Pages

Monday, April 25, 2011

ವ್ಯವಹಾರ ಪ್ರತಿಕೃತಿ - ಸಂಪರ್ಕ ಜಾಲ

ಈ ಹಿಂದಿನ ಅಂಕಣಗಳಲ್ಲಿ ನಾವು ಮಾಹಿತಿಯ ಲಭ್ಯತೆಯ ಅಸಮತೋಲನ ಮತ್ತು ಅದರಿಂದ ವ್ಯವಹಾರದ ಮೇಲಾಗುವ ಪರಿಣಾಮದ ಬಗ್ಗೆ ತಿಳಿದು ಕೊಂಡೆವು. ಗ್ರಾಹಕರ ಸಮೂಹದ ಮಾದರಿಯನ್ನು ಅರಿಯುವುದರ ವ್ಯಾವಹಾರಿಕ ಉಪಯೋಗವನ್ನು ಅಲ್ಲಗೆಳೆಯಲಾಗದು. ಇವತ್ತಿನ ಈ ಅಂಕಣ ಮಾಹಿತಿ ಕಲೆಹಾಕುವಿಕೆಯ ಬಗ್ಗೆಯಾಗಿದೆ.

ಈಗಿನ ಅಂತರ್ಜಾಲ ಯುಗದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳಾದ Facebook, Orkut, My space ಇತ್ಯಾದಿಗಳನ್ನು ನಮ್ಮಲ್ಲಿ ಹೆಚ್ಚಿನವರು ಉಪಯೋಗಿಸುತ್ತಿರುವರು. ಈ ಸಂಪರ್ಕ ಜಾಲಗಳು ಹೇಗೆ ವ್ಯವಹಾರಿಕೆ ಮೌಲ್ಯವನ್ನು ಪಡೆದು ಕೊಳ್ಳುತ್ತವೆ? ಅವುಗಳು ವ್ಯವಹಾರ ಜಗತ್ತಿಗೆ ಬೇಕಾದ ಮಾಹಿತಿಗಳ ಸಂಗ್ರಹದ ಮೂಲಕ ಮತ್ತು ಇತರ ಸಾಮರ್ಥ್ಯಗಳಿಂದ ಮೌಲ್ಯವನ್ನು ಪಡೆದುಕೊಂಡು ಹಣ ಸಂಪಾದಿಸುತ್ತಾರೆ.

ಸಾಮಾಜಿಕ ಸಂಪರ್ಕ ಜಾಲಗಳು, ಜಾಹಿರಾತುಗಳು ಮತ್ತು ಪ್ರೋತ್ಸಾಹಿಕ ಮಾಹಿತಿಗಳನ್ನು ಬಿತ್ತರಿಸುವ ಮೂಲಕ ನೇರವಾಗಿ ಹಣ ಸಂಪಾದಿಸಬಹುದೆಂಬುದು ಸಹಜವಾಗಿ ನಾವು ವಿಚಾರಿಸಬಹುದಾದ ಅಂಶ. ಆದರೆ ಇವಲ್ಲದೆ ನಿಜವಾಗಿ ಈ ಸಂಪರ್ಕ ಜಾಲಗಳಿಗೆ ಮೌಲ್ಯ ಸಿಗುವುದು ಬೇರೆಯೇ ಕಾರಣದಿಂದ!

ನಾವು ಈ ಸಂಪರ್ಕ ಜಾಲಗಳಲ್ಲಿರುವಾಗ ನಮಗೆ ಗೊತ್ತಿಲ್ಲದೆಯೋ ಅಥವಾ ಗೊತ್ತಿದ್ದೋ, ಉದ್ದೇಶವಿಲ್ಲದೆಯೋ ಅಥವಾ ಉದ್ದೇಶ ಪೂರ್ವಕವಾಗಿಯೋ ನಮ್ಮ ಬಗೆಗಿನ ವಿಚಾರಗಳನ್ನು ಹೊರಹಾಕುತ್ತೇವೆ. ನಮ್ಮ ಇಷ್ಟಗಳು, ನಮ್ಮ ಹವ್ಯಾಸಗಳ ಬಗ್ಗೆ, ನಮ್ಮ ಕನಸುಗಳ ಬಗ್ಗೆ, ನಮಗೆ ಆಗದ ವಿಚಾರಗಳ ಬಗ್ಗೆ ಹೀಗೆ ನಮ್ಮ ಬಗೆಗಿನ ಮಾಹಿತಿಗಳನ್ನು ಹೊರಹಾಕುತ್ತೇವೆ. ಈ ಮಾಹಿತಿಗಳು ವ್ಯವಹಾರ ಜಗತ್ತಿನಲ್ಲಿರುವ ಅನೇಕ ವ್ಯವಹಾರಗಳಿಗೆ ಅತ್ಯಂತ ಉಪಯುಕ್ತವಾದ ಗ್ರಾಹಕರ ನಡವಳಿಕೆಗಳ, ಇಷ್ಟ, ಇಷ್ಟವಿಲ್ಲದಿರುವಿಕೆ ಗಳ ಬಗೆಗಿನ ಮಾಹಿತಿಗಳಾಗಿರುತ್ತವೆ. ಆ ಮೂಲಕ ಗ್ರಾಹಕರ ಅಧ್ಯಯನವನ್ನು ಚೆನ್ನಾಗಿ ಮಾಡಬಹುದು.

ಈ ದೃಷ್ಟಿಕೋನ ದಿಂದ ನೋಡಿದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳು ವ್ಯವಹಾರಗಳಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಿದರೂ, ವಯಕ್ತಿಕ ದೃಷ್ಟಿಕೋನ ದಿಂದ ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹೊರಹಾಕುವುದು ಸಮಾಜ ಘಾತುಕ ವ್ಯಕ್ತಿಗಳು ದುರ್ಮಾರ್ಗದಲ್ಲಿ ಬಳಸಿ ಹಾನಿ ಉಂಟುಮಾಡಲು ಸಾಕು. ಹೀಗಾಗಿ ಸೂಕ್ತ ರಕ್ಷಣೆ ಮತ್ತು ವಯಕ್ತಿಕತೆಯನ್ನು ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ, ಈ ಸಾಮಾಜಿಕ ಸಂಪರ್ಕ ಜಾಲಗಳಲ್ಲಿ. ಇವುಗಳನ್ನು ಸೂಕ್ತವಾಗಿ ನೀಡಿ ಬಳಕೆದಾರರಿಗೆ ಸಮಾಜ ಘಾತುಕ ವ್ಯಕ್ತಿಗಳಿಂದ ಮುಕ್ತವಾದ ಜಾಲವನ್ನು ನೀಡುವ ಸಂಪರ್ಕ ಜಾಲಗಳು ಇಂದು ಮುಂಚೂಣಿಯಲ್ಲಿವೆ. ಆ ಮೂಲಕ ಸಾಮಾಜಿಕ ಸಂಪರ್ಕ ಜಾಲಗಳ ವ್ಯವಹಾರಕ್ಕೂ ಉತ್ತಮ ಲಾಭವಾಗುತ್ತಿವೆ.

ಆಂಗ್ಲ ಅಂಕಣ:http://somanagement.blogspot.com/2011/04/business-model-networks.html

No comments:

Post a Comment