Pages

Wednesday, July 27, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೮

ಈ ಹಿಂದಿನ ಅಂಕಣದಲ್ಲಿ ನಾವು ಒಬ್ಬ ಬಂಡವಾಳದಾರನು ಹೇಗೆ ಲೆಕ್ಕ ಪತ್ರದಲ್ಲಿ ಹಣದ ಮೌಲ್ಯದ ಇರುವಿಕೆಯನ್ನು ನೋಡುವನು ಎಂಬುದನ್ನು ಅರಿತೆವು. ಇಂದು ಸರಕು ಗಳ ಮೌಲ್ಯ ವನ್ನು ಹೇಗೆ ನೋಡುವರು ಎಂದು ಅರಿಯೋಣ.

ಸರಕುಗಳು ಅಂದರೆ ಮೂಲತಹ ಖರೀದಿಸಿದ ಆದರೆ ಉಪಯೋಗಿಸದ ವಸ್ತುಗಳು, ಉತ್ಪಾದಕ ಹಂತದಲ್ಲಿರುವ ವಸ್ತುಗಳು ಮತ್ತು ಉತ್ಪಾದಿಸಿದ ಆದರೆ ಮಾರಾಟವಾಗದ ವಸ್ತುಗಳ ಒಟ್ಟು ಮೌಲ್ಯ. ಒಬ್ಬ ಬಂಡವಾಳದಾರನಾಗಿ ಕಂಪನಿಯ ಹೆಚ್ಚಿನ ಹಣ ಸರಕುಗಳಲ್ಲೇ ಇರದಂತೆ ನೋಡಿಕೊಳ್ಳಲು ಇಷ್ಟ ಪಡುವನು. ಹೆಚ್ಚಿನ ಸರಕುಗಳ ಇರುವಿಕೆಯು ಕಂಪನಿಗೆ ಉದ್ಯಮದ ಕೆಲವೊಂದು ಕೆಟ್ಟ ಸಂಬಂಧಗಳ ಕಾರಣದಿಂದಾಗುವ ಹೊಡೆತಗಳನ್ನುತಡೆದು ಕೊಳ್ಳಲು ಸಹಕಾರಿ ಆದರೆ, ಜೊತೆಗೆ ಕಂಪನಿಯ ಇತರ ಕಂಪನಿಯೋಡಗಿನ ಬೆಲೆಗಳ ಯುದ್ಧದ ಭಾಗವಾದರೂ ಕೂಡ ಒಬ್ಬ ಬಂಡವಾಳದಾರನು ಹೆಚ್ಚಿನ ಸರಕಿನ ಇರುವಿಕೆಯನ್ನು ಹಣವು ಅವುಗಳಲ್ಲಿ ಬಂಧಿಸಲ್ಪಟ್ಟಿದೆ ಎಂದೇ ಅರ್ಥೈಸುವನು.

ಕಂಪನಿಗಳಲ್ಲಿ ಸರಕುಗಳನ್ನು ಇಟ್ಟು ಕೊಳ್ಳಲು ಅತ್ಯಂತ ಕಡಿಮೆ ಖರ್ಚನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಸರಕಿರುವುದು ಅಂದರೆ ನಿಯಮಿತವಾದ ಉತ್ಪನ್ನದ ಮಾರಾಟವಾಗದೇ ಇರುವುದು. ಇದರರ್ಥ ಕಂಪನಿ ನಿಜವಾಗಲು ಒಂದು ಗಂಭಿರವಾದ ಸಮಸ್ಯೆಯೆಡೆಗೆ ಬೀಳುತ್ತಿದೆ ಎಂದು. ಉತ್ಪನ್ನದ ಮಾರಾಟ ಮಾಡಲು ಹೆಚ್ಚಿನ ಸಮಯ ತೆಗೆದು ಕೊಂಡಷ್ಟು, ಹೆಚ್ಚಿನ ಸಮಯ ಸರಕು ಕಂಪನಿಯಲ್ಲಿರುವುದು, ಅಂದರೆ ಹಣದ ಸಂವಹನ ಅಲ್ಲಿಯವರೆಗೆ ನಿಂತಿರುವುದು. ಈ ಸಮಸ್ಯೆ ಕೊನೆಗೆ ಪೂರೈಕೆದಾರರಿಗೆ ಹಣ ಸಂದಾಯ ಮಾಡಲು ಕೂಡ ಹಣವಿಲ್ಲದೆ ಹೋಗಬಹುದು.

ಎಷ್ಟು ಸಲ ಸರಕುಗಳು ಪುನರಾವೃತ್ತಿ ಒಂದು ವರ್ಷದಲ್ಲಿ ಹೊಂದುತ್ತವೆ ಅನ್ನುವುದನ್ನು "ಸರಕಿನ ವಹಿವಾಟಿ"ನ ಮೂಲಕ ಅಳೆಯುವರು. ಇದನ್ನು ಒಟ್ಟು ಮಾರಾಟದ ಮೊತ್ತವನ್ನು ಸರಾಸರಿ ಸರಕಿನ ಮೌಲ್ಯ ದಿಂದ ಭಾಗಿಸಿದಾಗ ಸಿಗುವ ಸಂಖ್ಯೆಯಿಂದ ಅಳೆಯುವರು. ಸರಕಿನ ವಹಿವಾಟು ಹೆಚ್ಚಿದ್ದಲ್ಲಿ ಕಂಪನಿಯ ಉತ್ಪನ್ನದ ಮಾರಾಟಗಾರಿಕೆಯ ವೇಗ ಹೆಚ್ಚಿದೆ ಎಂದರ್ಥ. ಅದಲ್ಲದೆ ಸರಕಿನ ಮೌಲ್ಯ ಮಾರಾಟದ ಮೌಲ್ಯಕ್ಕಿಂದ ವೇಗವಾಗಿ ಹೆಚ್ಚಾದರೆ ಕಂಪನಿಯಲ್ಲಿ ಮೂಲಭೂತ ಸಮಸ್ಯೆಗಳು ಶುರುವಾಯಿತೆಂದು ಅರ್ಥ.

No comments:

Post a Comment