ಈ ಹಿಂದಿನ ವ್ಯವಹಾರ ಯುಕ್ತಿಯ ಅಂಕಣದಲ್ಲಿ, ನಾವು ಹೇಗೆ ಹೋಂಡ ಕಂಪನಿಯು ಯಶಸ್ವಿಯಾಗಿ ಮೋಟರ್ ಸೈಕಲ್ ಉದ್ಯಮದಲ್ಲಿ ಮಾರುಕಟ್ಟೆಯಲ್ಲಿ ಪಾರುಪತ್ಯ ಸ್ಥಾಪಿಸಿತು ಎನ್ನುವುದನ್ನು ಅರಿತೆವು. ಇದು ಯಶಸ್ಸಿನ ಭಾಗವಿರುವ ಕತೆಯಾದರೆ, ಯಶಸ್ವಿಯಾಗದೆ ಮಾರುಕಟ್ಟೆಯಲ್ಲಿ ಹಿಂದುಳಿದ ಕಂಪನಿಗಳಿಂದಲೂ ಕೂಡ ವ್ಯವಹಾರ ಯುಕ್ತಿಯ ಬಗ್ಗೆ ಅರಿಯಬಹುದು.
ನಾವು ಇದಕ್ಕಾಗಿ ಇನ್ನೊಂದು ಆಟೋ ಮೊಬೈಲ್ ಕಂಪನಿಯಾದ ಯುಗೋ ಎಂಬ ಕಂಪನಿಯ ಬಗ್ಗೆ ಅರಿಯೋಣ. ಯುಗೋ ೧೯೮೦ ರ ದಶಕದ ಮಧ್ಯದಲ್ಲಿ ಅಮೆರಿಕವನ್ನು ಪ್ರವೇಶಿಸಿತು. ಅದು ತನ್ನನ್ನು ಮಾರುಕಟ್ಟೆಯಲ್ಲಿ ಮುಂಚೂಣಿಯಾಗಿ ಸ್ಥಾಪಿಸಲು ಕಡಿಮೆ ಬೆಲೆಯ ದಾರಿಯಿಂದ ಶುರು ಮಾಡಿತು. ಕಡಿಮೆ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ಸುಲಭವಾಗಿ ಪಾರುಪತ್ಯವನ್ನು ಸ್ಥಾಪಿಸಬಹುದೆಂದು ನಂಬಿತು. ಆದರೆ ಅಮೇರಿಕಾದ ಗ್ರಾಹಕರು ತಮ್ಮ ಸುರಕ್ಷಿತವಾದ ಪ್ರಯಾಣವನ್ನು ತಮ್ಮ ಕಡಿಮೆ ಬೆಲೆಯಲ್ಲಿ ಸಿಗುವ ಆಟೋ ಮೊಬೈಲ್ ಗಳಲ್ಲಿ ಮುಖ್ಯವಾಗಿ ಬಯಸುವರು ಎಂಬುದನ್ನು ಯುಗೋ ಕಂಪನಿ ಪರಿಗಣಿಸಲಿಲ್ಲ. ಯುಗೋ ಕಂಪನಿಯ ಕಾರುಗಳು ಕಡಿಮೆ ಬೆಲೆಯದ್ದಾಗಿದರೂ ಸುರಕ್ಷತೆ ಮತ್ತು ಗುಣಮಟ್ಟದ ಸಾಧನೆಗಳನ್ನು ಇತರ ಕಾರುಗಳೊಂದಿಗೆ ಹೋಲಿಸಿದಾಗ ಉತ್ತಮವಾಗಿರಲಿಲ್ಲ. ಅಲ್ಲದೆ ಯುಗೋ ಕಾರ್ ಗಳು ಮಾರುಕಟ್ಟೆಗೆ ಬಂದಾಗ ಕಾರ್ ನ ಬೆಲೆ ಇತರ ಕಂಪನಿಯ ಉಪಯೋಗಿಸಿದ ಕಾರ್ ಗಳಿಗಿಂತ ಹೆಚ್ಚು ಬೆಲೆಯದ್ದಾಗಿತ್ತು. ಇತರ ಕಂಪನಿಯ ಬಳಸಿದ ಕಾರ್ ಗಳು ಸುರಕ್ಷತೆ ಮತ್ತು ಗುಣಮಟ್ಟದ ಸಾಧನೆಗಳಲ್ಲಿ ಯುಗೋ ಕ್ಕಿಂತ ಉತ್ತಮವಾಗಿತ್ತು. ಹೀಗಾಗಿ ಯುಗೋ ಕಾರ್ ಗಳು ಮಾರಾಟವಾಗಲೇ ಇಲ್ಲ.
ಈ ಎರಡು ಕಂಪನಿಗಳ ಕತೆಗಳು (ಹೋಂಡ ಮತ್ತು ಯುಗೋ) ಒಂದು ಸತ್ಯವನ್ನು ವಿಷದಿಸುವುದೇನಂದರೆ ಕೇವಲ ಆರಂಭಿಕ ವಾದ ಕಾರ್ಯತಂತ್ರಗಳಿಂದ ಮಾತ್ರವೇ ಕಂಪನಿಯ ಮುನ್ನಡೆ ಸಾಧ್ಯವಾಗದು. ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ವ್ಯವಹಾರದ ಯುಕ್ತಿಯನ್ನು ಬದಲಿಸಿಕೊಳ್ಳುವುದು ಯಶಸ್ಸಿನ ಗುಟ್ಟು.
No comments:
Post a Comment