ಈ ಮುಂಚಿನ ಅಂಕಣ ದಲ್ಲಿ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚೆ ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಕೂಡ ಅದನ್ನೇ ಮುಂದುವರಿಸುತ್ತಾ, ಕಾರ್ಯ ನಿರ್ವಹಣೆಯನ್ನು ಅರಿಯಲು ಮತ್ತು ಅಳಿಯಲು ಉತ್ತಮವಾದ ಒಂದು ವಿಧಾನದ ಮೂಲಕ ಅರಿಯುವ ಯತ್ನ ಮಾಡೋಣ.
ಒಂದು ಸಂಸ್ಥೆಯನ್ನು ವಿವಿಧ ರೀತಿಯ ಉತ್ಪಾದಕ ಸ್ವತ್ತುಗಳು ಸ್ವಯಂ ಪ್ರೇರಿತರಾಗಿ ಸಮೂಹಗೊಂಡು ಆರ್ಥಿಕ ಲಾಭವನ್ನು ಸೃಷ್ಟಿಸುವ ಸಮೂಹವೆಂಬ ದೃಷ್ಟಿಯಿಂದ ನೋಡಬಹುದು. ಈ ಉತ್ಪಾದಕ ಸ್ವತ್ತುಗಳ ಮಾಲೀಕರು ಅವುಗಳಿಂದ ನಿರಂತರವಾದ ಸಮತ್ವದ ಆದಾಯವನ್ನು ಗಳಿಸಲಷ್ಟೇ ಬಯಸುವರು. ಈ ಆದಾಯವು ಬೇರೆ ಮೂಲಗಳಿಂದ ಬರುವ ಆದಾಯಕ್ಕಿಂತ ಹೆಚ್ಚಿನದ್ದಾಗಿರಬೇಕೆನ್ನುವುದು ಸಾಮಾನ್ಯ ವಿಚಾರ. ಅಲ್ಲದೆ ಬ್ಯಾಂಕ್ ಗಳಿಂದ ಸಿಗುವ ಬಡ್ಡಿಗಿಂತ ಹೆಚ್ಚಿನ ದರದಲ್ಲಿ ಆದಾಯ ಹೆಚ್ಚಳವಾಗುವುದು ಅತ್ಯಂತ ಕಡಿಮೆ ವ್ಯಾವಹಾರಿಕ ಆಪಾಯ ಹೊಂದಿದಂತೆ.
ಇದು ಕಾರ್ಯ ನಿರ್ವಹಣೆಯ ವ್ಯಾಖ್ಯಾನಕ್ಕೆ ಮೂಲಾಧಾರವನ್ನು ನೀಡುವುದು - "ಉತ್ಪಾದಕ ಸ್ವತ್ತುಗಳಿಂದ ಒಂದು ಸಂಸ್ಥೆಯು ಸೃಷ್ಟಿಸಲು ಇಚ್ಚಿಸುವ ಆದಾಯ ಮತ್ತು ಆ ಸ್ವತ್ತುಗಳ ಮಾಲೀಕರು ಅವುಗಳಿಂದ ಬಯಸುವ ಆದಾಯದ ಹೆಚ್ಚಳಗಳ ತುಲನೆ." ಈ ಆದಾಯ ಸ್ವತ್ತುಗಳ ಮಾಲೀಕರು ಬಯಸುವ ಆದಾಯಕ್ಕಿಂತ ಹೆಚ್ಚಾಗಿದ್ದಲ್ಲಿ ಮಾಲೀಕರು ಸ್ವತ್ತನ್ನು ಸಂಸ್ಥೆಗೆ ದೊರಕಿಸಿ ಕೊಡುವರು, ಇಲ್ಲವಾದಲ್ಲಿ ಮಾಲೀಕನು ಅತೃಪ್ತನಾಗಿ ಹೆಚ್ಚಿನ ಆದಾಯ ಬರುವ ಬೇರೊಂದೆಡೆ ತನ್ನ ಸ್ವತ್ತನ್ನು ವಿನಿಯೋಗಿಸಿ ಆ ಮೂಲಕ ಅದರ ಪರಿ ಪೂರ್ಣ ಬೆಲೆಯನ್ನು ಪಡೆಯುವನು.
ಇದರ ಬಗ್ಗೆ ಮುಂದಿನ ಅಂಕಣದಲ್ಲಿ ಒಂದು ಕಾಲ್ಪನಿಕ ಉದಾಹರಣೆಯ ಮೂಲಕ ನಿಮಗೆ ವಿವರಿಸುತ್ತೇವೆ.
No comments:
Post a Comment