Tuesday, April 12, 2011

ವ್ಯವಹಾರ ಪ್ರತಿಕೃತಿ - ಸೇವಾವೃತ್ತಿಯ ಕೈಗಾರಿಕೀಕರಣ

ಮಧ್ಯವರ್ತಿಗಳ ಕಡಿತದ ಕುರಿತ ಹಿಂದಿನ ಅಂಕಣದ ನಂತರ ಇಂದಿನ ಅಂಕಣದಲ್ಲಿ ಸೇವಾವೃತ್ತಿಯ ಕೈಗಾರಿಕೀಕರಣದ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಯಾವುದಾದರು "ಹೋಟೆಲ್ " ಗೆ ಹೋದಲ್ಲಿ ನಾವು "ಮೆನು"ವನ್ನು ಕೇಳುತ್ತೇವೆ. ಅವರ ಮೆನು ನಮಗೆ ಅವರು ಏನನ್ನೆಲ್ಲ ಸಿದ್ದಪಡಿಸಿರುತ್ತಾರೆ ಎಂದು ಸೂಚಿಸುತ್ತದೆ, ನಾವೇ ಏನನ್ನು ತಿನ್ನಲು ಇಷ್ಟ ಪಡುತ್ತೆವೋ ಅದು ಅವರೊಂದಿಗೆ ಇಲ್ಲದೆ ಇರಬಹುದು. ಅವರು ಮೆನುವನ್ನು ಸೀಮಿತಗೊಳಿಸಿರುವುದರಿಂದ ಹೊಟೆಲ್ ಗಳಿಗೆ ಅವರದೆಯಾದ ಲಾಭ ಇರುತ್ತದೆ. ಯಾರಾದರು ಬಂದು ಏನನ್ನಾದರೂ ಕೇಳಿದರೆ ಅದಕ್ಕೆ ತಕ್ಕಂತೆ ಪದಾರ್ಥಗಳಿಲ್ಲದಿದ್ದಲ್ಲಿ ವ್ಯವಸ್ಥೆ ಕೆಡುವ ಸಂಭವ ಇದೆ, ಇದನ್ನು ಅವರು ಮೆನು ಮೂಲಕ ನಿಯಂತ್ರಿಸುತ್ತಾರೆ.

ಇಂತಹ ಸೇವಾವೃತ್ತಿಯ ಕೈಗಾರಿಕೀಕರಣದ ಬಹು ಉಚ್ಚ ಉದಾಹರಣೆ ಬಹು ಪ್ರಸಿದ್ದವಾದ "ಮ್ಯಾಕ್ ಡೋನಲ್ಡ್" ಹೋಟೆಲ್ ಗಳು. ಅಲ್ಲಿ ಇದುವ ಕೆಲಸಗಾರರಿಗೆ ಯಾವುದೇ ಪದಾರ್ಥವನ್ನು ತಯಾರಿಸುವಾಗ ಆ ಕ್ರಮದಲ್ಲಿ ಬರುವ ಪ್ರತಿಯೊಂದು ಕೆಲಸಕ್ಕೂ ಕಾರ್ಯ ನಿಗದಿ ಪಡಿಸಿದ್ದಾರೆ. ಅವರುಗಳು ನಮಗೆ ಸರ್ವ್ ಮಾಡುವಾಗ ನಗಬೇಕೆನ್ನುವುದು ಸಹ ಅವರ ಕ್ರಮದಲ್ಲಿದೆ!

ಸೇವಾವೃತ್ತಿಯ ಕೈಗಾರಿಕೀಕರಣದಲ್ಲಿ ನಾವು ಮಾಡ ಬೇಕಾದ ದೊಡ್ಡ ನಿರ್ಧಾರವು - ಜನರ ತೃಪ್ತಿ ಮತ್ತು ವಿವಿಧತೆಯ ನಡುವಿನದ್ದು.

No comments:

Post a Comment