Pages

Wednesday, July 20, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೬

ಹಿಂದಿನ ಅಂಕಣದಲ್ಲಿ ನಾವು ಲೆಕ್ಕ ಪತ್ರದ ವಿಭಾಗಗಳ ಬಗ್ಗೆ ಹೇಳಿದೆವಷ್ಟೇ, ಆದರೆ ಅವುಗಳ ಬಗ್ಗೆ ವಿವರಣೆ ನೀಡಿರಲಿಲ್ಲ. ಇಂದು ಅವುಗಳನ್ನು ಸಾಮಾನ್ಯ ಭಾಷೆಯಲ್ಲಿ ಅರಿಯುವ ಯತ್ನ ಮಾಡೋಣ. ಜೊತೆಗೆ ತಾರ್ಕಿಕ ಹಿನ್ನಲೆಯನ್ನು ತಿಳಿಯೋಣ.

  • ಹಣ - ಕಂಪನಿಯಲ್ಲಿರುವ ಹಣದ ರೂಪದ ಸಂಪತ್ತಿಗೆ ಹಣ ಅಂದು ಕರೆಯುವರು.
  • ಬರಬೇಕಾದ ಆದಾಯಗಳು - ಗ್ರಾಹಕರಿಗೆ ಕೊಟ್ಟ ಬಿಲ್ ಗಳಿಂದ ಬರಬೇಕಾದ ಆದಾಯ.
  • ಸರಕುಗಳ ಮೌಲ್ಯ - ಕಂಪನಿಯಲ್ಲಿ ತಯಾರಿಸಿದ ಆದರೆ ಮಾರದೆ ಇರುವ ಉತ್ಪನ್ನಗಳು ಮತ್ತು ಇತರ ಸರಕುಗಳು ಮತ್ತು ವಸ್ತುಗಳ ಒಟ್ಟು ಮೌಲ್ಯ.
  • ಸಂದಾಯಿಸಲಿರುವ ಬಾಕಿಗಳು - ಪೂರೈಕೆದಾರನಿಗೆ ಅವನ ಸರಕಿಗೆ ಅಥವಾ ಸೇವೆಗೆ ನೀಡಿದ ಬಿಲ್ ಗಳಲ್ಲಿ ಬಾಕಿ ಕೊಡಲು ಇರುವ ಹಣ.
  • ಧೀರ್ಘ ಕಾಲೀನ ಸಾಲಗಳು - ಕಂಪನಿಯನ್ನು ಮುನ್ನಡೆಸಲು ಬ್ಯಾಂಕ್ ಗಳಿಂದ ತೆಗೆದುಕೊಂಡ ಧೀರ್ಘ ಕಾಲೀನ ಸಾಲಗಳು
  • ಮಾಲಿಕರ ಬಂಡವಾಳ - ಆರಂಭಿಕವಾಗಿ ಕಂಪನಿಯ ಮಾಲೀಕರು ಒಗ್ಗೂಡಿಸಿದ ಬಂಡವಾಳ (ಮುಂದಿನ ಹಂತದಲ್ಲಿ ಶೇರು ದಾರರ ಹಣ).
ಆಂಗ್ಲ ಅಂಕಣ:
http://somanagement.blogspot.com/2011/07/finance-and-management-6.html

No comments:

Post a Comment