Pages

Thursday, April 7, 2011

ಮುಖ ಬೆಲೆ ಮತ್ತು ನೈಜ ಬೆಲೆ

ನಾವು ಸರ್ವೇ ಸಾಮಾನ್ಯವಾಗಿ ಹಿರಿಯರಿಂದ ಕೇಳಿಬರುವ ಮಾತಿದು - "ನಾನು ಬೆಂಗಳೊರಿಗೆ ಬಂದಾಗ ಒಂದು ಊಟಕ್ಕೆ ೫೦ ಪೈಸೆ ಇತ್ತು ಇವತ್ತು ೩೦ ರೂಪಾಯಿ ಆಗಿದೆ" ಅವರು ಹೇಳುವ ಮಾತು ಎಷ್ಟು ಮಟ್ಟಕ್ಕೆ ನಿಜ? ನಿಜವಾಗ್ಲೂ ದುಬರಿಯಾಗಿದೆಯೇ ಅಥವಾ ಇಲ್ಲವೇ? ಇದರಲ್ಲಿ ಎಷ್ಟು ಮೊತ್ತ ಹಣದುಬ್ಬರದಿಂದಾಗಿದೆ, ಎಷ್ಟು ನಿಜವಾಗಲು ದುಬಾರಿಯಾಗಿದೆ ಎನ್ನುವುದು ತಿಳಿಯಬೇಕಾಗಿದೆ.

ನಿಜವಾಗಿಯೂ ನಾವು ಇದೆರಡು ಬೆಲೆಗಳ ತುಲನೆ ಮಾಡಲಿಕ್ಕಾಗುವುದಿಲ್ಲ, ಆ ಸಮಯದಲ್ಲಿ ಆಗಿರಬಹುದಾದ ಹಣದುಬ್ಬರವನ್ನು ಲೆಕ್ಕಿಸಿ, ತದನಂತರ ಅದಕ್ಕೆ ಸರಿಪಡಿಸಬೇಕು. ಈ ಮೂಲದಲ್ಲಿದ್ದ ಬೆಲೆಯನ್ನು ಮುಖ ಬೆಲೆ ಎಂದು ಕರಿಯಬಹುದು; ಅದನ್ನು ನಾವು ಹಿಂದಿನ ಬೆಲೆಯೊಂದಿಗೆ ಹೊಲಿಸ ಬೇಕಾದರೆ, ಯಾವುದಾದರೂ ವರ್ಷವನ್ನು ಗುರುತು ಪಡಿಸಿ ಅ ವರ್ಷದಲ್ಲಿ ಇಂದಿನ ಈ ಮೊತ್ತ ಎಷ್ಟಿರಬಹುದು ಎಂದು ಲೆಕ್ಕಾಚಾರ ಹಾಕಿ, ಅ ಬೆಲೆಗಳನ್ನು ಹೋಲಿಸಬಹುದು. ಈ ರೀತಿ ಹಣದುಬ್ಬರಕ್ಕನುಗುಣವಾಗಿ ಸರಿಪಡಿಸಿದ ಬೆಲೆಗೆ ನಾವು ನೈಜ ಬೆಲೆ ಎನ್ನುತ್ತೇವೆ.

ಇಂತಹ ಮುಖ ಬೆಲೆ ಮತ್ತು ನೈಜ ಬೆಲೆಯ ಬಗ್ಗೆ ಚರ್ಚೆಯನ್ನು ಸಾಮಾನ್ಯವಾಗಿ ಬೃಹತ್ ವಿಚಾರಗಳ ಬಗ್ಗೆ ತಿಳಿಸುವ ಅರ್ಥಶಾಸ್ತ್ರದ ವಿಧಿಯಲ್ಲಿ ಅಧ್ಯಯನ ಮಾಡುತ್ತೇವೆ; ಇಲ್ಲಿ ಕೇವಲ ತುಣುಕಿನಂತೆ ತಿಳಿದುಕೊಳ್ಳುತ್ತಿದ್ದೇವೆ.

No comments:

Post a Comment