ಹಿಂದಿನ ಅಂಕಣದಲ್ಲಿ ತಿಳಿಸಿದಂತೆ, ಮಾರುಕಟ್ಟೆಯ ಸರಿಯಾದ ತಿಳುವಳಿಕೆ ವ್ಯವಹಾರ ಮತ್ತು ಪ್ರಬಂಧನೆಗೆ ಬಹುಮುಖ್ಯವಾದುದು. ಆದ್ದರಿಂದ ನಮ್ಮ ಈಗಿನ ಹಾದಿಯಿಂದ ಕೆಲಕಾಲದೂರ ಹೋಗಿ, ಈ ಅರ್ಥಶಾಸ್ತ್ರದ ಅಧ್ಯಯನವನ್ನು ಮಾಡಿ ಮತ್ತೊಮ್ಮೆ ಹಿಂತಿರುಗೋಣ.
ಅರ್ಥಶಾಸ್ತ್ರದಲ್ಲಿ ಪರಿಪೂರ್ಣ ಸ್ಪರ್ಧಾತ್ಮಕ ಮಾರುಕಟ್ಟೆಯೆನ್ನುವ ವಿಧವನ್ನು ನಿರ್ಮಿಸಿದ್ದಾರೆ. ಇದರಂತೆ ಯಾವ ಮಾರುಕಟ್ಟೆಯಲ್ಲಿ ತುಂಬಾ ಜನ ವರ್ತಕರು ಮತ್ತು ತುಂಬಾಜನ ಗ್ರಾಹಕರಿರುವರೋ ಅದರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿದ್ದು, ಯಾವುದೇ ಒಬ್ಬ ವರ್ತಕ ಅಥವಾ ಒಬ್ಬ ಗ್ರಾಹಕ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆಂದಿರುವ ವಸ್ತುವಿನ ಬೆಲೆಯ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ.
ಸಾವಿರಾರು ರೈತರು ಬೆಳೆಯುವ ಬೆಳೆಗೆ ಅಸಂಖ್ಯಾತ ಗ್ರಾಹಕರ ಬೇಡಿಕೆ ಇರುವುದು; ಹೀಗಿದ್ದಲ್ಲಿ ಅದರ ಬೆಲೆಯನ್ನು ಯಾವುದೇ ಒರ್ವ ರೈತ ಅಥವಾ ಗ್ರಾಹಕ ನಿಶ್ಚಯಿಸಲು ಸಾಧ್ಯವಾಗದು.
ನಾವು ಈ ಹಿಂದೆಯೆ ತಿಳಿಸಿದಂತೆ, ಸ್ಪರ್ಧಾತ್ಮಕ ಮನೊಭಾವಇರುವುದು ಮುಖ್ಯ; ಮಾರುಕಟ್ಟೆಯಲ್ಲಿರು ವವ್ಯವಹಾರಿಗಳ ಸಂಖ್ಯೆಯಲ್ಲ.
ಅಂಗ್ಲ ಅಂಕಣ ಓದಿ: http://somanagement.blogspot.com/2011/04/perfectly-competitive-market_04.html
No comments:
Post a Comment