Pages

Tuesday, April 26, 2011

ವ್ಯವಹಾರ ಪ್ರತಿಕೃತಿ - ಆನ್ ಲೈನ್ ಮಾಹಿತಿ ವಿನಿಮಯ

ಈ ಹಿಂದಿನ ಅಂಕಣದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳ ಬಗ್ಗೆ ಅರಿತೆವು. ಇಂದು ಆನ್ ಲೈನ್ ಮಾಹಿತಿ ವಿನಿಮಯ ಬಗ್ಗೆ ತಿಳಿಯೋಣ.

ಈ ಹಿಂದಿನ ಅಂಕಣದಲ್ಲಿ ಮಾಹಿತಿಯ ವ್ಯಾವಹಾರಿಕ ಮಹತ್ವದ ಬಗ್ಗೆ ಅರಿತೆವು. ಬಹು ಮುಖ್ಯವಾದ ಮತ್ತು ಸೂಕ್ಷ್ಮವಾದ ಸಂವೇದನಾಶೀಲ ಮಾಹಿತಿಗಳು ವ್ಯವಹಾರಕ್ಕೆ ಬಹಳ ಉಪಯೋಗವನ್ನು ನೀಡುತ್ತದೆ ಜೊತೆಗೆ ಸಮಾಜದ ಬಗೆಗಿನ ಗಹನವಾದ ವಿಚಾರಗಳು ಈ ಮಾಹಿತಿಗಳ ಮೂಲಕ ತಿಳಿಯುವುದರಿಂದ ಅತ್ಯಂತ ಗುರುತರವಾದ ಮುನ್ನಡೆ ಒಬ್ಬನಿಗೆ ಸಿಗುವುದು. ಈ ಕಾರಣಗಳಿಂದಾಗಿಯೇ ಇಂದು ನಾವು ವಿವಿಧ ನ್ಯೂಸ್ ಚಾನೆಲ್ ಗಳು, ಸರ್ಕಾರದ ಯೋಜನೆಗಳ ಬಗ್ಗೆ, ಕಾನೂನುಗಳ ಬಗ್ಗೆ, ಅಲ್ಲದೆ ಜನರ ಮಾನಸಿಕ ಮಿಡಿತಗಳ ಬಗ್ಗೆ, ಇವೇ ಮುಂತಾದ ಮಾಹಿತಿಗಳನ್ನು ನೀಡುತ್ತವೆ, ಮತ್ತು ಇವು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ.

ಬಹಳ ಹಿಂದಿನಿಂದಲೂ "ಇತಿಹಾಸ ಮರುಕಳಿಸುತ್ತದೆ" ಎಂಬುದನ್ನು ಹೇಳುತ್ತಾರೆ, ಈ ಪ್ರಕಾರವಾಗಿ ಇತಿಹಾಸದ ಬಗ್ಗೆ ಅರಿವಿರುವುದು ನಮಗೆ ಆತ್ಮವಿಶ್ವಾಸದಿಂದ ಮುನ್ನುಗ್ಗಲು ಸಹಕಾರಿಯಾಗುತ್ತದೆ.

ಇಂತಹ ವ್ಯಾವಹಾರಿಕ ಉಪಯುಕ್ತವಾದ ಐತಿಹಾಸಿಕ ಮಾಹಿತಿ ಒಂದೆಡೆಯಲ್ಲಿಯೇ ಲಭಿಸಿದರೆ ಅಂತಹ ಮಾಹಿತಿ ಬಹಳ ಮೌಲ್ಯದ್ದಾಗಿರುವುದು. ಇಂತಹ ಮಾಹಿತಿಗಳ ಅತಿ ದೊಡ್ಡ ಭಂಡಾರಗಳಲ್ಲಿ "ಹಾರ್ವರ್ಡ್ ಬಿಸಿನೆಸ್ಸ್ ರೆವ್ಯುವ್ ಕೆಸಸ್" ಬಹು ಪ್ರಸಿದ್ಧವಾದುದು. ಈ ರೀತಿಯ ಜ್ಞಾನದಾಗರವು ವ್ಯವಹಾರಲ್ಲಿರುವ ವ್ಯಕ್ತಿಗಳಿಗೆ ಅತ್ಯಂತ ಅಗತ್ಯವಾದ ಸ್ಪರ್ಧಾತ್ಮಕ ಮುನ್ನಡೆಯನ್ನು ನೀಡುವುದರ ಮೂಲಕ ಮಿಲಿಯಗಟ್ಟಲೆ ಬೆಲೆಯುಲ್ಲವುಗಳಾಗಿರುತ್ತದೆ. ಇಂತಹ ಮೌಲ್ಯವುಳ್ಳ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಬೆಲೆ ಕೊಟ್ಟು ಪಡೆಯಬೇಕೆಂದು ಮಾಡಿದಾಗ ಇದೊಂದು ಲಾಭದಾಯಕ ವ್ಯವಹಾರವಾಗುವುದಲ್ಲವೇ?

ಸರಳ ಆದರೂ ಪ್ರಭಾವಶಾಲಿ!!

ಆಂಗ್ಲ ಅಂಕಣ:
http://somanagement.blogspot.com/2011/04/business-model-online-content.html

No comments:

Post a Comment