Pages

Thursday, June 9, 2011

ವ್ಯಾವಹಾರಿಕ ಯುಕ್ತಿ ೧೫

ಹಿಂದಿನ ಅಂಕಣವನ್ನು ಕೆಲವರು ಇನ್ನೊಂದು ದೃಷ್ಟಿಕೋನದಿಂದ ಕೂಡ ನೋಡಬಹುದು. ಹೇಗೆಂದರೆ ಒಂದು ಕಂಪನಿಯು ತನ್ನ ಚಟುವಟಿಕೆಗಳನ್ನು ಶುರುಮಾಡುವಾಗ ಒಂದು ಪೂರ್ತಿಯಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಯಲ್ಲಿ ಪರಿಶೀಲಿಸಿದ ಸಮರ್ಪಕವಾದ ಸಿದ್ಧಾಂತವನ್ನು ಯುಕ್ತಿಯಾಗಿ ಆರಂಭಿಸುವರು ಅಂದು ಅಂದುಕೊಳ್ಳೋಣ. ಆ ನಂತರ ಕಂಪನಿಯ ವ್ಯವಸ್ಥಾಪಕರುಗಳು ಕಾಲ ಕಾಲಕ್ಕೆ ಈ ಸಿದ್ಧಾಂತವನ್ನು ಮಾರ್ಪಡಿಸಿಕೊಂಡು ಸ್ಪರ್ಧಾತ್ಮಕ ಲಾಭವನ್ನು ಹೊಂದಲು ಬಯಸುವರು.

ರೂಪಗೊಂಡ ಯುಕ್ತಿಯನ್ನು ವ್ಯವಸ್ಥಾಪಕರ ಸದ್ಯದ ಅರ್ಥಿಕ ಕಾರ್ಯವಿಧಾನಗಳನ್ನು ಅರಿತು ಅಳವಡಿಸಿಕೊಳ್ಳುವದರಲ್ಲಿನ ಅಸಾಮರ್ಥ್ಯ ಎಂದು ಕೆಲವರು ಭಾವಿಸಬಹುದು. ಆದರೆ ಇದು ಅವಕಾಶಗಳನ್ನು ಲಾಭಕ್ಕೋಸ್ಕರ ಬಳಸಿಕೊಳ್ಳಲು ಮುಕ್ತ ದ್ವಾರವನ್ನು ತೆರೆಯುತ್ತದೆ. ಈಗಿನ ಆರ್ಥಿಕ ಕಾರ್ಯವಿಧಾನಗಳನ್ನು ಅರಿತು ಅವುಗಳಿಗೆ ತಕ್ಕಂತೆ ಕಂಪನಿಯ ಯುಕ್ತಿಯನ್ನು ಸೃಷ್ಟಿಸುವುದು ಸರಿಯಾಗಿದ್ದರೂ, ಕಂಪನಿಯು ಹೊಸ ಹೊಸ ವ್ಯವಹಾರಗಳಲ್ಲಿ ತೊಡಗುವುದರಿಂದ ಗೊತ್ತಾಗದೆ ಮುಚ್ಚಿಹೋದ ಹೊಸ ಗಳಿಕೆಯ ದಾರಿಗಳು ತೆರವಾಗಿ ಕಂಪನಿಯ ಆದಾಯ ಹೆಚ್ಚು ಆಗುವುದು.

ಇನ್ನೊಂದು ರೀತಿಯಿಂದ ರೂಪಗೊಂಡ ಯುಕ್ತಿಯನ್ನು ಕಂಪನಿಯ ದ್ವಿತೀಯ ಮುನ್ನಡೆಯ ಯುಕ್ತಿ ಎಂದು ಪರಿಗಣಿಸಬಹುದು. ಈ ಕಂಪನಿಗಳು ತಾವೇ ಮಾರುಕಟ್ಟೆಯನ್ನು ಸೃಷ್ಟಿಸುವಲ್ಲಿ ಮುನ್ನಡೆಯರು ಮತ್ತು ಮುಕ್ತ ಅವಕಾಶಗಳನ್ನು ಬಳಸಿಕೊಳ್ಳುವ ತಂತ್ರಕ್ಕೂ ಕೈ ಹಾಕರು, ಕೇವಲ ಯಾರಾದರೋ ನಾಯಕತ್ವವನ್ನು ಅನುಸರಿಸುವರು. ಈ ರೀತಿ ಮಾಡುವಾಗ ಇನ್ನೊಂದು ಕಂಪನಿಯ ಯುಕ್ತಿಯ ಮೇಲೆ ಹೆಚ್ಚಾಗಿ ಕಂಪನಿಯ ನಡೆಯು ಅವಲಂಬಿತವಾಗಿರುತ್ತದೆ.

No comments:

Post a Comment