Pages

Friday, June 10, 2011

ವ್ಯಾವಹಾರಿಕ ಯುಕ್ತಿ ೧೬

ಈ ಹಿಂದಿನ ಅಂಕಣಗಳಲ್ಲಿ ನಾವು ರೂಪಗೊಂಡ (ಹೊಮ್ಮಿದ) ಯುಕ್ತಿ ಮತ್ತು ಉದ್ದೇಶಿಸಿದ ಯುಕ್ತಿಯ ಬಗ್ಗೆ ಚರ್ಚಿಸಿದೆವು. ಆದರೆ ಹೆಚ್ಚಿನ ಯುಕ್ತಿಗಾರರು ಒಂದು ಯುಕ್ತಿಯ ಯಶಸ್ಸನ್ನು ಆ ಯುಕ್ತಿಯು ಕೆಳಕಂಡ ಅಂಶಗಳಿಗೆ ಪರಿಹಾರವನ್ನು ಹೇಗೆ ನೀಡುವುದು ಅನ್ನುವುದರ ಮೇಲೆ ನಿರ್ಧರಿಸುವರೆ ಹೊರತು ಆ ಯುಕ್ತಿ ಬೆಳೆದು ಬಂದ ರೀತಿಯಿಂದಲ್ಲ.
೧. ಕಂಪನಿಯ ಶಕ್ತಿ ಸಾಮರ್ಥ್ಯ (Strength)
೨. ಕಂಪನಿಯ ಕುಂದು ಕೊರತೆಗಳು (Weakness)
೩. ಪರಿಸರದಲ್ಲಿರುವ ಅವಕಾಶಗಳು (Opportunities)
೪. ಪರಿಸರದಲ್ಲಿರುವ ಅಪಾಯಗಳು (Threats)

ಈ ನಾಲ್ಕು ಅಂಶಗಳನ್ನು ಸೇರಿಸಿ ಆಂಗ್ಲದಲ್ಲಿ ಒಂದು ಪ್ರಸಿದ್ದ ವ್ಯಾವಹಾರಿಕ ಪದ SWOT ಆಗಿದೆ. ಇದನ್ನು ಕಂಪನಿಯ ಅಧ್ಯಯನಕ್ಕೆ ಅಳವಡಿಸುವರು.

ಅವುಗಳ ವ್ಯಾಖ್ಯಾನವನ್ನು ಮಾಡೋಣ.

೧. ಕಂಪನಿಯ ಶಕ್ತಿ ಸಾಮರ್ಥ್ಯ: ಕಂಪನಿಯಲ್ಲಿನ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳು. ಈ ಮೂಲಕ ಕಂಪನಿಯು ತನ್ನ ಆರ್ಥಿಕ ಪ್ರಗತಿಯನ್ನು ಸಾಧಿಸುವುದರೊಂದಿಗೆ ಸ್ಪರ್ಧಾತ್ಮಕ ಲಾಭವನ್ನೂ ಹೊಂದಬಹುದು.೨. ಕಂಪನಿಯ ಕುಂದು ಕೊರತೆಗಳು: ಕಂಪನಿಯ ಕೆಲವು ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳು ಕಂಪನಿಗೆ ಯಾವುದೇ ರೀತಿಯ ಆರ್ಥಿಕ ಮುನ್ನಡೆಯನ್ನು ಸಾಧಿಸಲು ಬಿಡದಿರುವುದು. ಕಂಪನಿಯ ಆರ್ಥಿಕ ಮೌಲ್ಯವನ್ನು ಹೆಚ್ಚಿಸಲು ಇವುಗಳಿಂದ ಸಾಧ್ಯವಾಗದು.
೩. ಪರಿಸರದಲ್ಲಿರುವ ಅವಕಾಶಗಳು: ಕಂಪನಿಗೆ ತನ್ನ ಸ್ಪರ್ಧಾತ್ಮಕ ಸ್ಥಾನ ಮತ್ತು ಸ್ಪರ್ಧಾತ್ಮಕ ಕಾರ್ಯ ನಿರ್ವಹಿಸುವುದಕ್ಕೆ ಲಾಭವಾಗುವ ಅವಕಾಶಗಳು. ಇವುಗಳು ನಿರೀಕ್ಷಿತ ಅಥವಾ ಅನಿರೀಕ್ಷಿತ ವಾಗಿರಬಹುದು.೪. ಪರಿಸರದಲ್ಲಿರುವ ಅಪಾಯಗಳು: ಕಂಪನಿಯ ಕಾರ್ಯ ನಿರ್ವಹಣೆಗೆ ಧಕ್ಕೆ ತರುವ ಹೊರಗಿನ ಶಕ್ತಿಗಳು. ಅವುಗಳು ಒಂದು ವ್ಯಕ್ತಿಯಾಗಿರಬಹುದು, ಸಮುದಾಯವಾಗಿರಬಹುದು, ಒಂದು ಸಂಸ್ಥೆ ಕೂಡ ಆಗಿರಬಹುದು.

ಕೆಳಗೆ ಒಂದು ಚಿತ್ರದಲ್ಲಿ ಇದನ್ನು ಹೀಗೆ ಹೇಳಬಹುದು.

No comments:

Post a Comment