Pages

Wednesday, May 25, 2011

ವ್ಯಾವಹಾರಿಕ ಯುಕ್ತಿ - ೬

ಹಿಂದಿನ ಅಂಕಣದ ಕಾರ್ಯ ದಕ್ಷತೆಯ ಮತ್ತು ಯುಕ್ತಿಯ ನಡುವಿನ ಸಂಬಂಧಗಳ ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇಂದು ನಾವೊಂದು ಕಾಲ್ಪನಿಕ ಮಾದರಿ ಕತೆಯನ್ನು ಶುರು ಮಾಡೋಣ.

ಹರಿ ಒಬ್ಬ ರಸ್ತೆ ಬದಿಯ ತಿನಿಸುಗಳ ವ್ಯಾಪಾರಿ. ಅವನ ದಿನದ ದುಡಿಮೆ ಉತ್ತಮವಾದ ಋತುಗಳಲ್ಲಿ ೯೦೦೦/- ವರೆಗೆ ಇರುತ್ತದೆ. ಅವನ ಅಂಗಡಿಯು ಹತ್ತಿರದ ಕಛೇರಿಗಳಲ್ಲಿ ತುಂಬಾ ಮೆಚ್ಚಿಗೆ ಪಡೆದು ಪ್ರಚಾರ ಹೊಂದಿದೆ. ೫ ನಿಮಿಷದೊಳಗೆ ಕೇಳಿದ ತಿನಿಸನ್ನು ತಯಾರಿಸಿ ನೀಡುವುದು ಅವನಿಗೆ ಸಿಕ್ಕ ಮೆಚ್ಚುಗೆಯ ಹಿಂದಿನ ರಹಸ್ಯ. ತನ್ನ ಗ್ರಾಹಕರನ್ನು ಹೆಚ್ಚು ಕಾಯಿಸದಿರುವುದರಿಂದ ಗ್ರಾಹಕರು ಇವನ ರುಚಿಕರವಾದ ತಯಾರಿಕೆಯ ವೇಗಕ್ಕೆ ಮಾರು ಹೋಗಿರುವರು.

ಅವನಿಗಿರುವ ಹಲವಾರು ವರ್ಷದ ಅನುಭವದ ಕಾರಣದಿಂದ ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಒಟ್ಟಿಗೆ ಮಾಡುವುದು ಸಾಧ್ಯವಾಗಿದೆ. ಒಂದೇ ಹೊತ್ತಿಗೆ ೫ ವಿವಿಧ ರೀತಿಯ ತಿನಿಸುಗಳ ಪ್ಲೇಟ್ ಗಳನ್ನು ಯಾವುದನ್ನೂ ಹೆಚ್ಚು ಕಡಿಮೆ ಮಿಶ್ರ ಮಾಡದೇ ತಯಾರಿಸುವ ಕಲೆ ಅವನಲ್ಲಿದೆ. ಅವನ ಈ ಕೌಶಲ್ಯದ ಕಾರಣದಿಂದಲೇ ರುಚಿಕರವಾದ ತಿನಿಸನ್ನು ಒಂದೇ ವೇಳೆಗೆ ೫ ಜನರಿಗೆ ತಯಾರಿಸಲು ಸಾಧ್ಯವಾಗಿದೆ.

ಈ ಒಂದು ಕಾಲ್ಪನಿಕ ಕತೆಯಲ್ಲಿ ಈಗ ನಾವು ಆತನ ಸಮ ಕಲೀನವಾಗಿ ಹಲವು ತಿನಿಸುಗಳನ್ನು ಒಟ್ಟಿಗೆ ಮಾಡುವುದನ್ನು ಒಂದು ವ್ಯಾವಹಾರಿಕ ಯುಕ್ತಿ ಎಂದು ಕರೆಯಲಾಗುವುದೇ? ನಿಜಕ್ಕೂ ಅಲ್ಲ. ವ್ಯಾವಹಾರಿಕ ಯುಕ್ತಿಯೆನ್ನುವುದು ಮಾಲಿಕನು ತನ್ನ ವ್ಯವಹಾರವನ್ನು ಎಲ್ಲಿಗೆ ಕೊಂಡೊಯ್ಯ ಬೇಕೆಂದಿದ್ದಾನೆ ಎನ್ನುವದರ ಬಗೆಗಾಗಿದೆ. ಆತ ಮುಂದೆ ತನ್ನದೇ ಆದ ತಿನಿಸುಗಳ ಹೆಚ್ಚಿನ ಅಂಗಡಿ ಗಳನ್ನು ತೆರೆಯಬೇಕೆಂದಿರುವೆನೆ? ದೇಶದ ದೊಡ್ಡ ಪಂಚ ತಾರ ಮಾದರಿಯ ತಿನಿಸುಗಳ ಹೋಟೆಲ್ ಹೊಂದಬೇಕೆಂದಿರುವನೆ? ಒಮ್ಮೆ ಅವನು ತನ್ನ ಗುರಿಯನ್ನು ನಿರ್ಧರಿಸಿದ ಮೇಲೆ ಅದನ್ನು ಪಡೆಯಲು ಸೂಕ್ತವಾದ ಸಂಪನ್ಮೂಲಗಳನ್ನು ಕೂಡಿಸಿಕೊಂಡು ಹೊಸ ಸಂಪನ್ಮೂಲಗಳನ್ನು ಸೇರಿಸಿ ಕೊಂಡು ಉತ್ತಮ ಕಾರ್ಯ ಕ್ಷಮತೆಯೊಂದಿಗೆ ಕೆಲಸ ನಿರ್ವಹಿಸಿ ಗುರಿ ಸಾಧಿಸುವನು.

ಕಾರ್ಯ ದಕ್ಷತೆಯು ಒಬ್ಬ ಉದ್ಯಮಿಯ ಆಶೋತ್ತರಗಳನ್ನು ವೈಭವಿಕರಿಸುವುದು ಅಷ್ಟೇ.

No comments:

Post a Comment