Pages

Tuesday, May 3, 2011

ವ್ಯವಹಾರ ಪ್ರತಿಕೃತಿ - ಏಲಂ (ಹರಾಜು)

ಉತ್ಪನ್ನವು ಮಾರಾಟವಾಗುವಂತಹ ಬೆಲೆಯನ್ನು ನಿಗದಿ ಪಡಿಸುವುದು ಯಾವುದೇ ಕಂಪನಿಗೆ ಒಂದು ಬಹು ಮುಖ್ಯವಾದ ಚಟುವಟಿಕೆಯಾಗಿರುತ್ತದೆ. ಉಳಿದೆಲ್ಲ ಅಂಶಗಳು ಸರಿಯಾಗಿರಬಹುದು, ಆದರೆ ಬೆಲೆಯನ್ನು ತಪ್ಪಾಗಿ ನಿಗದಿ ಪಡಿಸಿರಬಹುದು, ಆಗ ನಿಮ್ಮ ನಷ್ಟವನ್ನು ತಪ್ಪಿಸಲು ಸಾಧ್ಯವಿಲ್ಲ! ಅರ್ಥ ಶಾಸ್ತ್ರದ ಸುಂದರತೆ ಇರುವುದೇ ಅದು ಮಾಡುವ ಮತ್ತು ನಂಬುವ ಹೇಳಿಕೆಗಳಲ್ಲಿ, ಮಾರುಕಟ್ಟೆಯ ವ್ಯಾಖ್ಯಾನವೇ ಹೇಳುವಂತೆ ಮಾರುಕಟ್ಟೆಯ ಬೆಲೆಯನ್ನು ಮಾರುವವ ಮತ್ತು ಕೊಳ್ಳುವವ ರ ನಡುವಿನ ಮಾತುಕತೆಗಳಿಂದಲೇ ನಿರ್ಧಾರ ಮಾಡಬಹುದು. ಕೇವಲ ಉತ್ಪಾದನ ವೆಚ್ಚದಷ್ಟಿನ ಬೆಲೆಯು ಮಾರುವವ ಮತ್ತು ಕೊಳ್ಳುವವರಿಗೆ ಒಂದು ಉತ್ತಮ ವ್ಯವಹಾರ ಒಪ್ಪಂದವಾಗಿರಲಾರದು, ಆದರೆ ಮಾರುಕಟ್ಟೆಯ ಬೆಲೆ ಇದನ್ನು ಸಾಧಿಸುವುದು. ಏಲಂ ಅಥವಾ ಸಾಮಾನ್ಯ ಭಾಷೆಯಲ್ಲಿ ಹರಾಜು ಹಾಕುವುದು ಮಾರುಕಟ್ಟೆಯ ಸೊಬಗನ್ನು ಸವಿಯುವ ಒಂದು ವಿಧಾನ. ಏಲಂ ಪ್ರಕ್ರಿಯೆಯಲ್ಲಿಯೇ ಹಲವಾರು ವಿಧಿವಿಧಾನಗಳಿವೆ, ಅವುಗಳನ್ನು ಮುಂದೆ ನೋಡೋಣ.

ಸಾಮಾನ್ಯವಾಗಿ ನಡೆಸುವ ಹಳೆಯ ಕಾಲದಿಂದ ನಡೆದು ಬಂದ ಹರಾಜು ಪ್ರಕ್ರಿಯೆಗೆ ತನ್ನದೇ ಆದ ಇತಿಮಿತಿಗಳಿವೆ. ಆದರೆ ಆನ್ ಲೈನ್ ಮಾದರಿಯ ಹರಾಜು ಪ್ರಕ್ರಿಯೆ ಹೆಚ್ಚು ಜನರನ್ನು ತನ್ನೆಡೆ ಸೆಳೆಯಬಲ್ಲದು. ಈ ಆನ್ ಲೈನ್ ಮಾದರಿಯ ಹರಾಜಿನ ಮುಖ್ಯವಾದ ಲಾಭವೆಂದರೆ ಭೌಗೋಲಿಕ ಸರಹದ್ದುಗಳನ್ನು ಮೀರಿದ ವ್ಯಾಪ್ತಿಗೆ ತಲುಪುವುದು, ಸಂಗ್ರಹಣೆ ಮತ್ತು ನಿರ್ವಹಣೆಯ ವೆಚ್ಚ ಕಡಿಮೆಗೊಳಿಸುವುದು, ವಿವಿಧ ವರ್ಗಗಳ ಜನತೆಯನ್ನು ತಲುಪುವುದು. ಆದರೆ ಇದರ ಮುಖ್ಯವಾದ ಕೊರತೆಯೆಂದರೆ ಕೊಳ್ಳುವ ಗ್ರಾಹಕನಿಗೆ ತಾನು ಕೊಳ್ಳುವ ಉತ್ಪನ್ನದ ಸಂಪೂರ್ಣ ಅನುಭವ ಸಿಗದಿರುವುದು.

ಇ ಕಾಮರ್ಸ್ ನಲ್ಲಿ ಈ ಪ್ರಕ್ರಿಯೆಗೆ ಮೀಸಲಾಗಿ ಅಮೆಜಾನ್, ಇ ಬೇ ಇತ್ಯಾದಿ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ "ಮಾರುಕಟ್ಟೆ" ಯನ್ನು ನಡೆಸುತ್ತಿವೆ ಅಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ವ್ಯವಹಾರ ಪ್ರತಿಕೃತಿಯು ಹಲವಾರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅಳವಡಿಸಿ ಕೊಂಡಿದ್ದು ಗಣನೀಯ ಮಟ್ಟದಲ್ಲಿ ಯಶಸ್ಸನ್ನೂ ಕಂಡಿವೆ. ಇದರ ಬಗ್ಗೆ ಇನ್ನು ಆಳವಾಗಿ ಮುಂದೆ ತಿಳಿಯೋಣ.

ಆಂಗ್ಲ ಅಂಕಣ:
http://somanagement.blogspot.com/2011/05/business-model-auction.html

No comments:

Post a Comment