ಕಳೆದ ವಾರದಲ್ಲಿ ನಾವು ಮಾರುಕಟ್ಟೆ ಮತ್ತು ಬೇಡಿಕೆ - ಪೂರೈಕೆಯ ಬಗ್ಗೆ ಜೊತೆಯಲ್ಲೇ ತಿಳಿದುಕೊಳ್ಳುತ್ತಿದ್ದೆವು. ನೈಜವಾಗಿ ಇವುಗಳನ್ನು ಉಪಯೋಗಿಸಬೇಕಾದರೆ ಇಂತಹ ಹಲವು ವಿಷಯಗಳನ್ನು ಏಕಕಾಲದಲ್ಲಿ ನೋಡಬೇಕಾಗುತ್ತದೆ - ಹಾಗಾಗಿ ನಮ್ಮ ಈ ಪ್ರಯತ್ನದಲ್ಲಿ ಮುಂದುವರೆಯುತ್ತಾ ಸರ್ವೇ ಸಾಮನ್ಯವಾಗಿ ಕಂಡು ಬರುವ ಬದಲಿ ಮತ್ತು ಪೂರಕ ಸರಕು ಸಾಮಗ್ರಿಗಳ ಬಗ್ಗೆ ತಿಳಿದು ಕೊಳ್ಳೋಣ.
ಯಾವುದಾದರು ವಸ್ತುವಿನ ಬೆಲೆಯೂ ಹೆಚ್ಚಿದಾಗ ಅದರ ಬಳಕೆಯ ಪ್ರಮಾಣ ಕಡಿಮೆಯಾಗುವುದು ಸಹಜ. ಆದರೆ ಈ ಬೆಲೆಯೇರಿಕೆಯ ಪ್ರಭಾವ ಕೇವಲ ಅದರ ಮೇಲೆ ಮಾತ್ರ ಇರುವುದಿಲ್ಲ ಅದರೊಂಗಿಗೆ ಸಂಪರ್ಕ ದಲ್ಲಿ ಬರುವ ವಸ್ತುಗಳ ಮೇಲೂ ಇರುವುದು. ಈ ಪರಿಣಾಮವನ್ನು ಆಧರಿಸಿಯೇ ಆ ವಸ್ತುಗಳನ್ನು ವಿಷಯದಲ್ಲಿರುವ ವಸ್ತುವಿನ ಬದಲಿ ಅಥವಾ ಪೂರಕಯೆನ್ನಬಹುದು.
ಯಾವ ವಸ್ತುವಿನ ಬೆಲೆ ಏರಿಕೆಯಾದುದರಿಂದ ಇನ್ನೊಂದು ವಸ್ತುವಿನ ಬೇಡಿಕೆಯ ಪ್ರಮಾಣವೂ ಕುಗ್ಗಿದರೆ, ಇವೆರಡನ್ನೂ ನಾವು ಪೂರಕ ಸರಕು ಸಾಮಗ್ರಿಗಳು ಎನ್ನುತ್ತೇವೆ. ಉದಾಹರಣೆಗೆ ಚಹಾ ಮತ್ತು ಸಕ್ಕರೆ ಅಥವಾ ವಾಹನಗಳು ಮತ್ತು ಪೆಟ್ರೋಲ್
ಒಂದುವೇಳೆ ಯಾವುದಾರು ವಸ್ತುವಿನ ಬೆಲೆಯು ಏರಿದಲ್ಲಿ ಅದಕ್ಕೆ ಸಂಬಂದಪಟ್ಟ ಮತ್ತೊಂದು ವಸ್ತುವಿನ ಬೇಡಿಕೆಯು ಹೆಚ್ಚಿದಾಗ ಅಂತಹ ಎರಡು ವಸ್ತುಗಳಿಗೆ ನಾವು ಬದಲಿ ವಸ್ತುಗಳು ಅಥವಾ ಬದಲಿ ಸಾಮಗ್ರಿ ಎನ್ನುತ್ತೇವೆ.
No comments:
Post a Comment