Friday, July 29, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೧೨

ಹಿಂದಿನ ಅಂಕಣಗಳಲ್ಲಿ ನಾವು ಒಬ್ಬ ಬಂಡವಾಳದಾರನು ಹೇಗೆ ಲೆಕ್ಕ ಪತ್ರವನ್ನು ನೋಡುವನು ಮತ್ತು ಹೇಗೆ ಕಂಪನಿಯ ಸ್ಥಿತಿ-ಗತಿಗಳ ಬಗ್ಗೆ ಅರಿಯುವನು ಎಂಬುದನ್ನು ಅರಿತೆವು. ಇನ್ನು ಮುಂದಿನ ಅಂಕಣಗಳಲ್ಲಿ ನಾವು ಕೆಲವು ಅನುಪಾತ ಲೆಕ್ಕಾಚಾರಗಳಿಂದ ಲೆಕ್ಕ ಪತ್ರದ ಬಗ್ಗೆ ಹೇಗೆ ಅಧ್ಯಯನ ನಡೆಸುವರು ಎಂದು ಅರಿಯೋಣ. ಇಂದಿನ ಅಂಕಣದಲ್ಲಿ ಅನುಪಾತದ ಅಧ್ಯಯನದ ಅಗತ್ಯವನ್ನು ಕುರಿತು ಚರ್ಚಿಸೋಣ.

ಇವುಗಳನ್ನುಅಕೌಂಟಿಂಗ್ ಅನುಪಾತ ಎಂದು ಕರೆಯುವರು. ಇವು ವಿವಿಧ ಲೆಕ್ಕ ಪತ್ರದ ವಿಭಾಗಗಳ ಬೆಲೆಗಳ ನಡುವಿನ ಸಂಬಂಧಗಳನ್ನು ತಿಳಿಸುವುದು. ಒಂದು ಲೆಕ್ಕ ಪತ್ರ ಕೊಟ್ಟಿದ್ದಲ್ಲಿ ಕಂಪನಿಯ ಬಗ್ಗೆ ಅದರಲ್ಲಿನ ಮೌಲ್ಯಗಳ ಮೂಲಕ ಮಾತ್ರ ಅರಿಯುವುದು ಸಮಂಜಸವೆನಿಸದು. ಒಂದು ವಿಭಾಗದ ಸಂಬಂಧ ಇನ್ನೊಂದು ವಿಭಾಗದೊಡನೆ ಹೇಗೆ ಇರುವದೆಂದು ಅನುಪಾತಗಳ ಮೂಲಕ ಅರಿತಾಗ ಇನ್ನು ಕೂಲಂಕುಷವಾದ ಅರಿವು ಸಿಗುವುದು.

ಅನುಪಾತ ಅಧ್ಯಯನದ ಲಾಭಗಳು
. ಕಂಪನಿಯ ವ್ಯವಸ್ಥಾಪಕರಿಗೆ ಕಂಪನಿಯ ಆದಾಯ ಗಳಿಸುವ ಸಾಮರ್ಥ್ಯವನ್ನು ಅರಿಯಲು ಸಹಕರಿಸುವುದು.
. ಕಂಪನಿಯ ದಿವಾಳಿತನ ಹೊಂದದಿರುವಿಕೆಯನ್ನು ತಿಳಿಸುವುದು.
. ಹಲವಾರು ವರ್ಷಗಳ ಅಧ್ಯಯನ ಮಾಡಲು ಸಹಕರಿಸುವುದು.
. ಲೆಕ್ಕ ಪತ್ರದ ಮಾಹಿತಿಗಳನ್ನು ಸರಳಗೊಳಿಸುವುದು.
. ಕಾರ್ಯ ನಿರ್ವಹಣೆಯ ಗುಣಮಟ್ಟದ ಅಳೆಯುವುದು.
. ಭವಿಷ್ಯದ ಬಗ್ಗೆ ನಿರ್ಧರಿಸಲು ಸಹಕಾರಿಯಾಗುವುದು.

ಹೀಗಿದ್ದರೂ ಇದರ ಕೆಲವೊಂದು ಮಿತಿಗಳಿವೆ.
. ಲೆಕ್ಕ ಪತ್ರ ನಿರ್ವಹಣೆಯ ವೈವಿಧ್ಯತೆ ಯಿರುವ ಸಂದರ್ಭಗಳಲ್ಲಿ ಕಂಪನಿಗಳ ನಡುವೆ ಹೋಲಿಸಲು ಇವು ಸಹಕಾರಿಯಾಗದು.
. ನಿಖರವಾದ ಅಂಕಿ ಅಂಶಗಳು ಗೊತ್ತಗುವವರೆಗೆ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-12.html

No comments:

Post a Comment