Pages

Monday, May 23, 2011

ವ್ಯಾವಹಾರಿಕ ಯುಕ್ತಿ - ೫

ಒಂದು ಪ್ರಮುಖವಾದ ಗೊಂದಲ ಹೆಚ್ಚಿನ ಆರಂಭಿಕವಾಗಿ ವ್ಯಾವಹಾರಿಕ ಯುಕ್ತಿಯನ್ನು ರೂಪಿಸುವವರಲ್ಲಿ ಇರುವುದೇನೆಂದರೆ ಕಾರ್ಯ ಕ್ಷಮತೆ ಮತ್ತು ಉತ್ತಮ ಯುಕ್ತಿಯ ಬಗೆಗಿರುವುದು. ಸರಳವಾಗಿ ಇದನ್ನು ನಿಮ್ಮನ್ನು ನೀವು ಇದು ನೀವು ಎಣಿಸಿದ್ದ ಗುರಿಯನ್ನು ತಲುಪುವುದೇ ಅಥವಾ ತಲುಪಲು ದಾರಿ ಮಾಡುವುದೇ ಎನ್ನುವುದರ ಮೂಲಕ ನಿವಾರಿಸಬಹುದು.

ಕಂಪನಿಗಳು ಕಾರ್ಯ ಕ್ಷಮತೆಯನ್ನು ಸಾಧಿಸಲು ಹಲವಾರು ಆಂತರಿಕವಾಗಿ ಬಹಳ ವಿಧಾನಗಳನ್ನು ರೂಪಿಸುವರು, ಇವುಗಳು ಸಹಜವಾಗಿ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರುವುವು. ಆದರೆ ಇದನ್ನೇ ವ್ಯಾವಹಾರಿಕ ಯುಕ್ತಿಯೆನ್ನುವುದು ಯುಕ್ತಿಯ ಅರ್ಥದ ವ್ಯಾಪ್ತಿಯನ್ನು ಮೊಟಕು ಗೊಳಿಸಿದಂತೆ ಆಗುತ್ತದೆ. ವ್ಯಾವಹಾರಿಕ ಯುಕ್ತಿಯೆನ್ನುವುದು ಒಂದು ಸಂಸ್ಥೆಯ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ರೂಪಿಸಬೇಕು.

ಕಾರ್ಯ ಕ್ಷಮತೆಯು ಕಂಪನಿಯ ವ್ಯಾವಹಾರಿಕ ಯುಕ್ತಿಯ ಭಾಗವಾಗಬೇಕೆಂದೆನು ಇಲ್ಲ. ಕೆಲವೊಮ್ಮೆ ಅತ್ಯಂತ ದಕ್ಷ ಕಾರ್ಯ ಕ್ಷಮತೆಯನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಯಲು ಬದಿಗಿರಿಸಬೇಕಾದ ಅನಿವಾರ್ಯವೂ ಬರುವುದು.

ಕಾರ್ಯ ಕ್ಷಮತೆಯ ಬಗ್ಗೆ ಮುಂದಿನ ದಿನಗಳಲ್ಲಿ ಸ್ಥೂಲವಾಗಿ ಕಾರ್ಯ ನಿರ್ವಹಣೆ ಯಾ ಅಧ್ಯಾಯದ ಅಡಿಯಲ್ಲಿ ತಿಳಿಯೋಣ. ಮುಂದಿನ ಅಂಕಣದಲ್ಲಿ ಒಂದು ಘಟನೆಯ ಮೂಲಕ ಕಾರ್ಯ ಕ್ಷಮತೆಯ ಮತ್ತು ವ್ಯಾವಹಾರಿಕ ಯುಕ್ತಿಯ ವ್ಯತ್ಯಾಸಗಳನ್ನು ಅರಿಯೋಣ.

No comments:

Post a Comment