Pages

Tuesday, May 17, 2011

ಕಾರ್ಯ ತಂತ್ರ

ಈ ಹಿಂದ ಅಂಕಣಗಳಲ್ಲಿ ನಾವು ವ್ಯವಹಾರದ ಅತ್ಯಂತ ಮುಖ್ಯ ಭಾಗವಾದ ವ್ಯವಹಾರ ಪ್ರತಿಕೃತಿಗಳ ಬಗ್ಗೆ ಅರಿತೆವು. ವ್ಯವಹಾರ ಪ್ರತಿಕೃತಿ ಯು ವ್ಯವಹಾರಕ್ಕೆ ಮೂಲ ಅಡಿಪಾಯವನ್ನು ಅಥವಾ ಆದಾಯದ ಮಾರ್ಗವನ್ನು ರೂಪಿಸಿ ವ್ಯವಹಾರ ಮುನ್ನಡೆಯುವಂತೆ ಮಾಡಿದರೂ, ವ್ಯವಹಾರದ ಯಶಸ್ಸನ್ನು ಅದು ಖಚಿತಗೊಳಿಸಲಾಗದು.

ವ್ಯವಹಾರದ ಜಗತ್ತು ಬಹುಮುಖವಾದ ವಿವಿಧ ವಿಚಾರಗಳಿಂದ ಅನಿಶ್ಚಿತೆಗಳಿಂದ ಕೂಡಿದೆ, ಅವು ಆಂತರಿಕವಾಗಿ ಮಾನವ ಸಂಪನ್ಮೂಲ, ಕಾರ್ಯವಿಧಾನ ಗಳಿಂದಾಗಿರಬಹುದು ಅಥವಾ ಬಾಹ್ಯವಾಗಿ ಸರ್ಕಾರದ ಕಾನೂನುಗಳಿಂದ ಕೂಡ ಆಗಿರಬಹುದು. ಇವೆಲ್ಲವೂ ವ್ಯವಹಾರಕ್ಕೆ ಅತ್ಯಂತ ಅನಿಶ್ಚಿತತೆಯನ್ನು ಸೃಷ್ಟಿಸಿ ಒಂದು ಯಶಸ್ವಿಯಾಗಿ ನಡೆಯುತ್ತಿರುವ ವ್ಯವಹಾರವು ಈ ಬಗೆಯ ಬದಲಾವಣೆಗಳಿಗೆ ಹೊಂದಿಕೊಳ್ಳದಿದ್ದಲ್ಲಿ ಬುಡ ಮೇಲು ಗೊಳಿಸಿ ಸಂಪೂರ್ಣವಾಗಿ ನಶಿಸಲು ಕಾರಣವಾಗುವುವು. ಹೆಚ್ಚಿನ ಸಂದರ್ಭಗಳಲ್ಲಿ ಈ ಬದಲಾವಣೆಗಳು ಕಂಪನಿಗಳ ವ್ಯವಹಾರದ ದಿಕ್ಕನ್ನೇ ಬದಲಾಯಿಸುವಷ್ಟು ಪ್ರಭಾವಯುತವಾಗಿರುತ್ತದೆ.

ಇದಕ್ಕಾಗಿಯೇ ಶಕ್ತಿಯುತ ಕಾರ್ಯತಂತ್ರ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಾವು ಅನೇಕ ಪ್ರಕಾರದ ಕಾರ್ಯ ತಂತ್ರಗಳ ಬಗ್ಗೆ ಮತ್ತು ಅವುಗಳು ವ್ಯವಹಾರದ ರಥವನ್ನು ಬದಲಾವಣೆಗಳಿಗೆ ತಕ್ಕಂತೆ ಹೇಗೆ ಸಮರ್ಥವಾಗಿ ನಡೆಸಿದವು ಎನ್ನುವುದರ ಬಗ್ಗೆ ಅರಿಯೋಣ. ಇವೆಲ್ಲವುದರ ಹಿಂದಿನ ಚಿಂತನ ಪಥವನ್ನು ಅರಿತು ಕಾರ್ಯ ತಂತ್ರ ರೂಪಿಸುವದನ್ನು ರೂಢಿಸಿಕೊಳ್ಳುವುದು ಉತ್ತಮ ವ್ಯವಹಾರದ ಆರಂಭದ ಲಕ್ಷಣ.

No comments:

Post a Comment