರೂ ಸಮಯದ ಕೊರತೆಯಿದ್ದಲ್ಲಿ ನಮ್ಮ ಮನೆಯ ಬಳಿಯಲ್ಲಿರುವ ಅಂಗಡಿಗೆ ಹೋಗುವುದು ಸರ್ವೇಸಾಮಾನ್ಯ. ಆ ಅಂಗಡಿಗಳು ನಮಗೆ ಬೇಕಾದ ವಿವಿಧ ವಸ್ತುಗಳು ಮತ್ತು ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತವೆ. ಇವರುಗಳು ಹೇಗೆ ಆಯವನ್ನು ಗಳಿಸುತ್ತಾರೆ ಎನ್ನುವುದೇ ಇಂದಿನ ಅಂಕಣದ ಚರ್ಚ ವಿಷಯ.

ಈ ಅಂಗಡಿಗಳನ್ನು ಕೂಲಂಕುಶವಾಗಿ ಗಮನಿಸಿದಲ್ಲಿ ಅವುಗಳು ಹೇಗೆ ತಮ್ಮ ವ್ಯಾಪಾರವನ್ನು ಸಂಪಾದಿಸುತ್ತಾರೆ ಎನ್ನುವುದು ತಿಳಿಯುತ್ತದೆ. ಇಂತಹ ಅಂಗಡಿಗಳು ಸಾಮಾನ್ಯವಾಗಿ ಮನೆಗಳ ನೆರೆಹೊರೆಯಲ್ಲಿಯೇ ಇರುತ್ತವೆ. ಅವುಗಳು ಮಾರಾಟಕ್ಕೆಂದು ಇಡುವ ಪದಾರ್ಥಗಳಿಗೆ ಅಲ್ಲಿಯ ಸ್ಥಳೀಯ ಜನರೇ ಗಿರಾಕಿಗಳು. ಅಂಗಡಿಯಲ್ಲಿಡುವ ವಸ್ತುಗಳೋ ಅಲ್ಲಿಯ ಸ್ಥಳಿಯರ ಖರೀದಿಯನ್ನು ತಿಳಿದುಕೊಂಡು ಅವರಿಗೆ ಬೇಕಾಗಬಹುದಾದ ವಸ್ತುಗಳನ್ನು ಖರೀದಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಇದರಿಂದ ಅಂಗಡಿಯವರಿಗೆ ಆ ಸರಕುಗಳು ಕಡಿಮೆ ಮೊತ್ತದಲ್ಲಿ ಸಿಗುತ್ತದೆ.

ಇಂತಹ ವ್ಯವಸ್ಥೆ ಇಂದಾಗಿ ಗ್ರಾಹಕರಿಗೆ ತಮ್ಮ ಮನೆಯ ಬಳಿಯಲ್ಲಿಯೇ ಅವರಿಗೆ ಬೇಕಾದ ವಸ್ತುಗಳು ಸಿಗುತ್ತದೆ ಎನ್ನುವ ಸಂತೋಷ ಒಂದೆಡೆ ಇದ್ದಲ್ಲಿ, ಅಂಗಡಿಯವರು ತಮ್ಮ ಲಾಭವನ್ನು ಪಡೆದೇ ಕೊಳ್ಳುತ್ತಾರೆ.

ಈ ವ್ಯವಹಾರ ಪ್ರತಿಕೃತಿಯ ಒಂದು ಸಣ್ಣ ಬದಲಾವಣೆಯ ಮತ್ತೊಂದು ಪ್ರತಿಕೃತಿಯನ್ನು ನಾಳೆ ತಿಳಿದುಕೊಳ್ಳೋಣ.

No comments:

Post a Comment