ಈ ಹಿಂದಿನ ಅಂಕಣದಲ್ಲಿ ನಾವು ಬೇಡಿಕೆ ಏಕೀಕರಣದ ಬಗ್ಗೆ ತಿಳಿದುಕೊಳ್ಳುತ್ತ, ಅದರ ಇನ್ನೊಂದು ವಿಧದ ಬಗ್ಗೆ ತಿಳಿದು ಕೊಳ್ಳುವುದಾಗಿ ಹೇಳಿದ್ದೆವು ಅದೇ ವ್ಯವಹಾರಿಕ ಕೂಟ.
ವ್ಯವಹಾರಗಳು ಸಾಮಾನ್ಯವಾಗಿ ಕಾರ್ಯ ನಿರತರಾಗಿರುವಾಗ ಸಾಮೂಹಿಕವಾದ ಸವಾಲು ಅಥವಾ ಬಿಕ್ಕಟ್ಟುಗಳನ್ನು ಎದುರಿಸುತ್ತದೆ. ಈ ವ್ಯವಹಾರಗಳು ತಮ್ಮ ಮುಂದಿರುವ ತಮ್ಮದೇಯಾದ ಸಮಸ್ಯೆಯನ್ನು ಎದುರಿಸಲು ತಮ್ಮದೆಯಾದ ಜೋತೆಗಾರಿಕೆಯನ್ನು ರೂಪಿಸುತ್ತವೆ. ಇದರಿಂದಾಗಿ ಅವರು ತಾವು ಕಾರ್ಯ ಮಾಡುವ ಪರಿಸರದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆಯಿರುತ್ತವೆ, ಇದರಿಂದ ಅವರು ತಮ್ಮ ವ್ಯವಹಾರ ಸುಸೂತ್ರ ವಾಗಿ ನಡೆಸ ಬಲ್ಲರು.
ಈ ವ್ಯವಹಾರ ಪ್ರತಿಕೃತಿಯು ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ನುಡಿಗಟ್ಟಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
No comments:
Post a Comment