Pages

Monday, April 4, 2011

ಮಾರುಕಟ್ಟೆ

ಬೇಡಿಕೆ ಮತ್ತು ಪೂರೈಕೆಯ ಚರ್ಚೆಯಲ್ಲಿ ಹಲವುಬಾರಿ ಈಗಾಗಲೇ ಮಾರುಕಟ್ಟೆಯೆಂಬ ಪದವನ್ನು ತುಂಬಾ ಬಾರಿ ಉಪಯೋಗಿಸಿದ್ದೇವೆ - ಆದರೆ ಆ ಅಂಕಣಗಳಲ್ಲಿ ಉಪಯೋಗಿಸಿರುವ ಪದವು ಕೇವಲ ಸಾಮಾನ್ಯ ಬಳಕೆಯದ್ದಾಗಿದೆ - ಆರ್ಥಶಾಸ್ತ್ರದಲ್ಲಿ ಬಳಕೆಯಾಗುವಂತಹ ಪದಕ್ಕೆ ಸ್ವಲ್ಪ ವಿಭಿನ್ನ ಅರ್ಥ ಇರುವುದು.

"ಮಾರ್ಕೆಟ್" ಯೆಂದರೆ ಗ್ರಾಹಕರು ಮತ್ತು ವರ್ತಕರು ತಮ್ಮ ನೈಜ ಅಥವಾ ಸಂಭಾವನೀಯ ವಹಿವಾಟಿನ ಮೂಲಕ ವ್ಯವಹಾರಕೆಂದಿಟ್ಟ ವಸ್ತುವಿಗೆ ಬೆಲೆ ನಿಗದಿಪಡಿಸುವುದು. "ಮಾರ್ಕೆಟ್" ಮತ್ತು "ಇಂಡಸ್ಟ್ರಿ"(ಉದ್ಯಮ) ಇವೆರಡರ ಅಂತರ ಅರಿತುಕೊಳ್ಳುವುದು ಕುತೂಹಲಕಾರಿಯಾಗಿದೆ - ಇಂಡಸ್ಟ್ರಿಯು ಸಮಾನ ಅಥವಾ ಒಂದೇ ವಸ್ತುವನ್ನು ನಿರ್ಮಿಸುವ ಉದ್ಯೋಗಳ ಕೂಟ. ಈ ಇಂಡಸ್ಟ್ರಿಗಳು ಸಾಮಾನ್ಯವಾಗಿ "ಮಾರ್ಕೆಟ್"ನ ಪೂರೈಕೆಯ ಕಡೆಗೆ ಇರುವುದೇ ಹೆಚ್ಚು (ಕೆಲವು ಸಂದಭದಲ್ಲಿ ಬೇಡಿಕೆಯ ಬದಿಗೂ ಇರುವ ಸಾದ್ಯತೆ ಇದೆ).

ಅರ್ಥಶಾಸ್ತ್ರಜ್ಞರು "ಮಾರ್ಕೆಟ್" ಅನ್ನು ನಿಶ್ಚಯಿಸುವಾಗ ಅದರಲ್ಲಿ ಮೂರು ಅಂಶಗಳನ್ನು ನೋಡುತ್ತರೆ - ಗ್ರಾಹಕ, ವರ್ತಕ, ಮತ್ತು ವ್ಯವ್ಯಹಾರದ ವಿಷಯ. ಒಂದುವೇಳೆ ಈ ಮೂರೂ ಅಂಶಗಳು ಸರಿಯಾಗಿ ನಿಗದಿತವಾಗದೇ ಇದ್ದಲ್ಲಿ, ಆ ವಸ್ತುವನ್ನು ಅತಿಯಾಗಿ ಲಾಭ ಪಡೆಯುವ ಅಪೇಕ್ಷೆಯುಳ್ಳ ವರ್ತಕನು, ಕಡಿಮೆ ಮೊತ್ತಕ್ಕೆ ಯಾವುದಾದರೂ ದೇಶದಲ್ಲಿ ವಸ್ತುವನ್ನು ಖರೀದಿಸಿ ಇನ್ನೊಂದು ದೇಶದಲ್ಲಿ ಮಾರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಅಭ್ಯಾಸ ಅತಿಯಗಿದ್ದಲ್ಲಿ ಆರ್ಥಿಕ ವ್ಯವಸ್ತೆಯ ಮೇಲೆ ದುಷ್ಟ ಪ್ರಭಾವ ಬೀರುತ್ತದೆ - ಇದನ್ನು "ಆರ್ಬಿಟ್ರಜ್" ಎಂದು ಕರೆಯುತ್ತಾರೆ.

"ಆರ್ಬಿಟ್ರಜ್"ಗೆ ಪ್ರಮುಖ ಕಾರಣದಲ್ಲಿ ನಾವು ಹಿಂದೆ ಚರ್ಚಿಸಿದ ಮಾಹಿತಿಯ ಕೊರತೆ.

No comments:

Post a Comment