ಈ ಹಿಂದಿನ ಎರಡು ಅಂಕಣಗಳು ವ್ಯಾವಹಾರಿಕ ಯುಕ್ತಿಯ ಸ್ಪರ್ಧಾತ್ಮಕ ಲಾಭ ಮತ್ತು ಸ್ಪರ್ಧಾತ್ಮಕ ಸಮಾನತೆ ಬಗ್ಗೆಯಾಗಿತ್ತು. ಇಂದಿನ ಅಂಕಣದಲ್ಲಿ ನಾವು ಇನ್ನೊಂದು ಪದದ ಬಗ್ಗೆ ಅರಿಯೋಣ ಅದೇ ಸ್ಪರ್ಧಾತ್ಮಕ ಹಿನ್ನಡೆ.
ಯಾವುದೇ ಕಂಪನಿಯು ಸ್ಪರ್ಧಾತ್ಮಕ ಹಿನ್ನಡೆಯನ್ನು ಹೊಂದಲು ಬಯಸದು, ಆದರೆ ಅದರ ವ್ಯಾವಹಾರಿಕ ಯುಕ್ತಿಗಳು ಕೆಲವೊಮ್ಮೆ ಹಿನ್ನದೆಯತ್ತಲೇ ಅದನ್ನು ಕೊಂಡೊಯ್ಯಬಹುದು. ಒಂದು ಕಂಪನಿಯು ಅಳವಡಿಸುವ ಯುಕ್ತಿಯು ಯಾವುದೇ ರೀತಿಯ ಆರ್ಥಿಕ ಮೌಲ್ಯವನ್ನು ಹೆಚ್ಚಿಸದಿದ್ದಲ್ಲಿ ಅಥವಾ ಸೃಷ್ಟಿ ಮಾಡದಿದ್ದಲ್ಲಿ ಆಗ ಕಂಪನಿಯ ಯುಕ್ತಿಯು ಸ್ಪರ್ಧಾತ್ಮಕ ಹಿನ್ನಡೆಯನ್ನು ಹೊಂದಿದಂತೆ ಎಂದು ಪರಿಗಣಿಸುವರು. ಆರ್ಥಿಕ ಮೌಲ್ಯವು ಸೃಷ್ಟಿಯಾಗದಿದ್ದರೂ ಅದನ್ನು ಆರ್ಥಿಕ ಮೌಲ್ಯದ ನಾಶವೆಂದೇ ಪರಿಗಣಿಸುವರು. ಕಂಪನಿಯು ಸಮಾನಾಂತರ ಉದ್ಯಮದ ಆರ್ಥಿಕತೆಯೊಡನೆ ಸಮದೂಗಿಸಿ ಮುನ್ನಡೆಯದಿದ್ದಲ್ಲಿ ಈ ರೀತಿಯ ಸ್ಪರ್ಧಾತ್ಮಕ ಹಿನ್ನಡೆಯನ್ನು ಹೊಂದಬೇಕಾಗುತ್ತದೆ.
ನಾವು ಹಿಂದೆ ಚರ್ಚಿಸಿದ ಯುಗೋ ಕಂಪನಿಯ ಉದಾಹರಣೆಯನ್ನು ಇಲ್ಲಿಗೆ ಅಳವಡಿಸಬಹುದು. ಅದರ ಕಡಿಮೆ ಬೆಲೆಗೆ ಯಾವುದೇ ಸುರಕ್ಷತೆ ಇಲ್ಲದ ವಾಹನಗಳ ಉತ್ಪನ್ನವು ಸ್ಪರ್ಧಾತ್ಮಕ ಹಿನ್ನಡೆಯನ್ನು ಹೊಂದಲು ಕಾರಣವಾಯಿತು.
No comments:
Post a Comment