Wednesday, July 20, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೪

ಹಿಂದಿನ ಅಂಕಣದ ಲೆಕ್ಕ ಪತ್ರದ ಚರ್ಚೆಯನ್ನು ಮುಂದುವರಿಸುತ್ತಾ ಇಂದಿನ ಅಂಕಣದಲ್ಲಿ ನಾವು ಎರಡು ವಿಭಾಗಗಳನ್ನು ನೋಡೋಣ. ಚಾಲ್ತಿಯಲ್ಲಿನ ಆಸ್ತಿ ಮತ್ತು ಚಾಲ್ತಿಯಲ್ಲಿನ ಆರ್ಥಿಕ ಬಾಧ್ಯತೆ
ಲೆಕ್ಕ ಪತ್ರವನ್ನು ಒಮ್ಮೆ ಗಮನಿಸಿದಾಗ ನಾವು ಸಾಮಾನ್ಯವಾಗಿ ಎರಡು ಸಂಗತಿಗಳನ್ನು ಕಾಣುವೆವು. ಚಾಲ್ತಿಯ ಆಸ್ತಿ ಮತ್ತು ಚಾಲ್ತಿಯ ಆರ್ಥಿಕ ಬಾಧ್ಯತೆ. ಇವುಗಳನ್ನು ಏಕೆ ಚಾಲ್ತಿಯ ಎಂದು ಕರೆಯುವರು? ಇವರ ಒಳಗಿನ ಅಂಶಗಳನ್ನು ಗಮನಿಸಿದಾಗ ನಮಗೆ ಅರಿವಾಗುವುದು.

ಚಾಲ್ತಿಯ ಆಸ್ತಿ ಸಾಮಾನ್ಯವಾಗಿ ಹಣ (Cash), ಬರಬೇಕಾಗಿರುವ ಆದಾಯಗಳು (Accounts Receivables), ಸರಕುಗಳ ಮೌಲ್ಯ (Inventory) ಇವುಗಳು ಚಾಲ್ತಿಯ ಆಸ್ತಿಯ ಒಳಗೆ ಬರುವುದು. ಸಂದಾಯವಾಗಬೇಕಾಗಿರುವ ಹಣ (Accounts Payable), ಸಾಲದ ಬಡ್ಡಿ ಗಳು (Notes Payable) ಚಾಲ್ತಿಯ ಆರ್ಥಿಕ ಬಾಧ್ಯತೆಯ ಒಳಗೆ ಬರುವುದು.

ಇವೆಲ್ಲ ಅಂಶಗಳು ಒಂದು ವ್ಯಾವಹಾರಿಕ ಅವಧಿಯಲ್ಲಿ (ಅರ್ಥಿಕ ವರ್ಷದಲ್ಲಿ) ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸ್ವರೂಪ ಬದಲಾವಣೆಯನ್ನು ಹೊಂದುತ್ತವೆ, ಇಲ್ಲವೇ ಚಲಾಯಿಸುವ ಕೈಗಳು ಬದಲಾಗುವುವು.ಹಾಗಾಗಿ ಅವುಗಳನ್ನು ಚಾಲ್ತಿಯ ಎಂದು ಕರೆಯುತ್ತಾರೆ, ಅಂದರೆ ಚಾಲ್ತಿಯ ವ್ಯಾವಹಾರಿಕ ವರ್ಷದಲ್ಲಿ ವ್ಯವಹರಿಸಲ್ಪಡುವುದು.

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-4.html

No comments:

Post a Comment