ಈ ಹಿಂದಿನ ಅಂಕಣದಲ್ಲಿ ನಾವು ಉದಾಹರಣೆಯೊಂದಿಗೆ ಬಂಡವಾಳವನ್ನು ಹೇಗೆ ಮತ್ತು ಎಲ್ಲಿ ಮತ್ತು ಯಾವ ಉದ್ಯಮದಲ್ಲಿ ವಿನಿಯೋಗಿಸಬೇಕೆಂಬುದರ ಬಗ್ಗೆ ನಿಮಗೆ ವಿವರಿಸಿದೆವು. ಇವತ್ತಿನ ಅಂಕಣದಲ್ಲಿ ಕಾರ್ಯ ಕ್ಷಮತೆಯನ್ನು ಇನ್ನೂ ಬೇರೆ ಅಂಶಗಳ ಮೂಲಕ ಹೋಲಿಸುವ ಪ್ರಯತ್ನ ಮಾಡೋಣ. ಇವುಗಳು ಸಾಮಾನ್ಯವಾಗಿ ಅರ್ಥ ಶಾಸ್ತ್ರದ ಪದಗಳು ಹಾಗಾಗಿ ಇದನ್ನ ಸವಿಸ್ತಾರವಾಗಿ ಮೊದಲು ಅರಿಯುವ.
ನೀರೀಕ್ಷಿತ ಆದಾಯ ಮತ್ತು ನಿಜವಾಗಿ ಲಭಿಸಿದ ಆದಾಯದ ನಡುವಿನ ಸಂಬಂಧಗಳನ್ನು ೩ ರೀತಿಯ ವರ್ಗೀಕರಣ ಮಾಡಬಹುದು.
ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಸಮವಾಗಿದ್ದಲ್ಲಿ ಅದನ್ನು ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
ಕೆಳ- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಕಡಿಮೆಯಾಗಿದ್ದಲ್ಲಿ ಅದನ್ನು ಕೆಳ-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
ಮೇಲು- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಹೆಚ್ಚಾಗಿದ್ದಲ್ಲಿ ಅದನ್ನು ಮೇಲು-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
ನೀರಿಕ್ಷಿಸುವ ಆದಾಯ ಮತ್ತು ನೈಜ ಆದಾಯದ ನಡುವಿನ ಧನಾತ್ಮಕ ಅಂತರವನ್ನು ಆರ್ಥಿಕ ಲಾಭ ಅಥವಾ ಆರ್ಥಿಕ ಕಂದಾಯ ಎಂದು ಕರೆಯುವರು.
ಸಾಮಾನ್ಯವಾಗಿ ಮೇಲು- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಮಾರುಕಟ್ಟೆಯಲ್ಲಿ ಅಥವಾ ಉದ್ಯಮದಲ್ಲಿ ಸ್ಪರ್ಧಾತ್ಮಕ ಲಾಭವನ್ನು ಅನುಭವಿಸುವರು. ಕೇವಲ ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ಸಮಾನತೆಯನ್ನು ಪಡೆಯುವುದು, ಇನ್ನು ಕೆಳ- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ನಷ್ಟವನ್ನು ಅನುಭವಿಸುವುದು.
ಈ ರೀತಿಯ ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯನ್ನು ಅಲಿಯುವುದರಲ್ಲಿ ಇರುವ ಮುಖ್ಯ ಕಷ್ಟವೆಂದರೆ ಆರ್ಥಿಕ ಲಾಭವನ್ನು ಅಳೆಯುವುದು!!
No comments:
Post a Comment