Wednesday, April 13, 2011

ವ್ಯವಹಾರ ಪ್ರತಿಕೃತಿ - ನಿಷ್ಟಾವೃದ್ಧಿ

ವ್ಯವಹಾರ ಪ್ರತಿಕೃತಿಯ ಹಿಂದಿನ ಅಂಕಣದಲ್ಲಿ ಸೇವಾವೃತ್ತಿಯ ಕೈಗಾರಿಕೀಕರಣದ ಬಗ್ಗೆ ತಿಳಿದು ಕೊಂಡೆವು, ಇಂದಿನ ಅಂಕಣದಲ್ಲಿ ವ್ಯವಹಾರ ನಿಷ್ಟಾವೃದ್ಧಿ ಕುರಿತು ತಿಳಿದುಕೊಳ್ಳೋಣ.

ಪ್ರತಿಯೊಂದು ವ್ಯವಹಾರವು, ಅದರ ಗ್ರಾಹಕರು ಅದರ ಉತ್ಪನ್ನಗಳಿಗೆ ಕಟ್ಟಾ ಹಿಂಬಾಲಕರಾಗಿರಬೇಕೆಂದು ಬಯಸುತ್ತದೆ; ಹೊಸ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವುದು ಬಹು ಕಷ್ಟಕರವಾದ ಕಾರ್ಯವಾದುದರಿಂದ ಇರುವ ಗ್ರಾಹಕರನ್ನೇ ಪೋಷಿಸುವುದು ಸಹಾಯಕಾರಿಯಾಗಿರುವುದು ಮತ್ತು ಮಿತವ್ಯಯದ ಕ್ರಿಯೆಯೂ ಹೌದು. ಒಂದು ವೇಳೆ ಯಾವುದಾದರೂ ವ್ಯವಹಾರದ ವಿಕ್ರಯಕಾರರು, ಪೂರೈಕೆದಾರರು, ಲೇವಾದೇವಿಗಾರರು ಮುಂತಾದವರೆಲ್ಲ ಆ ವ್ಯವಹಾರಕ್ಕೆ ಅನುಯಾಯಿಗಳಗಿದ್ದಲಿ, ಅದಕ್ಕೆ ಬೇಕಾದ ಪ್ರೋಸ್ತಹ ಮತ್ತು ನಿಷ್ಠೆ ತೋರಿಸಿದಲ್ಲಿ ಆ ವ್ಯವಹಾರವು ಬೆಳೆಯುವುದು ಖಚಿತ.

ಇಂತಹ ನಿಷ್ಟಪುರಕ ಪ್ರೋತ್ಸಾಹವು ಯಶಸ್ಸಿನ ಚಕ್ರವನ್ನೇ ಸೃಷ್ಟಿಸುತ್ತದೆ. ನಿಷ್ಠೆಯುಳ್ಳ ಕೆಲಸದವರಿಕೆ ಅವರ ಕೌಶಲ್ಯ ವೃದ್ಧಿಸುವ ತರಬೇತಿ ನೀಡಿದಲ್ಲಿ, ಅದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚಿ ಅದರಿಂದ ಗ್ರಾಹಕರಿಗೆ ಸಂತೋಷ ಉಂಟಾಗಿ, ಅವರು ಇನ್ನೂ ಹೆಚ್ಚಿನ ವ್ಯವಹಾರ ಈ ಕಂಪನಿಯೊಂದಿಗೆ ಮಾಡಿದಲ್ಲಿ ಅದರ ಆದಾಯ ಹೆಚ್ಚಿಸುತ್ತದೆ. ಈ ಆದಾಯದಿಂದ ಇನ್ನು ಹೆಚ್ಚಿನ ಕೌಶಲ್ಯ ವೃದ್ಧಿಯ ತರಬೇತಿಗಳು ಮುಂತಾದವು ನಡೆಯುತ್ತಲೇ ಇರುತ್ತದೆ.
ವ್ಯವಹಾರಗಳು ತನ್ನ ಗ್ರಾಹಕರಲ್ಲಿ ವ್ಯವಹಾರ ನಿಷ್ಠೆ ಮೂಡಿಸಿದಲ್ಲಿ ಅದರ ಧನಾತ್ಮಕ ಪ್ರಭಾವದ ಮಹಿಮೆಯ ಕುರಿತು ಹೆಚ್ಚು ವಿಶ್ಲೆಶಿಶಬೇಕಾಗಿಲ್ಲ. ಇದರ ಸಫಲ ಪರಿಣಾಮವನ್ನು ಇಂದು ಕಾಣುವ ಹಲವಾರು ವ್ಯವಹಾರೋದ್ಯಮಗಳು ತಮ್ಮ ದೇ ಯಾದ ನಿಷ್ಟವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದೇ ಸಾಕ್ಷಿ.

No comments:

Post a Comment