ಈ ಹಿಂದೆ ನಾವು ಸೇವಾವೃತ್ತಿಯ ಕೈಗಾರೀಕರಣದ ಬಗ್ಗೆ ಚರ್ಚಿಸುತ್ತ ಸೇವೆಯಬಗ್ಗೆ ಇರುವ ವ್ಯವಹಾರ ಪ್ರತಿಕೃತಿಗಳನ್ನು ಚರ್ಚಿಸಿದ್ದೇವೆ, ಇಂದಿನ ಅಂಕಣದಲ್ಲಿ ಉತ್ಪನ್ನದ ಸೇವೀಕರಣದ ಬಗ್ಗೆ ತಿಳಿದುಕೊಳ್ಳೋಣ.
ಯಾವುದೇ ದೊಡ್ಡ ಮೊತ್ತದ ನಿವೇಶನ ಹೂಡಿ ಉತ್ಪನ್ನವನ್ನು ಖರೀದಿಸುವಾಗ ತುಂಬಾ ಯೋಚನೆಗಳು, ಪ್ರಶ್ನೆಗಳು ನಮ್ಮ ಮನಸಿನಲ್ಲಿ ಓಡಾಡುತ್ತಲಿರುತ್ತವೆ. ಇದರಲ್ಲಿ ಕೆಲವು ಹೀಗಿವೆ:
- ಆ ಉತ್ಪನ್ನದ ಪೂರ್ಣ ಉಪಯೋಗವನ್ನು ತಿಳಿದುಕೊಳ್ಳಲು ಸಹಕಾರ ಬೇಕೆನ್ನಿಸುತ್ತದೆ
- ಆ ಉತ್ಪನ್ನವನ್ನು ಖರೀದಿಯ ಮುಂಚೆ ಚೆನ್ನಾಗಿ ಪರಿಶೀಲಿಸಬೇಕಾಗುತ್ತದೆ
- ನಿವೇಶನದ ಮೊತ್ತ ಹೆಚ್ಚಿದ್ದರಿಂದ ಅದನ್ನು ಒಂದೇ ಬರಿ ಹೂಡುವುದು ಕಷ್ಟ
ಇಂತಹ ಉತ್ಪನ್ನಗಳ ಇನ್ನೊಂದು ಪ್ರಮುಖ ಸಮಸ್ಯೆ ಏನೆಂದರೆ ಇವುಗಳು ದಿನದ ಬಹು ಭಾಗ ನಿಶ್ಕ್ರಿಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಸ್ತುವನ್ನು ಖರಿದಿಸಿದವರಿಗೆ ಬೇಜಾರಗುವುದು ಸಹಜ. ಇಂತಹ ಸಂದರ್ಭದಲ್ಲಿ ಈ ಉತ್ಪನ್ನದ ಸೇವಿಕರಣವು ಅತ್ಯಂತ ಲಾಭದಾಯಕ ವಾಗಿರುತ್ತದೆ.
ನಾವು ನೋಡುವಂತಹ ರಸ್ತೆ ಕಾಮಗಾರಿ ಮುಂತಾದವುಗಳಲ್ಲಿ ಉಪಯೋಗಿಸುವ "ಕ್ರೇನ್" ಮುಂತಾದವುಗಳು ಇದೆ ವ್ಯವಹಾರ ಪ್ರತಿಕೃತಿಯ ಉದಾಹರಣೆಗಳು. ಇಂದಿನ ಸಾಫ್ಟ್ವೇರ್ ಕಂಪನಿಗಳಷ್ಟೇ ಅಲ್ಲದೆ, ಊರಿನಲ್ಲಿರುವ ರೈತರೂ ಸಹ ಟ್ರಾಕ್ಟರ್ ಇತ್ಯಾದಿ ಕೃಷಿ ಯಂತ್ರಗಳನ್ನು ಹೀಗೆ ಉಪಯೋಗಿಸುತ್ತಾರೆ.
ನಾನು ಕಂಡ ವ್ಯವಹಾರ ಪ್ರತಿಕೃತಿಗಳಲ್ಲಿ ಅತ್ಯಂತ ಹೆಚ್ಚಿನ ಸಾಮಾಜಿಕ ಕಾಳಜಿಯುಳ್ಳ ಪ್ರತಿಕೃತಿಗಳಲ್ಲಿ ಇದಾಗಿದೆ.
No comments:
Post a Comment