Pages

Thursday, April 28, 2011

ವ್ಯವಹಾರ ಪ್ರತಿಕೃತಿ - ಮೌಲ್ಯ ವರ್ಧಿತ ವಿತರಣೆ

ಈ ಹಿಂದಿನ ಅಂಕಣದಲ್ಲಿ ದುಬಾರಿಬೆಲೆಯ ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿದೆವು, ಅದರಲ್ಲಿ ಕಂಪನಿಗಳು ಹೊಸತಾದ ಮತ್ತು ವಿಭಿನ್ನವಾದ ಒಂದು ವಿಚಾರವನ್ನು ತಮ್ಮ ಉತ್ಪಾದನೆಗಳಿಗೆ ಅಳವಡಿಸುವ ಮೂಲಕ ಹೆಚ್ಚಿನ ಬೆಲೆಯನ್ನು ವಿಧಿಸುವುದು ಸಾಧ್ಯವಾಗುವುದು. ಇಂದು ನಾವು ಮೌಲ್ಯ ವರ್ಧಿತ ವಿತರಣೆ ಒಂದು ಪ್ರತಿಕೃತಿಯಾಗಿ ಹೇಗೆ ಎಂದು ಅರಿಯೋಣ.

ನಾವು ನಮ್ಮ ಸುತ್ತ ಮುತ್ತಲಿರುವ ಕೈಗಾರಿಕೆಗಳನ್ನು ಇತರ ಕಂಪನಿಗಳನ್ನು ಗಮನಿಸಿದಾಗ ನಮಗರಿವಾಗುವುದೇನಂದರೆ ಹೆಚ್ಚಿನವು ಕೇವಲ ಬಿಡಿ ಭಾಗಗಳನ್ನು ಮಾತ್ರ ತಯಾರಿಸುತ್ತಿವೆ. ಇನ್ನು ಕೆಲವು ಕಂಪನಿಗಳು ಇವೆಲ್ಲ ಬಿಡಿ ಭಾಗಗಳನ್ನು ಒಟ್ಟು ಜೋಡಿಸಿ ಗ್ರಾಹಕರಿಗೆ ಅಗತ್ಯವಾದ ಉತ್ಪನ್ನಗಳನ್ನು ನೀಡುತ್ತವೆ.

ಹೆಚ್ಚಿನ ಉತ್ಪನ್ನಗಳ ಬಳಕೆದಾರರು ಉತ್ಪನ್ನದ ಉತ್ತಮ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಆಸಕ್ತಿ ಹೊಂದಿರುವರು. ಈ ಉತ್ಪನ್ನಗಳ ಉತ್ಪಾದನೆ ಮತ್ತು ಅಭಿವೃದ್ಧಿಯ ಬಗೆಗೆ ಕೆಲವೇ ಕೆಲವು ಮಂದಿ ಮಾತ್ರ ಯೋಚಿಸುವರು. ಈ ರೀತಿಯ ಸಂದರ್ಭ ಇರುವಾಗ ಕಂಪನಿಗಳು ಉತ್ಪನ್ನದ ಮೂಲಕ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆಯುವ ಅವಕಾಶವಿರುತ್ತದೆ. ಹೀಗಾಗಿ ಕಂಪನಿಗಳು ಉತ್ಪನ್ನದ ಮೂಲ ಉತ್ಪಾದನೆಯನ್ನು ಹೊರ ಗುತ್ತಿಗೆ ನೀಡಿ, ಉತ್ಪನ್ನದ ಬಳಕೆ ಹೆಚ್ಚಾಗಲು ವಿಧ ವಿಧದ ಉತ್ತಮ ಲಕ್ಷಣಗಳನ್ನು ಸೇರಿಸುವಲ್ಲಿ ತೊಡಗುವವರು.

ಇಷ್ಟೆಲ್ಲಾ ಸೇರಿಸಿ ಉತ್ಪನ್ನವನ್ನು ಉತ್ತಮಗೊಳಿಸಿದರೂ ಮಾರುಕಟ್ಟೆಯಲ್ಲಿ ಉತ್ಪನ್ನದ ಏಳು ಬೀಳು ಗಳ ಅನುಭವಕ್ಕೆ ಕಡೆಯದಾಗಿ ಗ್ರಾಹಕರಿಗೆ ಮಾರುವ ವಿತರಕನ ಮೇಲೆ ಅವಲಂಬಿತವಾಗಿರುವುದು. ಕೇವಲ ಉತ್ಪನ್ನವಷ್ಟೇ ಅಲ್ಲದೆ ಆ ನಂತರದ ಸೇವೆಗಳು ಎಲ್ಲವೂ ಸೇರಿ ಉತ್ಪನ್ನದ ಮೌಲ್ಯವನ್ನು ಮಾರುಕಟ್ಟೆಯಲ್ಲಿ ನಿರ್ಧರಿಸುತ್ತದೆ. ಹೀಗಾಗಿ ಈ ವಿತರಕನು ಉತ್ಪನ್ನಕ್ಕೆ ಹೆಚ್ಚಿನ ಮೌಲ್ಯವನ್ನು ಗ್ರಾಹಕರಿಗೆ ನೀಡುವ ಉತ್ತಮ ಅನುಭವದ ಮೂಲಕ ಕೊಡುವನು. ಅದು ಉತ್ಪನ್ನಗಲಿಡುವ ಉಗ್ರಾಣ (ಸ್ಟೋರ್) ಆಗಿರಬಹುದು, ಗ್ರಾಹಕರೊಡನೆ ವ್ಯವಹರಿಸುವ ಪರಿಯಾಗಿರಬಹುದು ಒಟ್ಟಿನಲ್ಲಿ ಗ್ರಾಹಕರಿಗೆ ನೀಡುವ ಒಳ್ಳೆಯ ಅನುಭವ ಮತ್ತು ವಿಶ್ವಾಸ ವಿತರಕನಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ, ಮತ್ತು ಈ ಮೂಲಕ ವಿತರಕರು ಹೆಚ್ಚಿನ ಹಣವನ್ನು ಗಳಿಸುವರು.

ಆಂಗ್ಲ ಅಂಕಣ: http://somanagement.blogspot.com/2011/04/business-model-value-added-reseller.html

No comments:

Post a Comment