ಈ ಮೊದಲಿನ ಅಂಕಣಗಳಲ್ಲಿ ನಾವು ಸ್ಪರ್ಧಾತ್ಮಕ ಲಾಭ, ಸಮಾನತೆ ಮತ್ತು ಹಿನ್ನಡೆ ಗಳನ್ನು ನೋಡಿದೆವು. ಹಾಗೆಯೇ ನಾವು ಸ್ಪರ್ಧಾತ್ಮಕ ಲಾಭ ನೀಡುವ ಯುಕ್ತಿಯು, ಸ್ಪರ್ಧಾತ್ಮಕ ಸಮಾನತೆ ಅಥವಾ ಹಿನ್ನಡೆ ನೀಡುವ ಯುಕ್ತಿಗಿಂತ ಯಾಕೆ ಹೆಚ್ಚಿನ ಕಾರ್ಯ ನಿರ್ವಹಣೆ ಮಾಡುವುದು ಎಂಬುದನ್ನೂ ಅರಿತೆವು. ಇಲ್ಲಿ ಉದ್ಭವಿಸಲೇ ಬೇಕಾದ ಒಂದು ಪ್ರಶ್ನೆ ಕಾರ್ಯ ನಿರ್ವಹಣೆಯ ಬಗೆಗೆ.
ಕಾರ್ಯ ನಿರ್ವಹಣೆಯನ್ನು ಅನೇಕ ವಿಧಗಳಲ್ಲಿ ವ್ಯಾಖ್ಯಾನಿಸಬಹುದು ಮತ್ತು ಇದು ಒಂದೊಂದು ಕಾರ್ಯ ಕ್ಷೇತ್ರಕ್ಕೆ, ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿಯದ್ದಾಗಿರುತ್ತದೆ. ಕಾರ್ಯ ನಿರ್ವಹಣೆಗೆ ಒಂದು ಉತ್ತಮ ವ್ಯಾಖ್ಯಾನ ನೀಡುವುದು ಬಹಳ ಕಷ್ಟವೇ ಆಗಿದೆ, ಇನ್ನು ಅದನ್ನು ಅಳೆಯುವ ಮಾತೆಲ್ಲಿ? ಒಂದೇ ರೀತಿಯ ದೋಷವಿಲ್ಲದ ಅಳೆಯುವ ಮಾಪದಂಡ ಕಾರ್ಯ ನಿರ್ವಹಣೆಗೆ ಇಲ್ಲ, ಹಾಗಾಗಿ ಅನೇಕ ದೃಷ್ಟಿಕೋನಗಳನ್ನು ಅಳವಡಿಸಿಕೊಂಡು ಅಳೆದು ಆ ಮೂಲಕ ಯುಕ್ತಿಯ ವಿಶ್ಲೇಷಣೆ ಮಾಡುವುದು ಸೂಕ್ತ.
No comments:
Post a Comment